ಮಡಿಕೇರಿ, ಜೂ. ೫: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ಹಾಗೂ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಸಹ ಆಶ್ರಯದಲ್ಲಿ ತಾ. ೭ ರಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಒಂದು ದಿನದ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಆಯೋ ಜಿಸಲಾಗಿದೆ.
ಬೆಳಿಗ್ಗೆ ೧೦:೩೦ ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಜೇನು ಕುಟುಂಬ ನಿರ್ವಹಣಾ ಕ್ರಮಗಳು, ಮಳೆಗಾ ಲದಲ್ಲಿ ಜೇನು ಕುಟುಂಬಗಳ ಸಂರ ಕ್ಷಣೆ, ಜೇನು ಉತ್ಪನ್ನಗಳ ಮೌಲ್ಯವರ್ಧನೆ ಇತ್ಯಾದಿಗಳ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಲಾಗುವುದು.
ತರಬೇತಿಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ತಾ.೬ ರವರೆಗೆ ತಮ್ಮ ಹೆಸರುಗಳನ್ನು ದೂರವಾಣಿ ಸಂಖ್ಯೆ ೯೮೮೦೦೭೬೩೮೧, ೯೪೮೦೮೩೮೨೧೦ ಸಂಪ ರ್ಕಿಸಿ ನೋಂದಣಿ ಮಾಡಬಹುದು.