ಪ್ರಪಂಚದಲ್ಲಿ ಭೂಮಿತಾಯಿ ಮಡಿಲಲ್ಲಿ ಜೀವಿಸುವ ಜೀವಿಗಳ ಪೈಕಿ ಬುದ್ಧಿವಂತ ಮಾನವ ಪ್ರಾಣಿ ಪ್ರಾಮುಖ್ಯ ನಾಗಿದ್ದಾನೆ. ಮನುಷ್ಯನಿಗೆ ಪ್ರಾಣ, ವಾಯು, ನೀರು, ಅಗ್ನಿ ಜನ್ಮದಿಂದ ಪ್ರಾರಂಭವಾಗಿ ಕೊನೆಯ ಉಸಿರು ಇರುವವರೆಗೆ ಅಗತ್ಯ ವಸ್ತು ಆಗಿದೆ. ಹಿಂದಿನ ಕಾಲದಲ್ಲಿ ಭೂಮಿಯ ಮೇಲೆ ಗ್ರಾಮ, ರಾಜ್ಯ ದೇಶದಲ್ಲಿ ಪ್ರಾಕೃತಿಕ ಸಂಪತ್ತು, ಗಾಳಿ, ನೀರು, ಆಹಾರ ವಿಪುಲವಾಗಿತ್ತು. ಕಾರಣ ಜನಸಂಖ್ಯೆ ಕಡಿಮೆ ಇತ್ತು ಕಾಡು, ವನಸಂಪತ್ತು ಪರಿಸರ ಸ್ವಚ್ಛವಾಗಿತ್ತು. ನಾಗರಿಕತೆ ಮುಂದುವರೆದAತೆ ಹೊಸ ಆವಿಷ್ಕಾರ, ವಿಜ್ಞಾನದ ಮುನ್ನಡೆ ಜನಸಂಖ್ಯಾ ಸ್ಫೋಟಕ್ಕೆ ಭೂದೇವಿ ಪ್ರದೇಶ ವಾಯುಮಾಲಿನ್ಯಗೊಂಡು ಮನುಷ್ಯ ಜೀವಿಗೆ ಎಲ್ಲಾ ರೀತಿ ತೊಂದರೆ ಆಗುತ್ತಿದೆ.

ತಾ. ೫ ಜೂನ್ ವಿಶ್ವ ಪರಿಸರ ದಿವಸ ನೆನಪಿಸಿ ಕೊಳ್ಳುವ ದಿವಸ. ಭೂಮಿಯ ಮೇಲೆ ವಾಸವಿರುವ ಮನುಷ್ಯನಿಗೆ ಜೀವಿಸಲು ಅಗತ್ಯ ವಾಯು ನೀರು, ತಮ್ಮ ಸುತ್ತಲಿನ ಪರಿಸರ ಶುಚಿತ್ವ ಮತ್ತು ಮಾಲಿನ್ಯ ತಡೆಯಲು ನಾವು ಪ್ರಯತ್ನಿಸಬೇಕು. ಮುಖ್ಯವಾಗಿ ತಮ್ಮ ಮನೆ ಯಿಂದಲೇ ಪ್ರಾರಂಭಿಸಬೇಕು. ಮನೆಯಲ್ಲಿ ತಂದೆ-ತಾಯಿ, ಮಕ್ಕಳಿಗೆ ತಿಳಿಹೇಳಬೇಕು. ಚಿಕ್ಕಂದಿನಲ್ಲೇ ಸುತ್ತಲಿನ ಜಾಗದ ಶುಚಿತ್ವ, ಶುದ್ಧನೀರು, ಸೇವನೆ, ಆರೋಗ್ಯಕರ ಆಹಾರ ಸೇವನೆ, ಹಸಿರು ತರಕಾರಿ ಸೇವನೆ, ಲಘುಪಾನೀಯ ಕಡಿಮೆ ಮಾಡಿ ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಲು ತಿಳಿಸಬೇಕು. ದಿನನಿತ್ಯದ ವಾರ್ತಾಪತ್ರಿಕೆ ಓದಿ ನಂತರ ಅದನ್ನು ಅಂದವಾಗಿ ಸಣ್ಣ ಟೇಬಲ್‌ನಲ್ಲಿ ಜೋಡಿಸಿಡುವುದು, ಆನಂತರ ಅದನ್ನು ರದ್ದಿ ಪೇಪರ್ ಅಂಗಡಿಗೆ ವಿಲೇವಾರಿ ಮಾಡಿಸುವುದು. ಕೆಲವು ಜನರಿಗೆ ಗ್ರಾಮ ಅಥವಾ ಪಟ್ಟಣದಲ್ಲಿ ಸ್ವಲ್ಪ ಜಾಗ ಮನೆಯ ಸುತ್ತ ಇರುತ್ತದೆ. ಅದರಲ್ಲಿ ತರಕಾರಿ, ಹಣ್ಣು-ಹಂಪಲು ಗಿಡ ನೆಟ್ಟು ಅದಕ್ಕೆ ಮನೆಯಲ್ಲಿ ಪಾತ್ರೆ ತೊಳೆದ ನೀರು, ತರಕಾರಿಗಳನ್ನು ತೊಳೆದ ನೀರು ಇವುಗಳನ್ನು ಗಿಡಕ್ಕೆ ಹಾಕಬಹುದು. ಪಪ್ಪಾಯಿ ಗಿಡ, ಕಬ್ಬುಗಿಡ ನೆಟ್ಟು ಇದಕ್ಕೆ ನೀರನ್ನು ಹಾಕಬಹುದು. ಒಣಕಸ, ಪ್ಲಾಸ್ಟಿಕ್, ಆಯಿಲ್ ಪೇಪರ್, ಚಾಕಲೇಟ್, ಬಿಸ್ಕೇಟ್ ಕವರ್ ಬೇರೆ ಇಡಬೇಕು. ಬೆಂಕಿಹಚ್ಚಿ ನಾಶ ಮಾಡುವು ದಾದರೆ ಅದರಲ್ಲಿ ಜೂಸ್ ಬಾಟಲ್, ಬಿಯರ್ ಬಾಟಲ್ ಗಾಜಿನ ವಸ್ತುವನ್ನು ಸುಡಬಾರದು, ಯಾಕೆಂದರೆ ಬಾಟಲ್ ಸ್ಪೋಟಗೊಂಡು ಅಪಾಯ ಆಗುತ್ತದೆ. ಇನ್ನು ತರಕಾರಿ ತ್ಯಾಜ್ಯ, ಹಾಲು, ಮೊಸರು, ಹಣ್ಣು-ಹಂಪಲು ತ್ಯಾಜ್ಯ ವಸ್ತುಗಳನ್ನು ೪ಘಿ೪ ಗುಂಡಿ ತೆಗೆದು ಅದರಲ್ಲಿ ಶೇಖರಿಸಿ ದರೆ ಹೂಗಿಡ, ತರಕಾರಿ ಗಿಡಕ್ಕೆ ಸಾವಯವ ಗೊಬ್ಬರ ಆಗುತ್ತದೆ ಮತ್ತು ಸ್ವಲ್ಪ ಪೆನಾಯಿಲ್ ಕ್ರಿಮಿನಾಶಕ ಸಿಂಪಡಿಸಿದರೆ ಸಾಂಕ್ರಮಿಕ ರೋಗದ ಕ್ರಿಮಿಕೀಟ ನಾಶ ಆಗಿ ನುಸಿ, ನೊಣ, ಕೀಟಗಳು ನಾಶವಾಗುತ್ತದೆ. ಪ್ರತಿಯೊಬ್ಬರು ತಮ್ಮ ಮನೆಯಿಂದ ಶುಚಿತ್ವ ಆರಂಭಿಸಿ ಉತ್ತಮ ಗಾಳಿ, ನೀರು ಸೇವನೆಯಿಂದ ವಾತಾವರಣ ಆರೋಗ್ಯ ಇದ್ದಲ್ಲಿ ಪರಿಸರ ಶುಚಿಯಾಗಿರುತ್ತದೆ. ಹಸಿರು ಗಿಡ ನೆಟ್ಟು, ಭೂಮಿ ಸಂರಕ್ಷಿಸಲು ಪಣ ತೊಡುವುದು ಉತ್ತಮ. ಪರಿಸರ ದಿವಸ ಆಚರಿಸಲು ಕಾರಣ ಹಲವಾರು ಇದೆ. ವಿಜ್ಞಾನದ ಮುನ್ನಡೆಯಿಂದ ಅಪಾಯ ಸಹ ಇದೆ.

ಉದಾಃ ಸಮುದ್ರಕ್ಕೆ ಕಲುಷಿತ ನೀರು ಸೇರಿ ನೀರು ಉಪ್ಪು ಆಗಿದೆ. ಈ ಹಿಂದೆ ಇರಾನ್-ಇರಾಕ್ ದೇಶ ಯುದ್ಧದಲ್ಲಿ ಪೆಟ್ರೋಲ್ ಅನಿಲಸ್ಥಾವರ ನಾಶಗೊಂಡು ಬಂಗಾಳಕೊಲ್ಲಿ, ಹಿಂದೂಮಹಾಸಾಗರ ಹೊತ್ತಿ ಉರಿದು ಪರಿಸರ ಮಲಿನ ಆಗಿದೆ. ಸಮುದ್ರದಲ್ಲಿ ಪೆಟ್ರೋಲ್, ಡಿಸೇಲ್ ಅಲೆಗಳು ತೇಲಿ ಬಂದಿವೆ. ಜಲಚರ ನಾಶವಾಗಿದೆ. ಕುಶಾಲನಗರದ ಮೀಸಲು ಅರಣ್ಯದಲ್ಲಿ ಹಸಿರು ಗಿಡಮರ, ಓಣಗಿದ ಬಿದಿರು ಒಂದಕ್ಕೊAದು ತಾಗಿ ಅಗ್ನಿ ಕಾಡ್ಗಿಚ್ಚು ಆಗುವುದು, ಕಾಡುನಾಶಕ್ಕೆ ಕಾರಣವಾಗುವುದು.

ರೈತರು ಗದ್ದೆಯಲ್ಲಿ ಬಳಸಿದ ಕ್ರಿಮಿನಾಶಕದಿಂದ ನೀರು ತೋಡಿನಲ್ಲಿ ಇದ್ದ ಕೊಯಿಲೆ ಮೀನು, ಬಿಳಿಪುಡಿ ಬಳಸಿದ ಕ್ರಿಮಿನಾಶಕದಿಂದ ನೀರು ತೋಡಿನಲ್ಲಿ ಇದ್ದ ಕೊಯಿಲೆ ಮೀನು, ರಾಸಾಯಿನಿಕ ಗೊಬ್ಬರ, ಮೊಬೈಲ್ ಟವರ್ ಅಳವಡಿಕೆ ಕಾರಣ ಚಿಟ್ಟೆಪಕ್ಷಿ, ಮನೆ ಗುಬ್ಬಚ್ಚಿ ಸಂಕುಲ ನಶಿಸಿದೆ. ಆದ್ದರಿಂದ ಈ ಭೂಮಿ ತಾಯಿ ಮಲಿನಗೊಳಿಸದೆ, ಮಾನವ ಜೀವನ ಉತ್ತಮ ಆಗಲು ಪರಿಸರ ಶುಚಿತ್ವ, ಒಳ್ಳೆಯ ಆರೋಗ್ಯ ಪಡೆಯಲು ನಾವೆಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕು.

-ಎನ್. ಎಸ್. ಕುಶಾಲಪ್ಪ, ಕಾಂಡನಕೊಲ್ಲಿ

ಮೊ:೭೬೨೫೦೯೬೩೧೨