ಶನಿವಾರಸಂತೆ, ಜೂ. ೪: ಶನಿವಾರಸಂತೆ ಪಟ್ಟಣದಲ್ಲಿ ಮುಂದಿನ ಆರು ತಿಂಗಳೊಳಗೆ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ ಜನರ ಕನಸು ಈಡೇರಿಸಲಾಗುವುದು. ಈ ಬಗ್ಗೆ ಸಂಬAಧಿಸಿದ ದಾಖಲಾತಿಗಳೊಂದಿಗೆ ತಹಶೀಲ್ದಾರರ ಜತೆ ಮಾತುಕತೆ ನಡೆಸುವುದಾಗಿ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೇಳಿದರು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರಸಂತೆ ಮತ್ತು ದುಂಡಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಪಾಲ್ಗೊಂಡು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದಾಗ, ಜನಸಾಮಾನ್ಯರ ಕೆಲಸ ಮಾಡಿದ ನಂತರ ವಿಜಯೋತ್ಸವ ಆಚರಿಸೋಣ. ದ್ವೇಷ ರಾಜಕೀಯ ಬೇಡ. ಎಲ್ಲಾ ಪಕ್ಷದವರನ್ನೂ ಸಮಾನವಾಗಿ ಪರಿಗಣಿಸುವ ಎಂದು ಮನವಿ ಮಾಡಿದರು.
ಕೆಪಿಸಿಸಿ ಮುಖಂಡ ಹಾಗೂ ಕಾಂಗ್ರೆಸ್ ವಕ್ತಾರ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ಇಂದು ಕೊಡಗು ಬಿಜೆಪಿ ಮುಕ್ತವಾಗಿದೆ. ಕಾಂಗ್ರೆಸ್ಸಿನ ಹಸ್ತ ಚಿಹ್ನೆಯಂತೆ ೫ ಗ್ಯಾರಂಟಿ ಯೊಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದ್ದು ನುಡಿದಂತೆ ನಡೆಯುತ್ತಿದೆ..ಹಿಂದಿನ ಸರ್ಕಾರದಲ್ಲಿ ಆಗಿರುವ ತಪ್ಪುಗಳು ಮರುಕಳಿಸದಿರಲಿ. ಶನಿವಾರಸಂತೆಯಲ್ಲಿ ಬಸ್ ನಿಲ್ದಾಣದ ನಿರ್ಮಾಣ ಕನಸಾಗಿಯೇ ಉಳಿದಿತ್ತು. ನೂತನ ಶಾಸಕರ ಜತೆಗೂಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುತ್ತೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್ ಮಾತನಾಡಿ, ಪಕ್ಷದ ಎಲ್ಲಾ ನಾಯಕರ, ಕಾರ್ಯಕರ್ತರ, ಸಾರ್ವಜನಿಕರ ಒಗ್ಗಟ್ಟಿನ ಸಹಕಾರದಿಂದ ಎರಡು ದಶಕಗಳ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಇಬ್ಬರು ಯುವ ನಾಯಕರಿಂದ ಜಿಲ್ಲೆಯ ಅಭಿವೃದ್ಧಿ ಸಾಧಿಸಬೇಕಾಗಿದೆ. ಕಾಂಗ್ರೆಸ್ ದ್ವೇಷ ರಾಜಕೀಯ ಮಾಡುವುದಿಲ್ಲ. ಕಾರ್ಯಕರ್ತರು ಎಚ್ಚರಿಕೆಯಿಂದ ವರ್ತಿಸಬೇಕು. ಸೋಮವಾರಪೇಟೆ ಪಟ್ಟಣದಲ್ಲಿ ಶೀಘ್ರದಲ್ಲಿ ಶಾಸಕರ ಕಚೇರಿ ಕಾರ್ಯಾರಂಭ ಮಾಡಲಿದ್ದು ಪಕ್ಷ ಬೇಧವಿಲ್ಲದೆ ಎಲ್ಲರನ್ನೂ ಗೌರವಿಸಿ ಕೆಲಸ ಮಾಡಿಕೊಡಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಪಿಸಿಸಿ ಮುಖಂಡರಾದ ಟಿ.ಪಿ.ರಮೇಶ್, ಜಿಲ್ಲಾ ಮುಖಂಡರಾದ ವಿ.ಪಿ.ಶಶಿಧರ್, ದೇಶಪಾಂಡೆ, ಮಂಜುನಾಥ್, ಬೋಸ್, ಪ್ರಮೋದ್, ಸುರೇಶ್, ಹರೀಶ್, ಸಂಜಯ್ ಜೀವಿಜಯ್, ಎಸ್.ಕೆ.ವೀರಪ್ಪ, ಶರತ್ ಶೇಖರ್, ಡಿ.ಪಿ.ಬೋಜಪ್ಪ, ಆದಿಲ್ ಪಾಶ, ಆದಿತ್ಯ, ಅಪ್ಪಸ್ವಾಮಿ, ಮಹಮ್ಮದ್ ಪಾಶ, ಚಂದ್ರಕಾAತ್, ವಕೀಲ ಜಯೇಂದ್ರ, ಜಿಲ್ಲಾ, ತಾಲೂಕು, ಹೋಬಳಿ ಘಟಕದ ಪಕ್ಷದ ಪದಾಧಿಕಾರಿಗಳು, ಶನಿವಾರಸಂತೆ ಮತ್ತು ದುಂಡಳ್ಳಿ ಗ್ರಾಮ ಪಂಚಾಯಿತಿ ಪದಾಧಿಕಾರಿಗಳು ಇತರರು ಇದ್ದರು.
ಕಾಂಗ್ರೆಸ್ ಯುವ ಮುಖಂಡ ಎ.ಎಚ್.ಚಂದ್ರಕಾAತ್ ಕಾರ್ಯಕ್ರಮ ನಿರೂಪಿಸಿ, ನಿರ್ವಹಿಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ಸ್ವಾಗತಿಸಿದರು.