ನಿಸರ್ಗದೊAದಿಗೆ ಸಹಜೀವನ ಮಾನವನ ಬದುಕಿನ ಮೂಲತತ್ವ. ಆದರೆ, ಪ್ರಕೃತಿಯೊಂದಿಗಿನ ಸಹಬಾಳ್ವೆಯ ಜೀವನ ವಿಧಾನದಿಂದ ದೂರಾಗಿ, ವ್ಯಾಪಾರೀಕರಣ, ಆಧುನೀಕರಣ, ನಗರೀಕರಣದ ಲಾಲಸೆಯಿಂದ, ಕೈಗಾರಿಕಾ ಕ್ರಾಂತಿಯೊAದಿಗೆ, ಪರಿಸರದ ವಿನ್ಯಾಸ ಬದಲಾಗಿದ್ದು, ನಮ್ಮ ಉಳಿವಿಗೆ, ಸಂಚಕಾರ ತಂದಿದೆ.

ಇAದು ವಿಶ್ವಪರಿಸರ ದಿನ ‘ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರ’ ಈ ಬಾರಿಯ ಧ್ಯೇಯವಾಕ್ಯ. ಇತರ ಎಲ್ಲಾ ‘ಗ್ರಾರಂಟಿ’ಗಳಿಗಿAತ ಪ್ರಮುಖ ಆದ್ಯತೆ ಪರಿಸರ ಸಂರಕ್ಷಣೆಯ ಗ್ಯಾರಂಟಿ’ ನೀಡುವುದು ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಖಾತರಿ ಪಡಿಸಬಲ್ಲುದು. ಸರಕಾರ, ಪ್ರಜಾಪ್ರತಿನಿಧಿಗಳು ಸಮಾಜಸೇವಾ ಸಂಘಟನೆಗಳು, ಅಧಿಕಾರಿಗಳು, ಶ್ರೀಸಾಮಾನ್ಯರು ಯಾವುದೇ ರಾಜಿ ಇಲ್ಲದೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದಕ್ಕೆ ಇದು ಸಕಾಲ.

ಪ್ರಾಣಿ ಪಕ್ಷಿ ಪ್ರಭೇದ ಜೀವ ವೈವಿಧ್ಯ, ಅಪರೂಪದ ಸಸ್ಯ ವೈವಿಧ್ಯ, ಉಳಿಸಿ, ಮುಂದಿನ ಪೀಳಿಗೆಗೂ ಜೀವವಾಯು ಉಣಿಸುವ, ನಮ್ಮ ಮಕ್ಕಳ ಉಜ್ವಲ ನಾಳೆಗಳಿಗೆ ನೈಸರ್ಗಿಕ ಹಸಿರು ಹೊದಿಕೆ ವಿಶಾಲವಾಗಿಸುವ ಕಾಯಕಕ್ಕೆ ಕಟಿಬದ್ಧರಾಗ ಬೇಕಿದೆ.

ಪರಿಸರ ಮಾಲಿನ್ಯದಿಂದಾಗ, ಅಂತರ್ಜಲ ಮಟ್ಟ ಕುಸಿಯುತ್ತಿದೆ, ಜಾಗತಿಕ ತಾಪಮಾನ ಏರಿಕೆಯಾಗುತ್ತದೆ. ಈ ಪ್ರಮುಖ ಸಮಸ್ಯೆಗಳನ್ನು ಎದುರಿಸಲು ಜಾಗತಿಕ ಮಟ್ಟದಲ್ಲಿ ತ್ವರಿತ ಕ್ರಮಗಳು ಅನಿವಾರ್ಯ.

ಶುದ್ಧಜಲ ಕುಡಿಯೋಣ, ಅಂತರ್ಜಲ ಕೊಲ್ಲದಿರೋಣ. ಕೇಂದ್ರ ಜಲಶಕ್ತಿ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ಜಲಮೂಲ ಗಣತಿ ವರದಿ ಆತಂಕಕಾರಿ ಅಂಶಗಳನ್ನು ಒಳಗೊಂಡಿದೆ. ಕರ್ನಾಟಕದ ಶೇಕಡ ೭೮ರಷ್ಟು ಜಲಮೂಲಗಳು ನಿರುಪಯುಕ್ತವಾಗಿವೆ ಎಂಬ ಕಳವಳಕಾರಿ ಮಾಹಿತಿ ಅದರಲ್ಲಿದೆ.

ಜಲಮೂಲಗಳು ನಿರುಪಯುಕ್ತವಾಗಿರುವುದಕ್ಕೆ ಕೈಗಾರಿಕಾ ತ್ಯಾಜ್ಯ ಸೇರ್ಪಡೆ, ಹೂಳು ತುಂಬಿರುವುದು, ಅವುಗಳಲ್ಲಿ ಉಪ್ಪು ಸಂಗ್ರಹವಾಗಿರುವುದು, ಒತ್ತುವರಿ ಆಗಿರುವುದು, ಪೂರ್ಣವಾಗಿ ಬತ್ತಿ ಹೋಗಿರುವುದು ಪ್ರಮುಖ ಕಾರಣಗಳಾಗಿವೆ. ನಗರೀಕರಣದ ಒತ್ತಡ, ಜನಸಂಖ್ಯೆ ಹೆಚ್ಚಳವೂ ನೀರಿನ ಕೊರತೆ ಎದುರಾಗುವಂತೆ ಮಾಡಿವೆ. ಜಲಮೂಲಗಳು ಆಯಾ ಪ್ರದೇಶಗಳ ಹವಾಮಾನದ ಮೇಲೆ ನೇರ ಪರಿಣಾಮ ಬಿರುವುದರ ಜೊತೆಗೆ ಕುಡಿಯುವ ನೀರು, ನೀರಾವರಿಗೂ ಮೂಲವಾಗಿ ಅಂತರ್ಜಲ ಮಟ್ಟ ಹೆಚ್ಚಳಕ್ಕೂ ನೆರವಾಗಲಿದೆ.

ಈ ಹಿನ್ನೆಲೆಯಲ್ಲಿ ನೀರಿನ ಹಿತ-ಮಿತ ಬಳಕೆ ಸೂಕ್ತ. ತ್ಯಾಜ್ಯ ನೀರು ಜಲಮೂಲಗಳ ಒಡಲು ಸೇರುವುದಕ್ಕೆ ತಡೆ, ಒಡಲಿಗೆ ಹೂಳು ತುಂಬದAತೆ ಎಚ್ಚರಿಕೆಯ ಕ್ರಮಗಳು ಅಗತ್ಯ. ಆಯಾ ಜಲಮೂಲಗಳಿಗೆ ಅಗತ್ಯ ವಿಧಾನಗಳ ಸಂರಕ್ಷಣಾ ತಂತ್ರ ಬಳಸಿ, ಕೊಳ, ಕೆರೆ, ಸರೋವರ, ಜಲಾಶಯ, ಜಲಸಂಗ್ರಹಾರಗಳನ್ನು ಉಳಿಸಿಕೊಳ್ಳಲು ಯಾವುದೇ ರಾಜಿ ಸೂತ್ರಗಳಿಗೆ ಬಲಿಯಾಗದೆ, ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದು ಇಂದಿನ ಪ್ರಧಾನ ಅಗತ್ಯತೆ. ಮಳೆನೀರು ಸಂಗ್ರಹಕ್ಕೆ ಒತ್ತು ನೀಡೋಣ. ಕಾಂಕ್ರಿಟ್ ಕಾಡು ಮಾಯವಾಗಿಸಿ, ನಿತ್ಯಹರಿದ್ವರ್ಣಕ್ಕೆ ಆದ್ಯತೆ ನೀಡಿ, ಮನೆ ಆವರಣ, ಸುತ್ತಮುತ್ತ ಖಾಲಿ ಇರುವ ಸರ್ಕಾರಿ ಜಮೀನು, ಕಚೇರಿ ಆವರಣ, ವಿನಾಶಕ್ಕೆ ತಲಪಿರುವ ಅರಣ್ಯ ಪ್ರದೇಶ, ರಸ್ತೆ ಬದಿ, ಬಡಾವಣೆಗಳ ಆವರಣಗಳಲ್ಲಿ ದೇಸೀ ಸಸಿಗಳನ್ನು ಚಿಗುರಿಸೋಣ, ಅರಣ್ಯ, ರೈತರ ಜಮೀನಿನಲ್ಲಿ ಚೆಕ್‌ಡ್ಯಾಂ ನಿರ್ಮಿಸಿಕೊಳ್ಳಬಹುದು. ಕಾಡುಪ್ರಾಣಿಗಳು, ಪಕ್ಷಿಗಳ ದಾಹ ತಣಿಸಬಹುದು. ಊರಿನಲ್ಲಿ ಬೇವು ಅರಳಿ ಮರಗಳನ್ನು ಅರಳಿಸೋಣ, ನಡೆದು ಬಂದ ಪರಂಪರೆಗೆ ಅನುಗುಣವಾಗಿ ಮರಗಳ ತೋಪು, ದೇವರಕಾಡು ಸಂರಕ್ಷಿಸಿ ಪ್ರಕೃತಿ ಮಾತೆಯ ಆರಾಧನೆಗೆ ಗಮನಹರಿಸಿ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳೋಣ.

ನಮ್ಮ ಈ ನಡೆ, ಇಂದು ಜಗತ್ತನ್ನು ತೀವ್ರವಾಗಿ ಕಾಡುತ್ತಿರುವ ಜಾಗತಿಕ ತಾಪಮಾನ ಏರಿಕೆ ಸಮಸ್ಯೆಗೂ ಪರಿಹಾರ ಆಗಬಲ್ಲದು, ವಾಹನಗಳು, ಕೈಗಾರಿಕೆಗಳು ವಿಷಾನಿಲ ಹೊರಸೂಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗತೊಡಗಿ ಪರಿಸರದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಆಗಿ, ಇಂಗಾಲದ ಡೈಆಕ್ಸೆöÊಡ್ ಪ್ರಮಾಣ ಹೆಚ್ಚಳ ಜಾಗತಿಕ ತಾಪಮಾನ ಏರಿಕೆಗೆ ಕಾರಣ. ಇದರಿಂದ ಓಜೋನ್ ಪದರದಲ್ಲಿ ರಂಧ್ರ ಹೆಚ್ಚತೊಡಗಿ, ನೇರಳಾತೀತ ಕಿರಣಗಳು ಭೂಮಿಗೆ ನೇರಾಗಿ ತಾಗತೊಡಗಿ ಹಸಿರು ಆವರಣದ ಮೇಲೆ ದುಷ್ಪರಿಣಾಮ ಬೀರಿ, ಅಂಟಾರ್ಟಿಕಾದ ಹಿಮ ಕರಗಿ ಶಾಖದೊಂದಿಗೆ ಮರಳಿನಿಂದಾವೃತ ಮರುಭೂಮಿ ವಿಸ್ತಾರವಾಗಿದೆ. ಅಧಿಕ ಉಷ್ಣಾಂಶದಿAದ, ಪಶ್ಚಿಮಘಟ್ಟ ಸೇರಿದಂತೆ ಹಸಿರು ವಲಯದ ಅರಣ್ಯ ಪ್ರದೇಶಗಳಲ್ಲಿ ಸಸಿಗಳು ತಾಪಮಾನದ ಬದಲಾವಣೆಯಿಂದ ಏದುಸಿರು ಬಿಡತೊಡಗಿ ನಲಗುತ್ತಿರುವುದು ಅಧ್ಯಯನಗಳಿಂದ ಸ್ಪಷ್ಟವಾಗಿದೆ. ಆ ಪ್ರದೇಶಗಳಲ್ಲಿ ಸುಡುಬೇಸಿಗೆಯ ಧಗೆಯಿಂದ ನೀರಿನ ಕೊರತೆ ಅನುಭವಿಸುವಂತಾಗಿದೆ. ಕರ್ನಾಟಕದ ಕರಾವಳಿಯೂ ಅಪಾಯದ ಅಂಚಿನಲ್ಲಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಅನೇಕ ಜೀವ ಪ್ರಭೇದಗಳು ಅಳಿದಿವೆ. ಭೂಮಿಯ ಮೇಲಿನ ಋತುಗಳ ಅಸಮತೋಲನದಿಂದ ವಿಪರೀತ ಮಳೆ, ಸೆಖೆ, ಚಳಿ ಅನುಭವಿಸು ವಂತಾಗಿದೆ. ಸುನಾಮಿ, ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಸೌರಶಾಖ, ಭೂಕಂಪದಿAದ ಬದುಕು ಅಸಹನೀಯವಾಗತೊಡಗಿದೆ. ಈ ಸಮಸ್ಯೆಗಳ ಹಿನ್ನೆಲೆಯಲ್ಲಿ ಹಣದುಬ್ಬರವೂ ಜೀವನವನ್ನು ಹೈರಾಣಾಗಿಸಿದೆ.

ಪರಿಸರವನ್ನು ಅವಲಂಬಿಸಿಯೇ ಬದುಕು ಎಂಬುದರ ಸ್ಪಷ್ಟ ಅರಿವಿಕೆಯೊಂದಿಗೆ, ಪರಿಸರ ಸಂರಕ್ಷಣೆ, ತುಡಿಯುವ ಪರಿಸರವಾದಿಗಳ ಚಿಂತನೆಗಳನ್ನು ಆಲಕ್ಷಿಸದಿರೋಣ. ಜಲಮಾಲಿನ್ಯ, ವಾಯುಮಾಲಿನ್ಯ ದೊಂದಿಗೆ ಪರಿಸರ ಮಾಲಿನ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗುತ್ತಿರುವ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿಸಿ, ಶೀಘ್ರದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ರೂಪಿಸಲು ಶ್ರಮಿಸೋಣ.’

ದೀರ್ಘ ಪ್ರಯಾಣಕ್ಕೆ ಬೈಕ್ ಕಾರಿನ ಬದಲು ರೈಲು, ಸಮೂಹ ಸಾರಿಗೆ ಬಳಕೆ, ಕಡಿಮೆ ದೂರವಾದರೆ ಬೈಸಿಕಲ್, ನಡಿಗೆ, ವಿದ್ಯುತ್ ಬಳಕೆ ಬದಲು ಸೌರಶಕ್ತಿ ಮೂಲಗಳಿಗೆ ಆದ್ಯತೆ, ಆಧುನಿಕ ವಸ್ತುಗಳ ಬದಲು ದೇಸೀ ಮತ್ತು ಸ್ಥಳೀಯ ವಸ್ತುಗಳ ಬಳಕೆ ಹೇರಳವಾಗಿ ಸೋಣ. ಮುಖ್ಯವಾಗಿ ಜೀವವೈವಿಧ್ಯ ಸಂರಕ್ಷಣೆ ಮುಖ್ಯ. ಪ್ಲಾಸ್ಟಿಕ್ ಮಾಲಿನ್ಯ, ರಸಗೊಬ್ಬರ ಹಾಗೂ ಹಾನಿಕಾರಕ ರಾಸಾಯನಿಕಗಳ ಬಳಕೆ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿ, ನೀರು, ಗಾಳಿ, ಪರಿಸರ ಮಣ್ಣಿನ ಆರೋಗ್ಯದಂತಹ ಪ್ರಾಕೃತಿಕ ಅಂಶಗಳ ನಿರ್ವಹಣೆಗೆ ಗಮನ ಕೇಂದ್ರೀಕರಿ ಸೋಣ. ಒಟ್ಟಿನಲ್ಲಿ ಎಲ್ಲರೂ ಸರ್ವಸನ್ನದ್ಧ ರಾಗೋಣ.

-ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ.