ಕೂಡಿಗೆ, ಜೂ. ೫: ಕೊಡಗು ಜಿಲ್ಲಾ ಕ್ರೆöÊಸ್ತ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ೨೦೨೨-೨೩ ಸಾಲಿನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ದೇಶ ಸೇವೆ ಮಾಡಿದ ಮಾಜಿ ಸೈನಿಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವು ಕುಶಾಲ ನಗರದ ಫಾತಿಮಾ ಕಾನ್ವೆಂಟ್‌ನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಕುಶಾಲನಗರದ ಸೆಂಟ್ ಸಬಾಸ್ಟೀನ್ ಚರ್ಚ್ನ ಧರ್ಮ ಗುರು ಮಾರ್ಟಿನ್ ನೆರವೇರಿಸಿದರು. ನಂತರ ಮಾತನಾಡಿದ ಅವರು, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ಪ್ರತಿ ಯೊಬ್ಬ ಪೋಷಕರ ಜವಾಬ್ದಾರಿ ಎಂದರು.

ಈ ಸಂದರ್ಭ ಜಿಲ್ಲಾ ಕ್ರೆöÊಸ್ತ ಸೇವಾ ಸಂಘದ ಅಧ್ಯಕ್ಷ ಜೋಸೆಫ್, ಸಿಸ್ಟರ್ ಜಸ್ಟಿನ್, ತೆರೆಸಾ, ಪ್ರೆಸಿಲ್ವಾ, ಫಾತಿಮಾ ಶಾಲೆಯ ಮುಖ್ಯ ಶಿಕ್ಷಕಿ ಸ್ಪಂದನಾ, ಸೆಲಿನಾ ಡಿ ಕುನ್ನಾ, ಫಿಲಿಪ್ ವಾಸ್ ಸೇರಿದಂತೆ ವಿದ್ಯಾ ರ್ಥಿಗಳು ಹಾಗೂ ಮಾಜಿ ಸೈನಿಕರು ಹಾಜರಿದ್ದರು.