ಕೂಡಿಗೆ, ಜೂ. ೭: ಕಾವೇರಿಯ ತವರಾದ ಕೊಡಗು ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಿದ್ದು, ಇದೀಗ ಜಿಲ್ಲೆಯ ಏಕೈಕ ಅಣೆಕಟ್ಟು ಹಾರಂಗಿಯಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿರುವುದು ನಿದರ್ಶನವಾಗಿದೆ. ಮಳೆಯಾಗದಿದ್ದಲ್ಲಿ ಡ್ಯಾಂ ನೀರು ಬತ್ತಿಹೋಗುವ ಆತಂಕ ತಲೆದೋರಿದೆ.
ಕಳೆದ ವರ್ಷಕ್ಕಿಂತ ೪ ಟಿಎಂಸಿಯಷ್ಟು ನೀರಿನ ಮಟ್ಟ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯಲ್ಲಿ ಕೆರೆಯಂತೆ ನೀರು ನಿಂತಿರುವ ದೃಶ್ಯ ಕಳವಳ ಮೂಡಿ ಸುತ್ತಿದೆ. ಹಾರಂಗಿಯಿAದ ಕೊಡಗು ಮಾತ್ರವಲ್ಲದೆ ಬಯಲುಸೀಮೆ ಜಿಲ್ಲೆಗಳಿಗೂ ಸಹಕಾರಿಯಾಗುತಿತ್ತು. ಆದರೆ, ಇದೀಗ ಹಾರಂಗಿಯಲ್ಲಿನ ಚಿತ್ರಣ ರೈತಾಪಿ ವರ್ಗ ಸೇರಿದಂತೆ ಜನರನ್ನು ಚಿಂತಾಕ್ರಾAತಗೊಳಿಸಿದೆ.
ಕಳೆದ ವರ್ಷ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಮಳೆ ಕೃಪೆ ತೋರಿದ ಕಾರಣಕ್ಕೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಮಟ್ಟದಲ್ಲಿ ಏರಿಕೆ ಇತ್ತು. ಆದರೆ ಈ ಸಾಲಿನಲ್ಲಿ ಜೂನ್ ತಿಂಗಳು ಬಂದರು ಸಹ ಮಳೆ ಬೀಳದಿರುವುದು, ದಿನಕಳೆದಂತೆ ಬಿಸಿಲಿನ ತಾಪಮಾನದಲ್ಲಿ ಹೆಚ್ಚಳವಾದ ಪರಿಣಾಮ ಅಣೆಕಟ್ಟೆಯ ನೀರಿನ ಮಟ್ಟ ಇಳಿಕೆಯಾಗಿದೆ. ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕೆರೆಕಟ್ಟೆಗಳ ತುಂಬಿಸುವ ಮೂಲಕ ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಮತ್ತು ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾದ ಹಿನ್ನೆಲೆಯಲ್ಲಿ ನದಿಗೂ ಸಹ ಹಾರಂಗಿಯ ಅಣೆಕಟ್ಟೆಯ ನೀರನ್ನು ಹರಿಸಲಾಗಿದೆ. ಇದು ಕೂಡ ನೀರು ಕ್ಷೀಣಿಸಲು ಒಂದು ಕಾರಣವಾಗಿದೆ.
ಹಾರಂಗಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದಲ್ಲಿ ಇದುವರೆಗೂ ಮಳೆಯು ಬೀಳದೆ ಇರುವ ಕಾರಣದಿಂದಾಗಿ ಕೆರೆ- ಕಟ್ಟೆಗಳಿಗೆ ನಾಲೆಯ ೩ಮೂರನೇ ಪುಟಕ್ಕೆ
(ಮೊದಲ ಪುಟದಿಂದ) ಮೂಲಕ ಸಣ್ಣ ಪ್ರಮಾಣದಲ್ಲಿ ನೀರನ್ನು ಹರಿಸುವಂತೆ ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ಸಂಬAಧಿಸಿದ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿದ್ದಾರೆ. ಅದರಂತೆ ರೈತರ ಮನವಿ ಮೇರೆಗೆ ಆದ್ಯತೆಯ ಅನುಗುಣವಾಗಿ ನೀರನ್ನು ಹರಿಸುವ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಅಧಿಕಾರಿಗಳು ಮುಂದಾಗಿದ್ದಾರೆ.
ಈ ಸಾಲಿನ ಜೂನ್ ಮೊದಲ ವಾರ ಕಳೆದರೂ ಸಹ ಅಣೆಕಟ್ಟೆಯ ಜಲಾಶಯದ ಮೇಲ್ಬಾಗದ ಪ್ರದೇಶಗಳಲ್ಲಿ ಮಳೆ ಬೀಳದ ಕಾರಣದಿಂದಾಗಿ ಹಾರಂಗಿಯಲ್ಲಿ ನೀರಿನ ಸಂಗ್ರಹ ಪ್ರಮಾಣ ಕ್ಷೀಣಗೊಂಡಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯು ಜಲಾನಯನ ಪ್ರದೇಶದಲ್ಲಿ ಬಿದ್ದು ಅಣೆಕಟ್ಟೆಗೆ ನೀರು ಬಂದಲ್ಲಿ ಮುಂದಿನ ಬೇಸಾಯಕ್ಕೆ ಅನುಕೂಲವಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಅಣೆಕಟ್ಟೆಯ ಭದ್ರತೆಯ ಹಿತದೃಷ್ಟಿಯಿಂದ ಇರುವ ನೀರು ಉಪಯೋಗಿಸುವ ಮೂಲಕ ಸೋಮವಾರಪೇಟೆಗೆ ಮತ್ತು ಸಮೀಪ ಅತ್ತೂರು ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯ ನೀರಿನ ಸಂಗ್ರಹ ಮಾಡುವ ಮೂಲಕ ಅಣೆಕಟ್ಟೆಯಲ್ಲಿ ಸಂಗ್ರಹಿಸಿ, ಅದ್ಯತೆಯ ಅನುಗುಣವಾಗಿ ನೀರಾವರಿ ಇಲಾಖೆಯ ಸೂಚನೆಯಂತೆ ಬೇಸಾಯಕ್ಕೆ, ಮತ್ತು ನದಿಗೆ ಹರಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಕಾರ್ಯಪಾಲಕ ಅಭಿಯಂತರ. ಪುಟ್ಟಸ್ವಾಮಿ ತಿಳಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.