ಕುಶಾಲನಗರ, ಜೂ. ೫: ಕುಶಾಲನಗರದ ನಂ. ೧೨೨ನೇ ಪ್ರಾಥ ಮಿಕ ಕೃಷಿ ಪತ್ತಿನ ಸಹಕಾರ ಸಂಘದ ೧೦೨ನೇ ವಾರ್ಷಿಕ ಮಹಾಸಭೆ ಸ್ಥಳೀಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ೧.೬೦ ಕೋಟಿ ರೂ. ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ. ೧೨ರಷ್ಟು ಡಿವಿಡೆಂಡ್ ಘೋಷಣೆ ಮಾಡಲಾಯಿತು. ಸಂಘದ ವತಿಯಿಂದ ನಿರ್ಮಿಸುತ್ತಿರುವ ಸಹಕಾರ ಭವನ ಕಟ್ಟಡ ಕಾಮಗಾರಿಗೆ ಸದಸ್ಯರಿಗೆ ಘೋಷಿಸಿದ್ದ ಶೇ. ೧೨ರ ಡಿವಿಡೆಂಡ್ ಪೈಕಿ ಶೇ. ೨ ರಷ್ಟನ್ನು ಸಂಘಕ್ಕೆ ನೀಡಿ ಸಹಕರಿಸಬೇಕೆಂದು ಅಧ್ಯಕ್ಷರ ಕೋರಿಕೆಗೆ ಮಹಾ ಸಭೆಯಲ್ಲಿ ಸದಸ್ಯರು ಸಮ್ಮತಿಸಿದರು.

ಕುಶಾಲನಗರ ಸಮೀಪ ಗುಡ್ಡೆ ಹೊಸೂರು ಬಳಿ ನಿರ್ಮಾಣಗೊಳ್ಳ ಲಿರುವ ಉದ್ದೇಶಿತ ಸಭಾಭವನದಲ್ಲಿ ೧೩೦೨ ಮಂದಿ ಕುಳಿತುಕೊಳ್ಳಬ ಹುದಾಗಿದೆ. ೫೬೦ ಮಂದಿ ಒಟ್ಟಿಗೆ ಕುಳಿತು ಊಟ ಮಾಡುವ ಸಭಾಂ ಗಣವನ್ನು ಹೊಂದಲಿದೆ. ಪ್ರತ್ಯೇಕ ಸಸ್ಯಹಾರ ಹಾಗೂ ಮಾಂಸಹಾರ ಅಡುಗೆ ಕೋಣೆಗಳ ನಿರ್ಮಾಣ, ಕಟ್ಟಡದ ನೆಲ ಅಂತಸ್ತಿನಲ್ಲಿ ರೆಸ್ಟೋ ರೆಂಟ್, ಸೂಪರ್ ಮಾರ್ಕೆಟ್, ಸದಸ್ಯರ ಅನುಕೂಲಕ್ಕೆ ಆರೋಗ್ಯ ತಪಾಸಣಾ ಕೇಂದ್ರ, ಕಟ್ಟಡದ ಮೇಲ್ಭಾಗದಲ್ಲಿ ೧೨ ವಸತಿ ಗೃಹಗಳು ಸೇರಿದಂತೆ ಸುಮಾರು ೧೪ ಕೋಟಿ ರೂ. ವೆಚ್ಚದಲ್ಲಿ ಸರ್ವ ಸಜ್ಜಿತ ಅನುಕೂಲಗಳನ್ನು ಒದಗಿಸ ಬಹುದಾದ ಸಂಪೂರ್ಣ ಯೋಜನಾ ವಿವರಗಳ ಬಗ್ಗೆ ಶರವಣಕುಮಾರ್ ಸಭೆಯಲ್ಲಿ ತಿಳಿಸಿದರು.

ಈ ಬಾರಿ ಸಂಘದಲ್ಲಿ ೨೩೭.೭೮ ಕೋಟಿ ರೂ.ಗಳಿಗೂ ಹೆಚ್ಚು ವ್ಯವಹಾ ರಗಳು ನಡೆದಿರುವ ಬಗ್ಗೆ ಅಧ್ಯಕ್ಷ ಶರವಣಕುಮಾರ್ ವಿವರಿಸಿದರು.

ಮಹಾಸಭೆಯಲ್ಲಿ ಸಂಘದ ಸದಸ್ಯರಾದ ವಿ.ಪಿ.ಶಶಿಧರ್, ಎಂ.ವಿ.ನಾರಾಯಣ, ಪ್ರಮೋದ್ ಮುತ್ತಪ್ಪ, ಗೋವಿಂದಪ್ಪ, ಶೇಖರೇ ಗೌಡ, ಜಗದೀಶ್ ಹಾಗೂ ಮೊದಲಾ ದವರು ಚರ್ಚೆಯಲ್ಲಿ ಪಾಲ್ಗೊಂಡರು.

ನಿವೃತ್ತಿ ಹೊಂದಿದ ಸಂಘದ ಲೆಕ್ಕ ಪರಿಶೋಧಕ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿ.ಎಸ್.ಆನಂದ ಕುಮಾರ್, ನಿರ್ದೇಶಕರಾದ ಅಬ್ದುಲ್ ಖಾದರ್, ಡಿ.ವಿ.ರಾಜೇಶ್, ಮಧುಸೂದನ್, ಕವಿತಾ ಮೋಹನ್, ನೇತ್ರಾವತಿ, ಎಂ.ಕೆ.ಗಣೇಶ್, ಪಿ.ಬಿ. ಯತೀಶ್, ಜಗದೀಶ್, ಮಧು ಕುಮಾರ್, ಕಾರ್ಯನಿರ್ವ ಹಣಾಧಿಕಾರಿ ಬಿ.ಬಿ.ಲೋಕೇಶ್, ಆಂತರಿಕ ಲೆಕ್ಕ ಪರಿಶೋಧಕ ಡಿ.ಎನ್.ಚಂದ್ರಶೇಖರ್ ಇದ್ದರು.