ಗೋಣಿಕೊಪ್ಪಲು, ಜೂ.೫: ದ.ಕೊಡಗಿನ ಪೊನ್ನಂಪೇಟೆಯ ಜೂನಿಯರ್ ಕಾಲೇಜು ಆವರಣದಲ್ಲಿ ಕೊಡಗು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಮಟ್ಟದ ೫ ಕಿ.ಮೀ. ಮ್ಯಾರಥಾನ್ ಯಶಸ್ವಿಯಾಗಿ ಜರುಗಿತು.

ಕೇರಳ ರಾಜ್ಯದ ಕ್ರೀಡಾಪಟುಗಳು ಸೇರಿದಂತೆ ಹಾಸನ, ಚಿಕ್ಕಮಗಳೂರು, ಮೈಸೂರು ಸೇರಿದಂತೆ ಕೊಡಗಿನ ವಿವಿಧ ಭಾಗದಿಂದ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು. ೩೫ರಿಂದ ೬೫ ವಯಸ್ಸಿನವರೆಗಿನ ಪುರುಷ ಹಾಗೂ ಮಹಿಳೆಯರಿಗೆ ರಸ್ತೆ ಓಟ ಏರ್ಪಡಿಸಲಾಗಿತ್ತು. ಬೆಳಿಗ್ಗೆ ೭ ಗಂಟೆಗೆ ಸರಿಯಾಗಿ ಮ್ಯಾರಥಾನ್ ಸ್ಪರ್ಧೆಗೆ ದಾನಿಗಳಾದ ಬಯವಂಡ ಮಹಾಬಲ ಹಾಗೂ ಮಾಜಿ ಒಲಂಪಿಯನ್ ಕರ್ನಲ್ ಬಿ.ಕೆ. ಸುಬ್ರಮಣಿ ಆಕಾಶಕ್ಕೆ ಗುಂಡು ಹಾರಿಸುವ ಮೂಲಕ ಚಾಲನೆ ನೀಡಿದರು. ೫ ಕಿ.ಮೀ. ಮ್ಯಾರಥಾನ್ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಾಜಿ ಒಲಂಪಿಯನ್ ಕರ್ನಲ್ ಬಿ.ಕೆ.ಸುಬ್ರಮಣಿ ಮ್ಯಾರಥಾನ್‌ನಂತಹ ಕ್ರೀಡೆಯು ಕೊಡಗಿನಲ್ಲಿ ಹೆಚ್ಚಾಗಿ ನಡೆಯಬೇಕು. ಇದರಿಂದ ವಯಸ್ಕರು ಕೂಡ ಕ್ರೀಡೆಯಲ್ಲಿ ಭಾಗವಹಿಸಿದಂತಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ವಿಶೇಷವಾಗಿ ವಯಸ್ಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಕೊಡಗು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್‌ನ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಉಪಾಧ್ಯಕ್ಷ ಪೆಮ್ಮಂಡ ಅಪ್ಪಯ್ಯ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ದಾನಿಗಳಾದ ಬಯವಂಡ ಮಹಾಬಲ, ಕಂಬಿರAಡ ಕಿಟ್ಟು ಕಾಳಪ್ಪ, ಕಂಬಿರAಡ ರೇಖಾ ಸೇರಿದಂತೆ ಇನ್ನಿತರ ಪ್ರಮುಖರು ಮಾತನಾಡಿದರು. ಪಿ.ಪೊನ್ನಮ್ಮ ಪ್ರಾರ್ಥಿಸಿ, ಅಸೋಸಿಯೇಷನ್‌ನ ಕಿಟ್ಟು ಕಾಳಪ್ಪ ಸ್ವಾಗತಿಸಿ, ನೆರ್ಪಂಡ ಹರ್ಷ ನಿರೂಪಿಸಿ, ಖಜಾಂಜಿ ಮೂಕಳೇರ ಮೀರಾ ಅಶೋಕ್ ವಂದಿಸಿದರು. ಹುದಿಕೇರಿಯ ಅಂಜಿಕೇರಿ ಕೊಡವ ಕೂಟದ ಸದಸ್ಯರು ಕಾರ್ಯಕ್ರಮ ನಿರ್ವಹಿಸಿದರು.

ಬಹುಮಾನ ವಿಜೇತರು

ಪುರುಷ ವಿಭಾಗದಲ್ಲಿ ೩೫ ವರ್ಷ ಮೇಲ್ಪಟ್ಟು: ಅರ್ಜುನ(ಪ್ರ), ಅಬ್ದುಲ್ ಮುನಿರ್(ದ್ವಿ), ಶಾಜಿ(ತೃ) ಬಿ.ಎಸ್. ಗುರುಪ್ರಸಾದ್ ಹಾಗೂ ಕುಂಞÂರಾಮನ್ ೪ನೇ ಹಾಗೂ ೫ ಸ್ಥಾನ ಪಡೆದರು. ೪೫ ವರ್ಷ ಮೇಲ್ಪಟ್ಟು: ಹಮೀದ್(ಪ್ರ), ಲಕ್ಷಿö್ಮÃಶ (ದ್ವಿ), ಬಿ.ಎಂ. ಪ್ರಕಾಶ್(ತೃ) ಪಿ.ಟಿ.ಸುರೇಶ್ ಹಾಗೂ ಎ.ಕೆ.ಗಣಪತಿ ಕ್ರಮವಾಗಿ ೪ನೇ ಹಾಗೂ ೫ನೇ ಸ್ಥಾನ ಹಂಚಿಕೊAಡರು. ೫೫ ವರ್ಷ ಮೇಲ್ಪಟ್ಟು: ಎಸ್.ಎಂ.ಹರೀಶ್(ಪ್ರ), ವಿಠಲ್‌ಶೆಟ್ಟಿ (ದ್ವಿ), ಮಿತಿ ಸೋಮೇಶ್(ತೃ), ಎನ್.ಯು. ಭೀಮಯ್ಯ, ಹಾಗೂ ಮುತ್ತುಕೃಷ್ಣನ್ ೪ನೇ ಹಾಗೂ ೫ನೇ ಸ್ಥಾನಕ್ಕೆ ತೃಪ್ತಿಪಟ್ಟರು. ೬೫ ವರ್ಷ ಮೇಲ್ಪಟ್ಟು: ಕೃಷ್ಣಶೆಟ್ಟಿ (ಪ್ರ), ಸಿ.ಡಿ.ಭೀಮಯ್ಯ(ದ್ವಿ), ಸೀತಾರಾಮ್ ಶೆಟ್ಟಿ(ತೃ) ಸ್ಥಾನ ಪಡೆದರು.

ಮಹಿಳಾ ವಿಭಾಗದಲ್ಲಿ ೩೫ ವರ್ಷ ಮೇಲ್ಪಟ್ಟು: ರೋಶಿಕ ಚಂಗಪ್ಪ (ಪ್ರ), ಪೂಜಿತ ಕಾಳಯ್ಯ(ದ್ವಿ), ಸವಿತಾ ಪೊನ್ನಪ್ಪ (ತೃ) ಎಸ್.ಎಂ.ಉಮ, ಬಿ.ಎಂ. ಸೀಮಾ, ೪ನೇ ಹಾಗೂ ೫ನೇ ಸ್ಥಾನ ಪಡೆದರು. ೪೫ ವರ್ಷ ಮೇಲ್ಪಟ್ಟು: ಬೀನಾ ಫರ್ನಾಂಡಿಸ್ (ಪ್ರ), ಬಿ.ಹೆಚ್. ವಿದ್ಯಾ(ದ್ವಿ), ಎ.ಬಿ.ಲಲಿತ(ತೃ), ದಿವ್ಯ ಮಾದಯ್ಯ ಹಾಗೂ ಕೆ.ಎಸ್.ಕೃಪ ೪ನೇ ಹಾಗೂ ೫ನೇ ಸ್ಥಾನ ಹಂಚಿಕೊAಡರು. ೫೫ ವರ್ಷ ಮೇಲ್ಪಟ್ಟು: ಎಂ.ಎಸ್.ಸರೋಜ (ಪ್ರ), ಜ್ಯೋತಿ ಸೋಮಯ್ಯ(ದ್ವಿ), ವಿಜಯಕುಮಾರಿ(ತೃ) ೬೫ ವರ್ಷ ಮೇಲ್ಪಟ್ಟು: ಬಿ.ಸಿ.ಪಾರ್ವತಿ(ಪ್ರ), ಸುಲತ ಕಾಮತ್ (ದ್ವಿ) ಸ್ಥಾನ ಪಡೆದರು.