ಸೋಮವಾರಪೇಟೆ, ಜೂ. ೫: ಸಮೀಪದ ಕಾಜೂರು ಅರಣ್ಯ ವ್ಯಾಪ್ತಿಯಲ್ಲಿ ಅನ್ಯ ಪ್ರಾಣಿಯ ದಾಳಿ ಯಿಂದ ಗಾಯ ಗೊಂಡಿದ್ದ ಜಿಂಕೆ ಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ಕಾಜೂರು ಗ್ರಾಮ ವ್ಯಾಪ್ತಿಯ ಅರಣ್ಯ ದಲ್ಲಿದ್ದ ಜಿಂಕೆಯೊAದು ಬೇರೆ ಪ್ರಾಣಿಯ ಧಾಳಿಗೆ ಸಿಲುಕಿ ತಲೆ ಭಾಗದಲ್ಲಿ ಗಾಯವಾಗಿತ್ತು. ತೀವ್ರ ನೋವು ಅನುಭವಿಸುತ್ತಿದ್ದ ಜಿಂಕೆ ಆನೆ ಕಂದಕದೊಳಗೆ ಸಿಲುಕಿ ಅಸಹಾಯಕ ಸ್ಥಿತಿಯಲ್ಲಿತ್ತು.ಇದನ್ನು ಗಮನಿಸಿದ ಕಾಜೂರಿನ ಅವಿಲಾಶ್ ಸೇರಿದಂತೆ ಇತರರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಆರ್‌ಆರ್‌ಟಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಗಾಯಗೊಂಡಿದ್ದ ಜಿಂಕೆಯನ್ನು ರಕ್ಷಿಸಿ, ನಿಸರ್ಗಧಾಮಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಿದರು.