ಮಡಿಕೇರಿ, ಜೂ. ೪: ಹತ್ತು ಹೆಚ್‌ಪಿ ಗಿಂತ ಹೆಚ್ಚುವರಿ ವಿದ್ಯುತ್ ಸಂಪರ್ಕ ಹೊಂದಿರುವ ಕಾಫಿ ಬೆಳೆಗಾರರ ವಿದ್ಯುತ್ ಸ್ಥಾವರಗಳಲ್ಲಿ ಬಾಕಿ ಕಂದಾಯ ಉಳಿಸಿಕೊಂಡಿರು ವುದಕ್ಕೆ ಈಗಾಗಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸೂಚನೆ ನೀಡಲಾಗಿದೆ. ಬಾಕಿ ಕಂದಾಯ ಮೊತ್ತವನ್ನು ಮುಂದಿನ ಒಂದು ವಾರದ ಅವಧಿಯೊಳಗೆ ಪೂರ್ಣ ಪ್ರಮಾಣದಲ್ಲಿ ಹತ್ತಿರದ ಚಾ.ವಿ.ಸ.ನಿ.ನಿ. ಕಂದಾಯ ಶಾಖೆಗೆ ಪಾವತಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಮುಂದು ವರಿದು ನಿಗದಿತ ಅವಧಿಯೊಳಗೆ ಬಾಕಿ ಕಂದಾಯವನ್ನು ಪಾವತಿಸದಿದ್ದಲ್ಲಿ ಕ್ಲಬ್ಬಿಂಗ್ ನೋಟಿಸ್ ನೀಡಲಾಗಿರುವ ವಿದ್ಯುತ್ ಸ್ಥಾವರಗಳ ವಿದ್ಯುತ್ ನಿಲುಗಡೆಗೊಳಿಸಲಾಗುವುದರಿಂದ, ಇಂತಹ ಘಟನೆಗಳಿಗೆ ಅವಕಾಶ ನೀಡದೆ ಕೂಡಲೇ ಬಾಕಿ ಮೊತ್ತವನ್ನು ಪಾವತಿಸುವಂತೆ ಸೆಸ್ಕ್ ಎಂಜಿನಿಯರ್ ಅನಿತಾ ಬಾಯಿ ಅವರು ಕೋರಿದ್ದಾರೆ.