ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು, ಜೂ. ೬ : ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಗಂಡು ಮರಿಗೆ ಜನ್ಮ ನೀಡಿದ್ದ ‘ನಾಗರಹೊಳೆ ೨೩ ಎಸ್.೨೦’ ಎಂಬ ಗಂಡು ಹುಲಿಯು ಇತ್ತೀಚೆಗೆ ದ.ಕೊಡಗಿನ ಬೆಳ್ಳೂರು ಗ್ರಾಮದಲ್ಲಿ ಸಿಸಿ ಕ್ಯಾಮರಾಗೆ ಸೆರೆಯಾಗಿದೆ ಎಂದು ದೃಢಪಟ್ಟಿದೆ. ಸಿಸಿ ಕ್ಯಾಮರಾಗೆ ಸೆರೆಯಾದ ಹುಲಿಯ ಚಿತ್ರವನ್ನು ಉನ್ನತ ಅಧಿಕಾರಿಗೆ ಕಳುಹಿಸಿದ ನಂತರ ಎಸ್.೨೦ ಹುಲಿಯೆಂದು ತಜ್ಞರು ದೃಢಪಡಿಸಿದ್ದಾರೆ. ದ.ಕೊಡಗಿನ ವಿವಿಧ ಭಾಗಗಳ ಹುಲಿಯ ದಾಳಿಗೆ ರೈತರ ಜಾನುವಾರುಗಳು ಮೃತಪಟ್ಟ ಹಿನ್ನೆ ಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹುಲಿಯ ಚಲನವಲನ ಗಳನ್ನು ಕಂಡು ಹಿಡಿಯುವ ಸಲುವಾಗಿ ಬೆಳ್ಳೂರು ಹಾಗೂ ಬಲ್ಯಮುಂಡೂರು ಗ್ರಾಮದಲ್ಲಿ ಈ ಹಿಂದೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದರು.

ಸಿಸಿ ಕ್ಯಾಮರಾದಲ್ಲಿ ಹುಲಿಯ ಸಂಚಾರದ ಚಿತ್ರಗಳು ಸೆರೆಯಾಗಿದ್ದು, ಸೆರೆಯಾದ ಹುಲಿಯ ಚಿತ್ರಗಳ ಮಾಹಿತಿ ಖಚಿತಪಡಿಸಲು ಇತ್ತೀಚೆಗೆ ಬೆಂಗಳೂರಿನ (ಮೊದಲ ಪುಟದಿಂದ) ತಜ್ಞರಿಗೆ ಕಳುಹಿಸಿಕೊಟ್ಟ ತರುವಾಯ ಇದನ್ನು ‘ನಾಗರಹೊಳೆ-೨೩ ಎಸ್.೨೦’ ಎಂದು ಗುರುತು ಹಚ್ಚಿದ್ದಾರೆ. ಸುಮಾರು ೩ರಿಂದ ೪ ವರ್ಷ ಪ್ರಾಯದ ಗಂಡು ಹುಲಿಯೊಂದು ಖಚಿತಪಡಿಸಿರುವ ನುರಿತ ತಜ್ಞರು ಸಂಬAಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಳೆದ ೩, ೪ ವರ್ಷಗಳ ಹಿಂದೆ ‘ನಾಗರಹೊಳೆ ೨೩’ ಯಲ್ಲಿ ಹೆಣ್ಣು ಹುಲಿಯೊಂದು ಜನ್ಮ ನೀಡಿದ್ದು, ಈ ಹುಲಿಯ ಬಗ್ಗೆ ಮಾಹಿತಿ ತಿಳಿದ ನಂತರ ಇದನ್ನು ‘ಎಸ್.೨೦’ ಎಂದು ಗುರುತಿಸಿ ನಾಮಕರಣ ಮಾಡಲಾಗಿತ್ತು.

‘ಎಸ್.೨೦’ ಎಂದು ಗುರುತಿಸಲಾಗಿರುವ ಅದೇ ಗಂಡು ಹುಲಿಯು ದ.ಕೊಡಗಿನ ಭಾಗದಲ್ಲಿ ಇದೀಗ ಕಾಣಿಸಿಕೊಂಡಿದೆ. ನಾಗರಹೊಳೆ ರಾಷ್ಟಿçÃಯ ಉದ್ಯಾನವನದಿಂದ ತನ್ನ ಟೆರಿಟರಿ ಅನ್ನು ಗುರುತು ಹಚ್ಚುವ ಸಲುವಾಗಿ ಈ ಹುಲಿಯು ಈ ಭಾಗದಿಂದ ಸಂಚರಿಸಿರಬಹುದೆAದು ಅಂದಾಜಿಸಲಾಗಿದೆ. ಬಲ್ಯಮುಂಡೂರು ಗ್ರಾಮದ ಪೂಣಚ್ಚ ಎಂಬವರ ಗಬ್ಬದ ಹಸುವನ್ನು ಈ ಹುಲಿಯು ಕೊಂದು ಹಾಕಿರುವ ಬಗ್ಗೆ ಮಾಹಿತಿ ದೃಢಪಟ್ಟಿದೆ. ಅರಣ್ಯ ವ್ಯಾಪ್ತಿಯಿಂದ ಹುಲಿಯು ಸಂಚರಿಸುವ ಸಂದರ್ಭ ಜಾನುವಾರು ಹುಲಿಯ ದೃಷ್ಟಿಗೆ ಬಿದ್ದ ಹಿನ್ನಲೆಯಲ್ಲಿ ಅದರ ಮೇಲೆ ದಾಳಿ ನಡೆಸಿದೆ. ಹಸುವನ್ನು ತಿನ್ನುವ ಸಂದರ್ಭ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗೆ ಈ ಹುಲಿಯ ಚಿತ್ರ ಸೆರೆಯಾಗಿದೆ. ಈ ಭಾಗದಲ್ಲಿ ಹುಲಿಯ ಸಂಚಾರದ ಹೆಜ್ಜೆ ಗುರುತುಗಳು ಕೂಡ ಕಂಡು ಬಂದಿವೆ.

ನಾಗರಹೊಳೆ ರಾಷ್ಟಿçÃಯ ಉದ್ಯಾನವನದಲ್ಲಿ ಹುಲಿಯ ಸಂತತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಹೆಣ್ಣು ಹುಲಿಯು ಮರಿಗಳಿಗೆ ಜನ್ಮ ನೀಡಿದ ತರುವಾಯ ೨ ರಿಂದ ೩ ವರ್ಷ ಕಳೆಯುತ್ತಿದ್ದಂತೆಯೇ ತನ್ನ ತಾಯಿಯಿಂದ ಬೇರ್ಪಟ್ಟು ಸ್ವತಂತ್ರವಾಗಿ ಬದುಕುತ್ತವೆ. ತಮಗೆ ಬೇಕಾದ ಆಹಾರವನ್ನು ಹುಡುಕಿಕೊಳ್ಳುತ್ತವೆ. ಪ್ರಮುಖವಾಗಿ ತಮ್ಮ ವಾಸ ಸ್ಥಳದ ವಿಸ್ತಾರವನ್ನು (ಟೆರಿಟರಿ) ನಿಗದಿಪಡಿಸಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಹಲವು ಹುಲಿಗಳು ಅರಣ್ಯದ ಅಂಚಿನ ಪ್ರದೇಶಕ್ಕೆ ಆಗಮಿಸುತ್ತವೆ. ಇಂತಹ ವೇಳೆಯಲ್ಲಿ ರೈತರ ಜಾನುವಾರಗಳ ಮೇಲೆ ದಾಳಿ ನಡೆಯುತ್ತವೆ. ನಂತರ ಇವುಗಳು ಮರಳಿ ಅರಣ್ಯ ಪ್ರದೇಶದತ್ತ ಹೆಜ್ಜೆ ಹಾಕುತ್ತವೆ.