ಮಡಿಕೇರಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೂರ್ನಾಡು ಜ್ಞಾನಜ್ಯೋತಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೂರ್ನಾಡು ಪಟ್ಟಣದಲ್ಲಿ ಮೆರವಣಿಗೆ ಮೂಲಕ ಜನರಿಗೆ ಮರಗಳನ್ನು ನಾಶ ಮಾಡಬಾರದು ಎಂಬುದಾಗಿ ಜಾಗೃತಿ ಮೂಡಿಸಲಾಯಿತು.ವೀರಾಜಪೇಟೆ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವೀರಾಜಪೇಟೆಯ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಮಲೆತಿರಿಕೆ ಬೆಟ್ಟದ ಶ್ರೀ ಶನೀಶ್ವರ ದೇವಸ್ಥಾನದ ಪ್ರಧಾನ ಅರ್ಚಕರು, ಸಂಸ್ಥಾಪಕ ವಿ.ಜಿ. ಕೃಷ್ಣಪ್ಪ ಸ್ವಾಮಿ ಅವರ ಜ್ಞಾಪಕಾರ್ಥವಾಗಿ ಶ್ರೀ ಶನೀಶ್ವರ ಭಕ್ತ ಜನ ಮಂಡಳಿ ವತಿಯಿಂದ ಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಪರಿಸರ ಚಿತ್ರ ಬಿಡುಸುವ ಮೂಲಕ ಚಿತ್ರಕಲಾ ಶಿಕ್ಷಕರಾದ ಬಿ.ಆರ್. ಸತೀಶ್ ಚಾಲನೆ ನೀಡಿ, ಪರಿಸರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯ ಮಹಾ ಗಣಪತಿ ಬಾಲಾಂಜನೇಯ ದೇವಾಲಯದ ಧರ್ಮದರ್ಶಿ ಬಾಬಾಶಂಕರ್ ಮಾತನಾಡಿ, ಪರಿಸರ ದಿನಾಚರಣೆ ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಆಚರಣೆ ಮಾಡಬೇಕು. ಅಲ್ಲದೇ ಪರಿಸರದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಧೋಶ್ ಪೂವಯ್ಯ ಮಾತನಾಡಿ, ನಾವು ಪರಿಸರದ ಕಾಳಜಿ ವಹಿಸಿ ಪರಿಸರ ಸಂರಕ್ಷಣೆ ಮಾಡಬೇಕು. ಪ್ರತಿಯೊಬ್ಬರು ಪರಿಸರವನ್ನು ಪ್ರೀತಿಸಬೇಕು. ಪ್ರಕೃತಿ ನಮ್ಮನ್ನು ಪ್ರೀತಿಸುತ್ತದೆ ಎಂದು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣದ ತಾಲೂಕು ಅಧ್ಯಕ್ಷ ಟಿ.ವಿ. ಅನಿಲ್ ಕುಮಾರ್ ಮಾತನಾಡಿ, ಪರಿಸರದ ಬಗ್ಗೆ ಕಾಳಜಿ ಒಂದು ದಿನಕ್ಕೆ ಸೀಮಿತ ಆಗಿರಬಹುದು ಎಂದು ತಿಳಿಸಿದರು.

ಕರ್ನಾಟಕ ಕಾಂಗ್ರೆಸ್ ಪಕ್ಷದ ವಕ್ತಾರ ಹಾಗೂ ಸಮಾಜ ಸೇವಕರಾದ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಹತ್ತು ಹಲವಾರು ವರ್ಷಗಳಿಂದ ಶ್ರೀ ಶನೀಶ್ವರ ಭಕ್ತ ಜನ ಮಂಡಳಿಯವರು ಪ್ರತಿ ವರ್ಷಗಳಿಂದ ಜೂನ್ ೫ ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತಿದ್ದು ವಿವಿಧ ಶಾಲಾ ಕಾಲೇಜುಗಳಲ್ಲಿ ಸಸಿ ನೆಡುವ ಮೂಲಕ ಪರಿಸರದ ಜಾಗೃತಿ ಕಾರ್ಯಕ್ರಮನ್ನು ಮಾಡುತ್ತ ಬಂದಿದ್ದಾರೆ. ಇದರಿಂದ ಮಕ್ಕಳಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಮೂಡುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಪ್ರಗತಿ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಮಾದಂಡ ತಿಮ್ಮಯ್ಯ ಉಪಸ್ಥಿತರಿದ್ದರು. ಈ ಸಂದರ್ಭ ಶ್ರೀ ಶನೀಶ್ವರ ಭಕ್ತ ಜನ ಮಂಡಳಿಯ ಅಧ್ಯಕ್ಷ ಯುವರಾಜ್ ಕೃಷ್ಣ, ಸದಸ್ಯರಾದ ಎಂ.ಎಸ್. ಸೈನುದ್ದಿನ್, ಮಿಥುನ್, ರವಿ ಹಾಜರಿದ್ದರು.ಪೊನ್ನಂಪೇಟೆ: ಪೊನ್ನಂಪೇಟೆಯ ಸಂತ ಅಂತೋಣಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಪ್ರಯುಕ್ತ ಮಕ್ಕಳಿಂದ ಪರಿಸರ ಸಂಬAಧಿತ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಪರಿಸರದ ಬಗ್ಗೆ ಚಿತ್ರ ಬಿಡಿಸುವ, ಪ್ರತಿಜ್ಞೆ ಸ್ವೀಕರಿಸುವ, ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಫಾ. ಡೆವಿಡ್ ಸಗಾಯರಾಜ್, ಮುಖ್ಯ ಶಿಕ್ಷಕಿ ರಜನಿ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಶನಿವಾರಸಂತೆ: ಶನಿವಾರಸಂತೆಯ ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯಲ್ಲಿ ನಿಸರ್ಗ ಸಿರಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇಕೋ ಕ್ಲಬ್ ಸಂಚಾಲಕಿ ಎಂ. ಸವಿತಾ, ಶಿಕ್ಷಕರಾದ ಸುಚಿತ್ರಾ, ಜಯಕುಮಾರ್, ಸಂದೇಶ್, ಅಂಜನಪ್ಪ, ಝಹೀರ್, ಸರ್ಪ್ ರಾಜ್ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.*ಗೋಣಿಕೊಪ್ಪ: ಮಾದಪ್ಪ ಪೆಟ್ರೋಲಿಯಂ ಹಾಗೂ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಗಿಡ ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ನೆಲ್ಲಿಕಾಯಿ, ಸೀಬೆ, ದಾಳಿಂಬೆ, ಬಿಲ್ವಪತ್ರೆ ಸೇರಿದಂತೆ ೨೦೦ಕ್ಕೂ ಹೆಚ್ಚು ಕಾಡು ಮರಗಳ ಗಿಡಗಳನ್ನು ವಿತರಣೆ ಮಾಡಲಾಯಿತು. ಅತ್ತೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಬಿಲ್ವಪತ್ರೆ ಗಿಡ ನೆಡಲಾಯಿತು. ಲೋಪಮುದ್ರಾ ಆಸ್ಪತ್ರೆ ವೈದ್ಯರಾದ ಡಾ. ಮುಕ್ಕಾಟೀರ ಅಮೃತ್ ನಾಣಯ್ಯ ಗಿಡ ನೆಟ್ಟು ಉದ್ಘಾಟಿಸಿದರು.

ಮಾದಪ್ಪ ಪೆಟ್ರೋಲಿಯಂ ಮಾಲೀಕ ಮಚ್ಚಮಾಡ ಪಾರ್ವತಿ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ, ನಿರ್ದೇಶಕರಾದ ಸಿಂಗಿ ಸತೀಶ್, ಚಿಮ್ಮಣ್ಣಮಾಡ ದರ್ಶನ್ ದೇವಯ್ಯ, ಶಿಕ್ಷಕ ರಮಾನಂದ, ಸ್ಥಳಿಯರಾದ ವಸುರಾಜ್, ಸುರೇಶ್, ಅಪ್ಸರ್, ಚಿಟ್ಯಪ್ಪ, ಮ್ಯಾಥ್ಯು, ಅರ್ಚಕ ಮೋಹನ್ ಇದ್ದರು.ಕೊಡ್ಲಿಪೇಟೆ: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಪಂಚಾಯಿತಿ ಕಚೇರಿ ಮುಂಭಾಗದ ರಸ್ತೆ ಬದಿ ಮತ್ತು ಕಚೇರಿ ಆವರಣದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ರೇಣುಕಾ ಮೇದಪ್ಪ, ಸದಸ್ಯರಾದ ಹನೀಫ್, ದಿನೇಶ್, ಪಾವನಾ, ದಾಕ್ಷಾಯಿಣಿ, ಅಭಿವೃದ್ಧಿ ಅಧಿಕಾರಿ ಗಿರೀಶ್, ಕಾರ್ಯದರ್ಶಿ ಅಶ್ವಥ್ ಮತ್ತು ಪಂಚಾಯಿತಿ ಸಿಬ್ಬಂದಿಗಳು ಇದ್ದರು.ಮಡಿಕೇರಿ: ಮಡಿಕೇರಿ ತಾಲೂಕಿನ ಕಕ್ಕಬ್ಬೆ ಕ್ಲಸ್ಟರ್‌ನ ವಿವಿಧ ಶಾಲೆಗಳಲ್ಲಿ ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ವಿದ್ಯಾರ್ಥಿಗಳಿಗೆ ಪರಿಸರದ ಜಾಗೃತಿ ಮೂಡಿಸಿ, ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಮಕ್ಕಳು ವಿವಿಧ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು. ಈ ಸಂದರ್ಭ ಬಿಆರ್‌ಪಿ ಮಂಜುಳಾ ಚಿತ್ರಾಪುರ, ಮೇಕೇರಿ ಕ್ಲಸ್ಟರ್ ಸಿಆರ್‌ಪಿ ಕಲ್ಪನಾ ಹಾಗೂ ಕಕ್ಕಬ್ಬೆ ಕ್ಲಸ್ಟರ್ ಸಿಆರ್‌ಪಿ ಸರಸ್ವತಿ, ಮುಖ್ಯ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಜರಿದ್ದರು.*ಗೋಣಿಕೊಪ್ಪ: ಮಾದಪ್ಪ ಪೆಟ್ರೋಲಿಯಂ ಹಾಗೂ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಗಿಡ ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ನೆಲ್ಲಿಕಾಯಿ, ಸೀಬೆ, ದಾಳಿಂಬೆ, ಬಿಲ್ವಪತ್ರೆ ಸೇರಿದಂತೆ ೨೦೦ಕ್ಕೂ ಹೆಚ್ಚು ಕಾಡು ಮರಗಳ ಗಿಡಗಳನ್ನು ವಿತರಣೆ ಮಾಡಲಾಯಿತು. ಅತ್ತೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಬಿಲ್ವಪತ್ರೆ ಗಿಡ ನೆಡಲಾಯಿತು. ಲೋಪಮುದ್ರಾ ಆಸ್ಪತ್ರೆ ವೈದ್ಯರಾದ ಡಾ. ಮುಕ್ಕಾಟೀರ ಅಮೃತ್ ನಾಣಯ್ಯ ಗಿಡ ನೆಟ್ಟು ಉದ್ಘಾಟಿಸಿದರು.

ಮಾದಪ್ಪ ಪೆಟ್ರೋಲಿಯಂ ಮಾಲೀಕ ಮಚ್ಚಮಾಡ ಪಾರ್ವತಿ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ, ನಿರ್ದೇಶಕರಾದ ಸಿಂಗಿ ಸತೀಶ್, ಚಿಮ್ಮಣ್ಣಮಾಡ ದರ್ಶನ್ ದೇವಯ್ಯ, ಶಿಕ್ಷಕ ರಮಾನಂದ, ಸ್ಥಳಿಯರಾದ ವಸುರಾಜ್, ಸುರೇಶ್, ಅಪ್ಸರ್, ಚಿಟ್ಯಪ್ಪ, ಮ್ಯಾಥ್ಯು, ಅರ್ಚಕ ಮೋಹನ್ ಇದ್ದರು.*ಗೋಣಿಕೊಪ್ಪ: ಬಾಳೆಲೆ ಪ್ರತಿಭಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಚಾರಣೆಯನ್ನು ಆಚರಿಸಿದರು.

ಒಂದು ದಿನಕ್ಕೆ ಮಾತ್ರ ಆಚರಣೆಯನ್ನು ಸೀಮಿತಗೊಳಿಸದೆ ಪ್ರತಿ ಸಂಭ್ರಮಕ್ಕೂ ಒಂದು ಗಿಡ ನೆಡುವ ಪ್ರತಿಜ್ಞೆಗೆ ಒಳಪಡಬೇಕು ಎಂದು ಮುಖ್ಯ ಶಿಕ್ಷಕಿ ಗೀತಾ ನಾಯ್ಡು ಹೇಳಿದರು.

ಶಿಕ್ಷಕರುಗಳಾದ ಭುವನೇಶ್ವರಿ, ಅಶ್ವಿನಿ, ಯಸಶ್ವನಿ, ಶಿಲ್ಪ, ಸೀಮಾ, ದೈಹಿಕ ಶಿಕ್ಷಣ ಶಿಕ್ಷಕ ಅಯ್ಯಪ್ಪ ಮತ್ತು ವಿದ್ಯಾರ್ಥಿಗಳು ಇದ್ದರು.ಪಾಲಿಬೆಟ್ಟ: ಟಾಟಾ ಸಂಸ್ಥೆಯ ಎಮ್ಮೆಗುಂಡಿ ವಿಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ಪಾಲಿಬೆಟ್ಟದ ಆರೋಗ್ಯ ಕೇಂದ್ರ, ಪಟ್ಟಣದ ಸುತ್ತಮುತ್ತಲಿನಲ್ಲಿದ್ದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯದ ವಸ್ತುಗಳನ್ನು ಶ್ರಮದಾನದ ಮೂಲಕ ಸ್ವಚ್ಛತೆ ಮಾಡಲಾಯಿತು.

ಎಮ್ಮೆಗುಂಡಿ ತೋಟದ ಮೇಲ್ವಿಚಾರಕ ಸತೀಶ್, ಪ್ರಮುಖರಾದ ಪ್ರದೀಪ್, ಸುರೇಶ್, ಅಕ್ಷಯ್, ಚಟ್ಟಿಯಪ್ಪ, ನಾಗರಾಜ್, ಆಸ್ಪತ್ರೆಯ ಸಿಬ್ಬಂದಿಗಳಾದ ಜಯ, ಚಿತ್ರ, ನೀಲಮ್ಮ ಸೇರಿದಂತೆ ಮತ್ತಿತರರು ಇದ್ದರು.ಕರಿಕೆ: ಇಲ್ಲಿಗೆ ಸಮೀಪದ ಅರಣ್ಯ ನಿರೀಕ್ಷಣಾ ಮಂದಿರ ಬಳಿಯ ಫಾರೆಸ್ಟ್ ಕಾಲೋನಿಯಲ್ಲಿ ಅರಣ್ಯ ಇಲಾಖೆಯ ಭಾಗಮಂಡಲ ವಲಯದ ಕರಿಕೆ ಉಪ ವಲಯದ ವತಿಯಿಂದ ಸ್ಥಳೀಯ ನಿವಾಸಿಗಳನ್ನು ಸೇರಿಸಿ ಗಿಡ ನೆಡುವುದರ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.

ಈ ಸಂದರ್ಭ ಕರಿಕೆ ಉಪ ವಲಯ ಅರಣ್ಯ ಅಧಿಕಾರಿಗಳು ಸಚಿನ್ ಬಿರಾದಾರ್, ಅರಣ್ಯ ರಕ್ಷಕರು, ಕ್ಷಿಪ್ರ ಆನೆ ಕಾರ್ಯಪಡೆ ಸಿಬ್ಬಂದಿಗಳು, ಹಾಡಿ ನಿವಾಸಿಗಳು ಹಾಜರಿದ್ದರು.ಕುಶಾಲನಗರ: ಭೂಮಿ ಮೇಲೆ ಬದುಕಲು ಮನುಷ್ಯನಿಗೆ ಅಗತ್ಯವಿರುವ ಪರಿಶುದ್ಧವಾದ ಗಾಳಿ, ನೀರು, ಆಹಾರ ಹಾಗೂ ಮಣ್ಣನ್ನು ಜತನವಾಗಿ ಹಾಗೂ ಜೋಪಾನವಾಗಿ ಸಂರಕ್ಷಿಸಬೇಕಾದುದು ಎಲ್ಲರ ಆದ್ಯ ಕರ್ತವ್ಯ ಎಂದು ಕುಶಾಲನಗರದ ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಪ್ರಾಂಶುಪಾಲ ಡಾ. ಎನ್.ಎಸ್. ಸತೀಶ್ ಕರೆಕೊಟ್ಟರು.

ವಿಶ್ವ ಪರಿಸರದ ದಿನದ ಅಂಗವಾಗಿ ಕುಶಾಲನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ "ಭೂಮಿ ಸಂರಕ್ಷಿಸಿ ಅಭಿಯಾನ" ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪವಿತ್ರ ನದಿಗಳಾಗಿರುವ ಗಂಗಾ, ಯಮುನಾ, ಕಾವೇರಿ ನದಿಗಳು ಇಂದು ಮಾಲಿನ್ಯವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರಲ್ಲದೇ ಕೈಗಾರಿಕೀಕರಣ, ನಗರೀಕರಣಗಳಂತಹ ಅಭಿವೃದ್ಧಿ ಯೋಜನೆಗಳಿಂದಾಗಿ ಅವ್ಯಾಹತವಾಗಿ ಪರಿಸರ ಮಾಲಿನ್ಯವಾಗುತ್ತಿರುವ ಬಗ್ಗೆ ಡಾ.ಸತೀಶ್ ಆತಂಕ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್ ಮಾತನಾಡಿ, ಭೂಮಿ ಮನುಷ್ಯನ ಆಸೆಗಳನ್ನು ಪೂರೈಸುತ್ತದೆಯೇ ಹೊರತು ಆತನ ದುರಾಸೆಯನ್ನಲ್ಲ. ಇರುವ ಒಂದೇ ಭೂಮಿಯ ಸಂರಕ್ಷಣೆ ಎಲ್ಲರ ಹೊಣೆಯಾಗಬೇಕು ಎಂದರು.

ಭೂಮಿ ಸಂರಕ್ಷಣಾ ಅಭಿಯಾನದ ಸಂಚಾಲಕ ಕೆ.ಎಸ್. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಶಾಲನಗರ ಪುರಸಭೆ ಅಧ್ಯಕ್ಷ ಜಯವರ್ಧನ, ಕಾವೇರಿ ನದಿ ಜಾಗೃತಿ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಪುರಸಭೆ ಸದಸ್ಯ ಬಿ. ಅಮೃತರಾಜು, ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಬಿ.ಎನ್. ಪುಷ್ಪ, ಹೆಬ್ಬಾಲೆ ಹೋಬಳಿ ಕಸಾಪ ಕಾರ್ಯದರ್ಶಿ ಎಸ್.ಎಸ್. ಚಂದ್ರಶೇಖರ್, ಧನೇಂದ್ರಕುಮಾರ್, ಶಿಕ್ಷಕರಾದ ಶಿವಣ್ಣ, ನವೀನಕುಮಾರ್ ಇದ್ದರು. ಕುಶಾಲನಗರ: ಭೂಮಿ ಮೇಲೆ ಬದುಕಲು ಮನುಷ್ಯನಿಗೆ ಅಗತ್ಯವಿರುವ ಪರಿಶುದ್ಧವಾದ ಗಾಳಿ, ನೀರು, ಆಹಾರ ಹಾಗೂ ಮಣ್ಣನ್ನು ಜತನವಾಗಿ ಹಾಗೂ ಜೋಪಾನವಾಗಿ ಸಂರಕ್ಷಿಸಬೇಕಾದುದು ಎಲ್ಲರ ಆದ್ಯ ಕರ್ತವ್ಯ ಎಂದು ಕುಶಾಲನಗರದ ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಪ್ರಾಂಶುಪಾಲ ಡಾ. ಎನ್.ಎಸ್. ಸತೀಶ್ ಕರೆಕೊಟ್ಟರು.

ವಿಶ್ವ ಪರಿಸರದ ದಿನದ ಅಂಗವಾಗಿ ಕುಶಾಲನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ "ಭೂಮಿ ಸಂರಕ್ಷಿಸಿ ಅಭಿಯಾನ" ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪವಿತ್ರ ನದಿಗಳಾಗಿರುವ ಗಂಗಾ, ಯಮುನಾ, ಕಾವೇರಿ ನದಿಗಳು ಇಂದು ಮಾಲಿನ್ಯವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರಲ್ಲದೇ ಕೈಗಾರಿಕೀಕರಣ, ನಗರೀಕರಣಗಳಂತಹ ಅಭಿವೃದ್ಧಿ ಯೋಜನೆಗಳಿಂದಾಗಿ ಅವ್ಯಾಹತವಾಗಿ ಪರಿಸರ ಮಾಲಿನ್ಯವಾಗುತ್ತಿರುವ ಬಗ್ಗೆ ಡಾ.ಸತೀಶ್ ಆತಂಕ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್ ಮಾತನಾಡಿ, ಭೂಮಿ ಮನುಷ್ಯನ ಆಸೆಗಳನ್ನು ಪೂರೈಸುತ್ತದೆಯೇ ಹೊರತು ಆತನ ದುರಾಸೆಯನ್ನಲ್ಲ. ಇರುವ ಒಂದೇ ಭೂಮಿಯ ಸಂರಕ್ಷಣೆ ಎಲ್ಲರ ಹೊಣೆಯಾಗಬೇಕು ಎಂದರು.

ಭೂಮಿ ಸಂರಕ್ಷಣಾ ಅಭಿಯಾನದ ಸಂಚಾಲಕ ಕೆ.ಎಸ್. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಶಾಲನಗರ ಪುರಸಭೆ ಅಧ್ಯಕ್ಷ ಜಯವರ್ಧನ, ಕಾವೇರಿ ನದಿ ಜಾಗೃತಿ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಪುರಸಭೆ ಸದಸ್ಯ ಬಿ. ಅಮೃತರಾಜು, ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಬಿ.ಎನ್. ಪುಷ್ಪ, ಹೆಬ್ಬಾಲೆ ಹೋಬಳಿ ಕಸಾಪ ಕಾರ್ಯದರ್ಶಿ ಎಸ್.ಎಸ್. ಚಂದ್ರಶೇಖರ್, ಧನೇಂದ್ರಕುಮಾರ್, ಶಿಕ್ಷಕರಾದ ಶಿವಣ್ಣ, ನವೀನಕುಮಾರ್ ಇದ್ದರು.ಸಿದ್ದಾಪುರ: ನೆಲ್ಲಿಹುದಿಕೇರಿಯ ಡೋಮಿನೋಸ್ ಯುವಕ ಸಂಘದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ದುಬಾರೆ ಸಮೀಪದ ಚಿಕ್ಲಿಹೊಳೆ ಅಣೆಕಟ್ಟು ಬಳಿ ಗಿಡ ನೆಟ್ಟು ಪರಿಸರ ದಿನ ಆಚರಣೆಯನ್ನು ಆಚರಿಸಿದರು.

ಈ ಸಂದರ್ಭ ಸಂಘದ ಅಧ್ಯಕ್ಷ ಶೌಕತ್, ಪದಾಧಿಕಾರಿಗಳಾದ ಸರವಣ, ಅಶೋಕ್, ಮುಸ್ತಫಾ, ರಾಹುಲ್, ಸನಿಲ್, ಆಸಿಂ ಇನ್ನಿತರರು ಹಾಜರಿದ್ದರು.ಸಿದ್ದಾಪುರ: ನೆಲ್ಲಿಹುದಿಕೇರಿಯ ಡೋಮಿನೋಸ್ ಯುವಕ ಸಂಘದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ದುಬಾರೆ ಸಮೀಪದ ಚಿಕ್ಲಿಹೊಳೆ ಅಣೆಕಟ್ಟು ಬಳಿ ಗಿಡ ನೆಟ್ಟು ಪರಿಸರ ದಿನ ಆಚರಣೆಯನ್ನು ಆಚರಿಸಿದರು.

ಈ ಸಂದರ್ಭ ಸಂಘದ ಅಧ್ಯಕ್ಷ ಶೌಕತ್, ಪದಾಧಿಕಾರಿಗಳಾದ ಸರವಣ, ಅಶೋಕ್, ಮುಸ್ತಫಾ, ರಾಹುಲ್, ಸನಿಲ್, ಆಸಿಂ ಇನ್ನಿತರರು ಹಾಜರಿದ್ದರು.ಚೆಯ್ಯಂಡಾಣೆ: ನರಿಯಂದಡ ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಚೇಲಾವರ ಗ್ರಾಮದ ಸ್ವಸಹಾಯ ಸಂಘದ ಸಂಯುಕ್ತ ಆಶ್ರಯದಲ್ಲಿ ಚೇಲಾವರದ ಪೊನ್ನೋಲ ಪ್ರಾಥಮಿಕ ಶಾಲೆಯಲ್ಲಿ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭ ಪೊನ್ನೋಲ ಶಾಲೆಯ ಶಿಕ್ಷಕಿ ದೀಪಿಕಾ, ಸಂಜೀವಿನಿ ಒಕ್ಕೂಟದ ಎಂಬಿಕೆ ವಸಂತಿ, ಪಶು ಸಖಿ ಮೀನಾಕ್ಷಿ, ಅಂಗನವಾಡಿ ಕಾರ್ಯಕರ್ತೆ ವನಜ, ಗ್ರಾಮದ ಸ್ವಸಹಾಯ ಸಂಘದ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಅಂಗನವಾಡಿ ಮಕ್ಕಳು ಹಾಜರಿದ್ದರು.ಶನಿವಾರಸಂತೆ: ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಮನೆಗಳಿಂದ ತಂದ ಅಡಿಕೆ, ಸೀತಾಫಲ, ಬೆಣ್ಣೆ ಹಣ್ಣಿನ ಗಿಡ, ಸೀಬೆ ಹಣ್ಣಿನ ಗಿಡ, ಹಲಸಿನ ಗಿಡ, ಮಾವಿನ ಗಿಡ, ಗುಲಾಬಿ, ದಾಸವಾಳ, ಪಾರಿಜಾತ, ಮಲ್ಲಿಗೆ, ಅಲೋವೆರಾ, ಆಂಥೋರಿಯA, ಕ್ರೋಟಾನ್ಸ್, ಸ್ಟಾçಬೆರಿ ಸೇರಿದಂತೆ ವಿವಿಧ ಜಾತಿಯ ಹಣ್ಣು ಹಾಗೂ ಹೂವಿನ ೫೦೦ಕ್ಕೂ ಹೆಚ್ಚು ಗಿಡಗಳನ್ನು ಶಾಲೆಯ ಮುಂಭಾಗ ಹಾಗೂ ಹಿಂಭಾಗದಲ್ಲಿ ನೆಟ್ಟರು. ಈ ಸಂದರ್ಭ ಪರಿಸರ ದಿನಾಚರಣೆಯ ಮಹತ್ವ ಹಾಗೂ ಪರಿಸರ ಸಂರಕ್ಷಣೆಯ ಕುರಿತಂತೆ ಶಾಲೆಯ ಪ್ರಾಂಶುಪಾಲೆ ಡಿ. ಸುಜಲಾ ದೇವಿಯವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಣ್ಣಿನ ಗಿಡಗಳನ್ನು ನೆಡಲಾಯಿತು.

ಶಿಕ್ಷಣ ಫೌಂಡೇಶನ್, ಪ್ರೇರಣಾ ಕ್ಲಬ್‌ನ ಜಿಲ್ಲಾ ನೋಡಲ್ ಅಧಿಕಾರಿ ಶಿವಕುಮಾರ್ ಶಾಲೆಗೆ ಕೊಡುಗೆಯಾಗಿ ಗಿಡಗಳನ್ನು ನೀಡಿದರು. ಈ ಸಂದರ್ಭ ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ಕೈತೋಟದಲ್ಲಿ ಮಕ್ಕಳ ಜೊತೆ ಸೇರಿ ಗಿಡ ನೆಡುವುದರೊಂದಿಗೆ ಪರಿಸರ ದಿನವನ್ನು ಆಚರಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಶಿವಕುಮಾರ್ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ವಿವರಿಸಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಿಸರಕ್ಕೆ ಸಂಬAಧಿಸಿದ ಜಯ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಪರಿಸರಕ್ಕೆ ಸಂಬAಧಿಸಿದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಜಯಂತಿ, ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕಿ ಮೀನಾ ಸ್ವಾಗತಿಸಿ, ರಜನಿ ವಂದಿಸಿದರು.

ನAಜರಾಯಪಟ್ಟಣ ಸರಕಾರಿ ಪ್ರೌಢಶಾಲೆಯಲ್ಲಿ ದಿನದ ಅಂಗವಾಗಿ ಗಿಡಗಳನ್ನು ನೆಡಲಾಯಿತು. ಮುಖ್ಯ ಶಿಕ್ಷಕ ಮೂರ್ತಿ ಮತ್ತು ಶಿಕ್ಷಕ ವೃಂದದವರು ಸೇರಿ ಗಿಡಗಳನ್ನು ನೆಟ್ಟರು.ವೀರಾಜಪೇಟೆ: ಇಲ್ಲಿಗೆ ಸಮೀಪದ ಕೋಟೆಕೊಪ್ಪ ಗ್ರಾಮದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತವಾಗಿ ಗ್ರಾಮದ ಯುವಕರು ಗಿಡಗಳನ್ನು ನೆಟ್ಟು ಆ ಗಿಡಗಳನ್ನು ದತ್ತು ಪಡೆದು ಪೋಷಣೆ ಮಾಡುವ ಜವಾಬ್ದಾರಿಯನ್ನು ಹೊತ್ತು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಸಂಕಲ್ಪವನ್ನು ಮಾಡುವುದರ ಮೂಲಕ ವಿನೂತನವಾಗಿ ಪರಿಸರ ದಿನಾಚರಣೆಯನ್ನು ಆಚರಿಸಿದರು.

ಈ ಸಂದರ್ಭ ಶಿಕ್ಷಕ ವಿ.ಆರ್. ಸಂದೀಪ್ ಮಾತನಾಡಿ, ಮಾನವನ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಂಡು ಮುಂದಿನ ಪೀಳಿಗೆಗೆ ಪರಿಸರವನ್ನು ಕೊಡುಗೆಯಾಗಿ ನೀಡಬೇಕೆಂದು ಸಲಹೆ ನೀಡಿದರು.

ಗ್ರಾಮದ ಬೈತೂರೇಶ್ವರ ದೇವಸ್ಥಾನದ ಅಧ್ಯಕ್ಷ ವಿ.ಎಂ. ಶಿವರಾಜ್ ಮಾತನಾಡಿ, ಜನರು ಪರಿಸರಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ಗಿಡಗಳನ್ನು ನೆಟ್ಟು ಪೋಷಿಸಬೇಕು. ಇದಕ್ಕೆ ಜನರ ಸಹಕಾರ ಅತೀ ಮುಖ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಸದಸ್ಯರಾದ ವಿ.ಎನ್. ಗೋಪಿ, ವಿ.ಆರ್. ವಿಕಾಸ್, ವಿ.ಎಸ್. ಪ್ರಸನ್ನ, ವಿ.ಎಲ್. ಕಾರ್ತಿಕ್ ಮತ್ತು ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.