ಗೋಣಿಕೊಪ್ಪ, ಜೂ. ೮: ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಕರ್ನಾಟಕ ರಾಜ್ಯ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ ನೂರು ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡುವಂತೆ ಯುನೈಟೆಡ್ ಕೊಡವ ಆರ್ಗನೈಜೇಷನ್ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಒತ್ತಾಯಿಸಿದ್ದಾರೆ.

ಈಗಾಗಲೇ ಸಿದ್ಧರಾಮಯ್ಯ ನೇತೃತ್ವದಲ್ಲಿ ನೂತನವಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಇದೇ ಜುಲೈ ೩ ರಿಂದ ಬಜೆಟ್ ಅಧಿವೇಶನ ನಡೆಯಲಿದೆ. ಜುಲೈ ೭ ರಂದು ನೂತನ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ವ ತಯಾರಿ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತುತ ಬಜೆಟಿನಲ್ಲಿಯೇ ಕೊಡವ ಜನಾಂಗದ ಬಹುದಿನಗಳ ಬೇಡಿಕೆಯಾದ ಹಾಗೂ ಅಧಿಕೃತವಾಗಿ ಆದೇಶವಾಗಿರುವ ಕರ್ನಾಟಕ ರಾಜ್ಯ ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ೧೦೦ ಕೋಟಿ ರೂಪಾಯಿಗಳ ಮೂಲ ಅನುದಾನ ವನ್ನು ಮೀಸಲಿಡುವಂತೆ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೊಡಗು ಜಿಲ್ಲೆಯ ವೀರಾಜಪೇಟೆ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆ ಯಾಗಿರುವ ಎ.ಎಸ್. ಪೊನ್ನಣ್ಣ, ಮೊದಲಿನಿಂದಲೂ

(ಮೊದಲ ಪುಟದಿಂದ) ಕೊಡವ ಅಭಿವೃದ್ಧಿ ನಿಗಮಕ್ಕೆ ನೈತಿಕ ಬೆಂಬಲ ನೀಡುತ್ತಾ ಬಂದಿದ್ದು, ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿಯೂ ಕೊಡವ ಅಭಿವೃದ್ಧಿ ನಿಗಮ' ಸ್ಥಾಪಿಸುವ ಭರವಸೆಯನ್ನು ನೀಡಿದ್ದಾರೆ. ಆದರೆ ಕೊನೇ ಗಳಿಗೆಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು "ಕರ್ನಾಟಕ ರಾಜ್ಯ ಕೊಡವ ಅಭಿವೃದ್ಧಿ ನಿಗಮ" ಸ್ಥಾಪನೆಗೆ ಅಧಿಕೃತ ಆದೇಶವನ್ನು ಮಾಡಿದ್ದಾರೆ. ಈ ಆದೇಶವನ್ನು ಪರಿಗಣಿಸಿ ನೂತನವಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ, ಆಡಳಿತ ಮಂಡಳಿಯನ್ನು ರಚಿಸಿ, ಅನುದಾನ ಬಿಡುಗಡೆ ಮಾಡುವ ಕೆಲಸ ನೂತನ ಸರ್ಕಾರದಿಂದ ಆಗಬೇಕಾಗಿದೆ. ಈ ನಿಟ್ಟಿನಲ್ಲಿ, ಪ್ರಭಾವಿ ಶಾಸಕರಾಗಿರುವ ಪೊನ್ನಣ್ಣ ಅವರು ಮುತುವರ್ಜಿ ವಹಿಸಿ, ಪ್ರಸ್ತುತ ಬಜೆಟಿನಲ್ಲಿಯೇ ‘ಕೊಡವ ಅಭಿವೃದ್ಧಿ ನಿಗಮ' ಸ್ಥಾಪಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದಿಂದ ಏನಾದರೂ ಕೊಡವರಿಗೆ ಮಾಡಬೇಕಾದರೆ ಅದು ಅಭಿವೃದ್ಧಿ ನಿಗಮದ ಮೂಲಕ ಮಾತ್ರವವೇ ಸಾಧ್ಯ. ರಾಜ್ಯ ಸರ್ಕಾರದ ವಿವಿದ ಯೋಜನೆಗಳಿಂದ ನೇರವಾಗಿ ಪ್ರಯೋಜವನ್ನು ಪಡೆದುಕೊಳ್ಳುವಲ್ಲಿ ಕೊಡವರಿಗೆ ಸಾಧ್ಯವಿಲ್ಲ. ಕಾರಣ ಅವುಗಳ ಮಾನದಂಡಗಳಿಗೆ ಕೊಡವರು ಒಳಪಡುವುದಿಲ್ಲ. ಆದ್ದರಿಂದ ಸರ್ಕಾರದ ಬಹುತೇಕ ಯೋಜನೆಗಳು ಕೊಡವರನ್ನು ತಲುಪುವಲ್ಲಿ ವಿಫವಾಗಿವೆ. ಆದರೆ 'ಕೊಡವ ಅಭಿವೃದ್ಧಿ ನಿಗಮ' ಮುಖಾಂತರ, ಕೊಡವ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ನೇರವಾಗಿ ಕಾರ್ಯಯೋಜನೆಯನ್ನು ರೂಪಿಸುವುದರ ಮೂಲಕ ಪ್ರತಿಯೊಬ್ಬ ಕೊಡವರನ್ನೂ ತಲುಪಬಹುದಾಗಿದೆ ಎಂದರು. ಗೋಷ್ಠಿಯಲ್ಲಿ ಸದಸ್ಯರಾದ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಜಫ್ರಿ ಮಾದಯ್ಯ ಇದ್ದರು.