ಕಣಿವೆ, ಜೂ. ೪: ಕೃಷಿಕರು ಈ ಬಾರಿ ಅತ್ಯಂತ ಹೆಚ್ಚು ಖುಷಿಯಿಂದ ಕೈಗೊಂಡಿರುವ ಶುಂಠಿ ಫಸಲಿಗೆ ಸರಾಸರಿ ಇದೀಗ ಮೂರು ತಿಂಗಳು.
ಶುAಠಿ ಬಿತ್ತನೆಯ ಆರಂಭದ ಒಂದೆರಡು ತಿಂಗಳ ಅವಧಿಯಲ್ಲಿ ಮಳೆಯೇ ಬಾರದ ಕಾರಣ ಶುಂಠಿ ಅಷ್ಟೇನು ಪೂರ್ಣ ಪ್ರಮಾಣದಲ್ಲಿ ಮೊಳಕೆಯೊಡೆದು ಮೇಲೆ ಬಂದಿರಲಿಲ್ಲ. ಹೆಚ್ಚಾದ ಬಿಸಿಲ ಕಾವು ಹಾಗೂ ಭುವಿಯ ಧಗೆಗೆ ಬಿತ್ತನೆ ಬೀಜ ಹೈರಾಣಾಗಿ ಹೋಗಿತ್ತು. ಕ್ರಮೇಣ ಮಳೆ ಸುರಿಯಲು ಆರಂಭಿಸಿದ ನಂತರ ಬಿಸಿಲ ಝಳಕ್ಕೆ ಸಿಲುಕಿ ಮೌನದಿ ಮಣ್ಣಿನೊಳಗೆ ಕುಳಿತಿದ್ದ ಶುಂಠಿ ಬಿತ್ತನೆ ಬೀಜ ಇದೀಗ ಮೊಳಕೆಯೊಡೆದು ಮೇಲೆ ಬರಲಾರಭಿಸಿದೆ. ಈ ಹಿಂದೆ ಮೊಳಕೆಯೊಡೆದು ಮೇಲೆ ಬಂದಿದ್ದ ಕಡ್ಡಿಗಳು ಮೂರ್ನಾಲ್ಕು ಗರಿಗ ಳೊಂದಿಗೆ ಮೇಲೆ ಮೇಲೆ ಬರುತ್ತಿವೆ. ಜೊತೆಗೆ ಕಳೆಯ ಗಿಡಗಳೂ ಕೂಡ ಶುಂಠಿಗಿAತ ವೇಗವಾಗಿ ಬೆಳೆಯುತ್ತಿರುವುದರಿಂದ ಕೃಷಿಕರು ಶುಂಠಿಯ ಕಳೆ ತೆಗೆಯಲು ಮುಂದಾಗಿದ್ದಾರೆ.
ಶುಂಠಿಯ ಕಳೆ ತೆಗೆದರೆ ಶುಂಠಿ ಬುಡದ ಮಣ್ಣು ಕೂಡ ಸಡಿಲಗೊಂಡು ನೀರನ್ನು ಹೀರಿ ಬೆಳೆಯಲು ಅನುಕೂಲವಾಗುತ್ತದೆ. ಜೊತೆಗೆ ರಸಾಯನಿಕ ಗೊಬ್ಬರದ ಅಂಶವನ್ನು ಹೀರಿಕೊಳ್ಳಲು ಸಹಕಾರಿಯಾಗುತ್ತದೆ. ಶುಂಠಿಯೊಳಗಿನ ಕಳೆ ತೆಗೆದ ರೈತರು ಪಟದ ಸಾಲಿನ ಮಣ್ಣನ್ನು ಕೆರೆದು ಶುಂಠಿಯ ಸೈಡ್ ಕಟ್ಟಲು ಮುಂದಾಗುತ್ತಿದ್ದಾರೆ.
ಕೂಲಿ ಜಾಸ್ತಿ: ಇದೀಗ ಕೆಲಸಕ್ಕೆ ಸ್ಥಳೀಯ ಕೂಲಿ ಕಾರ್ಮಿಕರೇ ಸಿಗದಂತಹ ಪರಿಸ್ಥಿತಿ ನಿರ್ಮಾಣ ಗೊಂಡಿದೆ. ಹಾಗಾಗಿ ಕೃಷಿಕರು ದುಪ್ಪಟ್ಟು ಹಣವನ್ನು ತೆತ್ತು ಕೂಲಿ ಕಾರ್ಮಿಕರನ್ನು ದೂರದ ಊರು ಗಳಿಂದ ಕರೆತಂದು ಕೃಷಿ ಕೆಲಸ ಮಾಡುವಂತಾಗಿದೆ. ಮಹಿಳಾ ಕಾರ್ಮಿಕರಿಗೆ ದಿನವೊಂದಕ್ಕೆ ೩೦೦ ರೂ.ಗಳಿಂದ ೩೫೦ ರೂ. ಮತ್ತು ಪುರುಷ ಕಾರ್ಮಿಕರಿಗೆ ೬೦೦ ರಿಂದ ೬೫೦ ಹಾಗೂ ೭೦೦ ರೂ. ಕೊಡಲಾಗುತ್ತಿದೆ.
ಅತ್ಯಂತ ದುಬಾರಿ ಖರ್ಚು: ಯಾವುದೇ ಬೆಳೆಗಳಿಗೆ ಹೋಲಿಸಿದಲ್ಲಿ ಅತ್ಯಂತ ದುಬಾರಿಯಾದ ಬೆಳೆಯಾಗಿದೆ. ಅಂದರೆ ಒಂದು ಎಕರೆ ಭೂಮಿಯಲ್ಲಿ ಶುಂಠಿ ಕೃಷಿ ಕೈಗೊಳ್ಳಲು ಎಂಟರಿAದ ಹತ್ತು ತಿಂಗಳ ಅವಧಿಗೆ ೩.೭೫ ಲಕ್ಷ ರೂ.ಗಳಿಂದ ರೂ. ೪ ಲಕ್ಷ ಹಣ ಖರ್ಚಾಗುತ್ತಿದೆ. ಶುಂಠಿ ಬಿತ್ತನೆಗೆ ಯೋಜಿಸಿದ ಭೂಮಿಯನ್ನು ಉಳುಮೆ ಮಾಡಿ ಅಚ್ಚುಕಟ್ಟುಗೊಳಿಸಿ ಅದಕ್ಕೆ ನೀರಾವರಿ ಸೌಕರ್ಯದ ಪೈಪ್ಲೈನ್ ಜೋಡಿಸುವುದು, ಸಾವಯವ ಗೊಬ್ಬರ ಅಂದರೆ ದನದ ಗೊಬ್ಬರ, ಕೋಳಿ ಗೊಬ್ಬರ ಅಳವಡಿಕೆ, ರಸಾಯನಿಕ ಗೊಬ್ಬರ, ಕೂಲಿ ಕಾರ್ಮಿಕರ ದರ, ಬಿತ್ತನೆಯ ಬೀಜದ ದರ ಒಳಗೊಂಡು ಶೇ. ೮೦ ರಷ್ಟು ಹಣ ಶುಂಠಿ ಬಿತ್ತನೆಯ ದಿನಕ್ಕೆ ವ್ಯಯವಾಗಲಿದೆ. ಉಳಿದ ಶೇ. ೨೦ ರಷ್ಟು ಮಾತ್ರ ಹಣ ಶುಂಠಿ ನೆಟ್ಟ ನಂತರ ಎರಡು ಬಾರಿ ಮಣ್ಣು ಕಟ್ಟಲು, ಕಳೆ ತೆಗೆಯಲು ಹಾಗೂ ರಸಾಯನಿಕ ಔಷಧಿ ಸಿಂಪಡಿಸಲು ವ್ಯಯ ಮಾಡಲಾಗುತ್ತಿದೆ.
ಅದೃಷ್ಟದ ಬೆಳೆ: ಶುಂಠಿ ಬೆಳೆ ರೈತರ ಪಾಲಿಗೆ ಅದೃಷ್ಟದ ಬೆಳೆ ಎಂದೇ ಹೇಳಲಾಗುತ್ತಿದೆ. ಸಂಬAಧಿಸಿದ ಕೃಷಿಕನ ನಸೀಬು ಚೆನ್ನಾಗಿದ್ದರೆ ಬೆಳೆಗೆ ಯಾವುದೇ ರೋಗ ಲಕ್ಷಣ ಇಲ್ಲದೆಯೇ ಚೆಂದ ಬರುವ ಜೊತೆಗೆ ಇಳುವರಿಯೂ ಹೆಚ್ಚುತ್ತದೆ. ಹಾಗೆಯೇ ಮಾರುಕಟ್ಟೆಯಲ್ಲಿ ಬೆಲೆಯೂ ಇದ್ದರೆ ಆತನಿಗೆ ಅದೃಷ್ಟ ಕೈಹಿಡಿ ದಂತಾಗುತ್ತದೆ. ಒಂದು ವೇಳೆ ಮಾರಕ ರೋಗ ಬಾಧೆಗೆ ಈ ಶುಂಠಿ ಬೆಳೆ ಒಳಗಾದರೆ ಆತನ ನಸೀಬು ಕೆಟ್ಟಿತು ಎಂದೇ ಅರ್ಥ. ಹಾಗಾಗಿ ಶುಂಠಿಯ ಬೆಳೆ ರೈತನ ಪಾಲಿಗೆ ಅದೃಷ್ಟದ ಬೆಳೆಯಾಗಿದೆ. ಪ್ರಸ್ತುತ ವರ್ಷ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕಿದ ಹಿನ್ನೆಲೆ ಕುಶಾಲನಗರ ತಾಲೂಕಿನ ಬಹುತೇಕ ಗ್ರಾಮಗಳ ಕೃಷಿಕರು ಸೇರಿದಂತೆ ನೆರೆಯ ಪಿರಿಯಾಪಟ್ಟಣ, ಹುಣಸೂರು, ಅರಕಲಗೂಡು, ಕೆ.ಆರ್. ನಗರ, ಸಕಲೇಶಪುರ ತಾಲೂಕಿನ ಬಹ ಳಷ್ಟು ಮಂದಿ ಶುಂಠಿ ಬೆಳೆಗೆ ಈ ಬಾರಿಯೂ ಮುಂದಾಗಿದ್ದಾರೆ.
- ಕೆ.ಎಸ್. ಮೂರ್ತಿ