ಗೋಣಿಕೊಪ್ಪಲು, ಜೂ.೮: ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ಎಬ್ಬಿಸುತ್ತಿದ್ದ ಕಾಡಾನೆ ಹಿಂಡನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಮಾಯಮುಡಿ ಸಮೀಪದ ಬೆಮ್ಮತ್ತಿಯ ಎಸ್ಟೇಟ್ನಲ್ಲಿದ್ದ ೧೪ ಕಾಡಾನೆಗಳು ಇದೀಗ ಕಾಡು ಸೇರಿವೆ.
ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮತ್ತಿಯ ರಾಧ ಅಚ್ಚಯ್ಯ ಅವರಿಗೆ ಸೇರಿದ ಕಾಫಿ ತೋಟದಲ್ಲಿ ೧೪ ಕಾಡಾನೆಗಳ ಹಿಂಡು ಬೀಡು ಬಿಟ್ಟಿರುವುದನ್ನು ಖಚಿತ ಪಡಿಸಿಕೊಂಡ ತಿತಿಮತಿ ಆರ್ಆರ್ಟಿ ವಲಯದ ದೇವಮಚ್ಚಿ ಅರಣ್ಯ ಸಿಬ್ಬಂದಿಗಳ ತಂಡ ಮುಂಜಾನೆ ಯಿಂದಲೇ ಕಾಡಾನೆಯನ್ನು ಸಮೀಪದ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಗೆ ಮುಂದಾಯಿತು.
ವಿಸ್ತಾರವಾದ ಕಾಫಿ ತೋಟಕ್ಕೆ ಹೊಂದಿಕೊAಡAತೆ ಅರಣ್ಯ ಪ್ರದೇಶವಿದ್ದು ಸಮೀಪದಲ್ಲಿಯೇ ಬೃಹತ್ ಗಾತ್ರದ ಕೆರೆಯು ಈ ಹಿಂದೆಯೇ ನಿರ್ಮಾಣವಾಗಿದೆ. ಹೀಗಾಗಿ ಕಾಡಿನಲ್ಲಿ ಸಮಯ ಕಳೆಯುತ್ತಿರುವ ಕಾಡಾನೆಯ ಹಿಂಡು ಆಹಾರಕ್ಕಾಗಿ ಸಮೀಪದ ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿತ್ತು. ಕುಡಿಯಲು ಸಮೀಪದ ಕೆರೆ
ನೀರನ್ನು ಬಳಸಿಕೊಂಡು ಆಹಾರವು ಪ್ರತಿನಿತ್ಯ ಕಾಡಾನೆಗಳಿಗೆ ಲಭಿಸುತ್ತಿರುವುದರಿಂದ ಈ ಕಾಫಿ ತೋಟವನ್ನು ಬಿಟ್ಟು ಬೇರೆ ಭಾಗಕ್ಕೆ ಕಾಡಾನೆಗಳ ಹಿಂಡು ಕದಲುತ್ತಿರಲಿಲ್ಲ. ೧೩ ಕಾಡಾನೆ ಗಳೊಂದಿಗೆ ಒಂದು ಮರಿಯು ಕಂಡು ಬಂದ ತಕ್ಷಣ ಅರಣ್ಯ ಸಿಬ್ಬಂದಿಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಗುಂಪಿ ನಲ್ಲಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕೆಲಸದಲ್ಲಿ ತೊಡಗಿಸಿ ಕೊಂಡರು.
(ಮೊದಲ ಪುಟದಿಂದ) ತೋಟದಲ್ಲಿ ಕಂಡು ಬಂದ ಕಾಡಾನೆಗಳ ಹಿಂಡನ್ನು ಚದುರಿಸಲು ಹಾಗೂ ಸಮೀಪದ ಜಂಗಲಾಡಿ ಅರಣ್ಯ ಪ್ರದೇಶಕ್ಕೆ ಕಾಡಾನೆಗಳ ಗುಂಪನ್ನು ಅಟ್ಟಲು ತೋಟದ ಕಾರ್ಮಿಕರ ಸಹಾಯ ಪಡೆದ ಅರಣ್ಯ ಸಿಬ್ಬಂದಿಗಳು ಆನೆ ಕಾರ್ಯಾಚರಣೆ ಪಡೆ ಹಾಗೂ ವನ್ಯಜೀವಿ ಎಪಿಸಿ ತಂಡದ ೧೫ಕ್ಕೂ ಅಧಿಕ ಸಿಬ್ಬಂದಿಗಳು ತೋಟದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಪಟಾಕಿ ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿ, ಬೊಬ್ಬೆ ಹಾಕಿ ಅಲ್ಲಿಂದ ಅರಣ್ಯ ಪ್ರದೇಶದತ್ತ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರಣ್ಯ ಪ್ರದೇಶಕ್ಕೆ ತೆರಳಿರುವ ಕಾಡಾನೆಗಳು ಮತ್ತೆ ತೋಟದತ್ತ ಲಗ್ಗೆ ಇಡಬಹುದೆಂಬ ನಿರೀಕ್ಷೆಯಲ್ಲಿರುವ ಅರಣ್ಯ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮವಾಗಿ ತೋಟದ ಸುತ್ತಮುತ್ತಲಿನಲ್ಲಿ ಗಸ್ತು ಕಾರ್ಯ ಕೈಗೊಂಡಿದ್ದಾರೆ. ಬೆಮ್ಮತ್ತಿ ತೋಟದಲ್ಲಿ ಕಂಡು ಬಂದ ಕಾಡಾನೆಗಳ ಹಿಂಡನ್ನು ಸಮೀಪದ ಕೋಳೆರ ರಾಣಿ ಎಂಬವರ ತೋಟವನ್ನು ದಾಟಿಸಿ ತಿತಿಮತಿ ವನ್ಯಜೀವಿ ವಿಭಾಗಕ್ಕೆ ಸೇರಿರುವ ಜಂಗಲಾಡಿ ಅರಣ್ಯ ಪ್ರದೇಶಕ್ಕೆ ಅಟ್ಟಲಾಯಿತು.
ಈ ಭಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ನೆಲೆ ನಿಂತಿರುವುದರಿAದ ಹಾಗೂ ತೋಟದಲ್ಲಿ ಬೇಕಾದ ಆಹಾರ ಪದಾರ್ಥಗಳು, ಕುಡಿಯಲು ನೀರು ಸಮರ್ಪಕವಾಗಿ ಲಭಿಸುತ್ತಿರುವುದರಿಂದ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟದತ್ತ ಸಾಗುತ್ತಿವೆ. ಈ ಭಾಗದಲ್ಲಿ ಸಂಜೆಯ ೬ ಗಂಟೆ ನಂತರ ಯಾರೂ ಕೂಡ ಓಡಾಟ ನಡೆಸುತ್ತಿಲ್ಲ. ಇದರಿಂದ ಕಾಡಾನೆಗಳು ಮಾನವನ ಯಾವುದೇ ಸಂಚಾರ ಇಲ್ಲದಿರುವುದರಿಂದ ಸಹಜವಾಗಿಯೇ ಸ್ವಚ್ಛಂದವಾಗಿ ತೋಟದಲ್ಲಿ ಬೀಡುಬಿಟ್ಟಿವೆ.-ಹೆಚ್.ಕೆ.ಜಗದೀಶ್