ಮಡಿಕೇರಿ, ಜೂ. ೭: ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ತಾ.೧೧ರಿಂದ ಜಾರಿಯಾಗಲಿದೆ. ಇದರಿಂದಾಗಿ ಖಾಸಗಿ ಬಸ್‌ಗಳನ್ನೇ ನಂಬಿ ಬದುಕುತ್ತಿರುವ ಮಾಲೀಕರು ಹಾಗೂ ಕಾರ್ಮಿಕರ ಶಕ್ತಿ ಕುಗ್ಗಿ ಹೋಗುವ ಲಕ್ಷಣಗಳು ಕಂಡು ಬರುತ್ತಿದೆ. ಗುಡ್ಡಗಾಡು ಪ್ರದೇಶ ವಾಗಿರುವ ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು ೧೩೦ ಬಸ್‌ಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿವೆ. ಈ ಬಸ್‌ಗಳನ್ನು ನಂಬಿ ಸುಮಾರು ೬೫೦ ಸಿಬ್ಬಂದಿಯ ಕುಟುಂಬಗಳು ಜೀವನ ಸಾಗಿಸುತ್ತಿವೆ. ಶಾಲಾ ಮಕ್ಕಳು, ಉದ್ಯೋಗಿಗಳನ್ನು, ಸಾರ್ವಜನಿಕರನ್ನು ನಂಬಿಕೊAಡು ಖಾಸಗಿ ಬಸ್‌ಗಳು ಸಂಚಾರ ಮಾಡುತ್ತಿವೆ. ಇದೀಗ ರಾಜ್ಯ ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಶಕ್ತಿ ಯೋಜನೆಯನ್ನು ಜಾರಿ ಮಾಡುತ್ತಿರುವುದು ಖಾಸಗಿ ಬಸ್ ೩ಮೂರನೇ ಪುಟಕ್ಕೆ
(ಮೊದಲ ಪುಟದಿಂದ) ಮಾಲೀಕರು ಹಾಗೂ ಕಾರ್ಮಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಹುತೇಕ ಗ್ರಾಮೀಣ ಭಾಗಗಳಲ್ಲೂ ಸರ್ಕಾರಿ ಬಸ್‌ಗಳ ಸಂಚಾರದಿAದ ಸರ್ಕಾರಿ ಬಸ್‌ಗಳ ಪೈಪೋಟಿಯಿಂದಾಗಿ ಮೊದಲೇ ನಷ್ಟದಲ್ಲಿರುವ ಖಾಸಗಿ ಬಸ್ ಮಾಲೀಕರು ಹಾಗೂ ಅದನ್ನೇ ನಂಬಿಕೊAಡಿರುವ ಕಾರ್ಮಿಕರಿಗೆ ಈ ಯೋಜನೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಖಾಸಗಿಯವರನ್ನು ಮುಗಿಸುವ ಯತ್ನ: ಸರ್ಕಾರ ಒಂದು ಕಡೆಯಿಂದ ಖಾಸಗೀಕರಣಕ್ಕೆ ಉತ್ತೇಜನ ನೀಡುತ್ತದೆ. ಮತ್ತೊಂದು ಕಡೆಯಿಂದ ಇಂತಹ ಯೋಜನೆಗಳನ್ನು ಜಾರಿಗೊಳಿಸಿ ಖಾಸಗಿ ಕ್ಷೇತ್ರದವರನ್ನು ಮುಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಆರೋಪಿಸಿದ್ದಾರೆ.
ಸರ್ಕಾರ ಘೋಷಿಸಿರುವ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಜನೆ ಬಗ್ಗೆ ‘ಶಕ್ತಿ’ ಅವರ ಅಭಿಪ್ರಾಯ ಬಯಸಿದಾಗ ಮಾತನಾಡಿದ ಅವರು, ಸರ್ಕಾರದ ಬೇರೆ ಯೋಜನೆಗಳೆಲ್ಲವೂ ಸರಿ. ಆದರೆ, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಎಂದು ಘೋಷಿಸುವಾಗ ಖಾಸಗಿ ಬಸ್‌ಗಳನ್ನು ನಂಬಿಯೂ ಬದುಕುತ್ತಿರುವವರೂ ಇದ್ದಾರೆ ಎಂಬುದನ್ನು ಸರ್ಕಾರ ಯೋಚಿಸಬೇಕಿತ್ತು ಎಂದು ರಮೇಶ್ ಜೋಯಪ್ಪ ಹೇಳಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಶಾಲಾ ಮಕ್ಕಳಿಗೆ ರಿಯಾಯಿತಿ ನೀಡಲಾಗುತ್ತಿದೆ, ಪ್ರತಿನಿತ್ಯ ಪ್ರಯಾಣ ಮಾಡುವ ಉದ್ಯೋಗಿಗಳಿಗೂ ರಿಯಾಯಿತಿ ಕೊಡಲಾಗುತ್ತಿದೆ. ಆದರೆ, ನಮಗೆ ಸರ್ಕಾರದಿಂದ ಯಾವುದೇ ಮರುಪಾವತಿ ಇಲ್ಲ. ಹೀಗಿರುವಾಗ ಇಂತಹ ಯೋಜನೆಗಳು ಮತ್ತಷ್ಟು ಸಂಕಷ್ಟ ತಂದೊಡ್ಡುತ್ತವೆ. ನಮಗೂ ಸರ್ಕಾರ ಮರುಪಾವತಿ ನಿಯಮ ಜಾರಿ ಮಾಡಿದರೆ ನಾವೂ ಕೂಡ ಉಚಿತವಾಗಿಯೋ ಅಥವಾ ರಿಯಾಯಿತಿ ದರದಲ್ಲಿಯೋ ಸೇವೆ ನೀಡಬಹುದು. ಸರ್ಕಾರದ ಈ ಉಚಿತ ಪ್ರಯಾಣ ಯೋಜನೆ ಸಂಬAಧ ರಾಜ್ಯಮಟ್ಟದಲ್ಲಿ ಖಾಸಗಿ ಬಸ್ ಸಂಘಟನೆಯಿAದ ನಮಗೂ ಕೂಡ ಉಚಿತ ಪಯಣ ಯೋಜನೆ ಅಳವಡಿಸಿಕೊಳ್ಳಲು ಅವಕಾಶ ಕೊಟ್ಟು ವರ್ಷಕ್ಕೊಮ್ಮೆ ಸರ್ಕಾರದಿಂದ ೧೨೦೦ ಕೋಟಿ ಹಣ ಪಾವತಿ ಮಾಡುವಂತೆ ಬೇಡಿಕೆ ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೆಲವು ಕಡೆ ಕೇವಲ ಖಾಸಗಿ ಬಸ್‌ಗಳು ಮಾತ್ರ ಸಂಚರಿಸುತ್ತಿವೆ, ಹೀಗಿರುವಾಗ ಅಲ್ಲಿನ ಮಹಿಳೆಯರಿಗೆ ಸರ್ಕಾರ ಅನ್ಯಾಯ ಮಾಡಿದಂತಾಗುವುದಿಲ್ಲವೇ ಎಂದು ಪ್ರಶ್ನಿಸಿದ ರಮೇಶ್ ಜೋಯಪ್ಪ ಸರ್ಕಾರದ ಈ ನಿರ್ಣಯ ಸರಿಯಾದುದ್ದಲ್ಲ ಎಂದು ಅಭಿಪ್ರಾಯಿಸಿದ್ದಾರೆ.