ಮಡಿಕೇರಿ, ಜೂ. ೪: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕೊಡವ ಕೇರಿಯ ೧೬ನೇ ವರ್ಷದ ಮಹಾಸಭೆಯು ನಗರದ ಕೊಡವ ಸಮಾಜದಲ್ಲಿ ನಡೆಯಿತು.

ಕೇರಿಯ ಅಧ್ಯಕ್ಷ ಬೋಡಂಡ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿ ಮಾಚಯ್ಯ ಅವರು, ಕೊಡವ ಆಚಾರ, ವಿಚಾರ, ಸಂಸ್ಕೃತಿಯನ್ನು ಜನಾಂಗದ ಮಕ್ಕಳು ಮುಂದಿನ ದಿನಗಳಲ್ಲಿ ಮುಂದುವರೆಸಿಕೊAಡು ಹೋಗುವಂತೆ ಕರೆ ನೀಡಿದರು.

ಕಳೆದ ಸಾಲಿನ ವಾರ್ಷಿಕ ವರದಿಯನ್ನು ಕೇರಿಯ ಕಾರ್ಯ ದರ್ಶಿ ಚೋಳಪಂಡ ವಿಜಯ್ ವಾಚಿಸಿದರು. ಪ್ರಾರ್ಥನೆಯನ್ನು ನಿಶಿತ ದೇಚಮ್ಮ ಮಾಡಿದರು. ಚೊಟ್ಟಂಡ ದಿವ್ಯ ಪ್ರದೀಪ್ ನಿರೂಪಿಸಿದರು.

ಸಭೆಯ ನಂತರ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಕ್ರೀಡಾಕೂಟ ನಡೆಯಿತು. ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ (ಐಸಿಎಸ್‌ಇ) ಯಲ್ಲಿ ಶೇ.೯೭.೪ ಅಂಕ ಪಡೆದ ಒಡಿಯಂಡ ನಿಹಾರಿಕ ಕಾರ್ಯಪ್ಪ, ಮೆರೈನ್ ಇಂಜಿನಿಯರಿAಗ್‌ನಲ್ಲಿ ಚಿನ್ನದ ಪದಕ ಪಡೆದ ಬೋಡಂಡ ಮಾನ್ಸಿ ಮುತ್ತಪ್ಪ ಹಾಗೂ ಅಗ್ರಿ ಕಲ್ಚರ್ ಅಂಡ್ ಬಿಎಸ್‌ಸಿ ಇನ್ ಫುಡ್ ಸೈನ್ಸ್ನಲ್ಲಿ ಚಿನ್ನದ ಪದಕ ಪಡೆದ ಬಲ್ಯಾಟಂಡ ಸುಹಾನ್ ಭೀಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನೂತನ ಆಡಳಿತ ಮಂಡಳಿ ರಚನೆ : ಎಫ್‌ಎಂಸಿ ಕೊಡವ ಕೇರಿಯ ಮುಂದಿನ ೩ ವರ್ಷಕ್ಕೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಚೋಳಪಂಡ ವಿಜಯ್, ಉಪಾಧ್ಯಕ್ಷರಾಗಿ ಪೂಳಂಡ ಮಧು ಬೋಪಣ್ಣ, ಗೌರವ ಕಾರ್ಯದರ್ಶಿಯಾಗಿ ಮಂದನೆರವAಡ ಸಂಜು ಅಚ್ಚಯ್ಯ ಆಯ್ಕೆಯಾದರು.

ಆಡಳಿತ ಮಂಡಳಿ ಸದಸ್ಯರಾಗಿ ಕೊಚ್ಚೇರ ಕವನ್, ಚಾಮೆರ ಚೀಯಣ್ಣ, ಪುದಿಯತಂಡ ಅಪ್ಪಯ್ಯ, ಬೊಳ್ಳಜಿರ ಯಮುನಾ ಅಯ್ಯಪ್ಪ, ಚೊಟ್ಟಂಡ ದಿವ್ಯ ಪ್ರದೀಪ್, ಮತ್ರಂಡ ಅಕ್ಷಿತಾ ಅವರು ನೇಮಕಗೊಂಡಿದ್ದಾರೆ.