ಕುಶಾಲನಗರ, ಜೂ. ೩: ಕುಶಾಲನಗರ ಶ್ರೀ ಚೌಡೇಶ್ವರಿ ದೇವ ಸ್ಥಾನದ ವಾರ್ಷಿಕೋತ್ಸವ ಕಾರ್ಯ ಕ್ರಮ ಅದ್ಧೂರಿಯಾಗಿ ನಡೆಯಿತು.

ಕುಶಾಲನಗರ ದೇವಾಂಗ ಸಂಘದ ಆಶ್ರಯದಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರಗಿದವು.

ಪೂಜಾ ಅಂಗವಾಗಿ ಕುಶಾಲ ನಗರ ಕಾವೇರಿ ನದಿಯಿಂದ ಮಹಿಳೆಯರು ಸಾಂಪ್ರದಾಯಿಕವಾಗಿ ಗಂಗಾಜಲದ ಕಳಸ ಹೊತ್ತುಕೊಂಡು ದೇವಾಲಯ ತನಕ ಮೆರವಣಿಗೆಯಲ್ಲಿ ತೆರಳಿದರು.

ಕುಶಾಲನಗರ ದೇವಾಲಯಗಳ ಒಕ್ಕೂಟದ ವತಿ ಯಿಂದ ಪಟ್ಟಣದ ವಿವಿಧ ದೇವಾ ಲಯಗಳ ಆಡಳಿತ ಮಂಡಳಿ ಪ್ರತಿನಿಧಿಗಳು ಫಲ ತಾಂಬೂಲಗಳೊAದಿಗೆ ಆಗಮಿಸಿ ಸಾಮೂಹಿಕ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಸಂಜೆ ದೇವರ ಮೆರವಣಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ತೆರಳಿತು. ದೇವಾಂಗ ಸಂಘದ ಅಧ್ಯಕ್ಷರಾದ ಡಿ ವಿ ರಾಜೇಶ್ ಉಪಾಧ್ಯಕ್ಷರುಗಳಾದ ಡಿ ಆರ್ ಸೋಮಶೇಖರ್, ಡಿ ವಿ ಚಂದ್ರು ಪ್ರಧಾನ ಕಾರ್ಯದರ್ಶಿ ಡಿ ಆರ್ ಕೃಷ್ಣಕುಮಾರ್ ಸಹ ಕಾರ್ಯದರ್ಶಿ ಡಿ ವಿ ಚಂದ್ರಶೇಖರ್ ಖಜಾಂಚಿ ಡಿ.ಜಿ.ಪ್ರದೀಪ್ ಸಂಘಟನಾ ಕಾರ್ಯದರ್ಶಿ ಡಿ ಎನ್ ವಿನೋದ್, ಸಂಚಾಲಕರಾದ ಡಿ ಎನ್ ಶಶಿ ಮತ್ತಿತರರು ಇದ್ದರು.