ಚೆಟ್ಟಳ್ಳಿ, ಜೂ. ೪: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಕಾಲ್ಚೆಂಡು ಪಂದ್ಯಾಟದಲ್ಲಿ ಎವರ್ ಶೈನ್ ಕಂಡಕ್ಕರೆ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಚೆಟ್ಟಳ್ಳಿಯ ಕಾಫಿ ಲವ್ವರ್ಸ್ ತಂಡ ಆಯೋಜಿಸಿದ್ದ ಗ್ರಾ.ಪಂ. ಮಟ್ಟದ ಕಾಲ್ಚೆಂಡು ಪಂದ್ಯಾಟದಲ್ಲಿ ಒಟ್ಟು ೧೩ ತಂಡಗಳು ಭಾಗವಹಿಸಿದ್ದವು.
ಫೈನಲ್ ಪಂದ್ಯಾಟದಲ್ಲಿ ಕಾಫಿ ಲವ್ವರ್ಸ್ ತಂಡವನ್ನು ೬-೪ ಗೋಲ್‌ಗಳಿಂದ ಮಣಿಸಿತು. ಎವರ್ ಶೈನ್ ಪರವಾಗಿ ಶಮ್ಮಾಸ್ ೩, ಸಿದ್ದೀಕ್, ಇಬ್ರಾಹಿಂ ಹಾಗೂ ನೌಷಾದ್ ತಲಾ ಒಂದು ಗೋಲ್ ಬಾರಿಸಿದರು. ಪಂದ್ಯಾವಳಿಯ ಉತ್ತಮ ಗೋಲ್ ಕೀಪರ್ ಅಲಿ ಎವರ್ ಶೈನ್, ಬೆಸ್ಟ್ ಡಿಫೆಂಡರ್ ನಿಶಾಂತ್, ಉತ್ತಮ ಆಟಗಾರನಾಗಿ ವೈಶಾಕ್ ಚೆಟ್ಟಳ್ಳಿ ಪ್ರಶಸ್ತಿ ಪಡೆದರು.