ನಾಪೋಕ್ಲು, ಜೂ. ೩: ಸಮೀಪದ ಹೊದವಾಡ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಭಗವತಿ ಅಮ್ಮೆರಪ್ಪ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನ ಅಷ್ಟಮಂಗಲ ಮಹೋತ್ಸವ ಕಳೆದೆರಡು ದಿನಗಳಿಂದ ವಿಜೃಂಭಣೆಯಿAದ ಜರುಗಿ ಸಂಪನ್ನಗೊAಡಿತು. ಪ್ರತಿಷ್ಠಾಪನೆ ಅಂಗವಾಗಿ ಗುರುವಾರ ಪೂರ್ವಾಹ್ನ ಬಿಂಬ ಪ್ರತಿಷ್ಠಾಪನೆ, ಗಣ ಹೋಮ, ಬ್ರಹ್ಮ ಕಲಶ ಪೂಜೆ, ನಿದ್ರಾ ಕಲಶ ಅಭಿಷೇಕ, ಬ್ರಹ್ಮ ಕಲಶ ಅಭಿಷೇಕ ಪೂಜಾ ವಿಧಿ ವಿಧಾನಗಳ ನಂತರ ಮಧ್ಯಾಹ್ನ ಮಹಾಪೂಜೆ ಜರುಗಿದವು. ಆನಂತರ ನೆರೆದ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸೇವೆ ಹರಕೆ ಕಾಣಿಕೆಯನ್ನು ಒಪ್ಪಿಸಿ ತೀರ್ಥ ಪ್ರಸಾದ ಸ್ವೀಕರಿ ಸಿದರು. ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಪೂಜಾ ಕೈಂಕರ್ಯಗಳನ್ನು ಕೇರಳದ ಪಾಲೆಘಾಟ್ನ ಶ್ರೀ ನಾರಾಯಣ ತಂತ್ರಿ ಹಾಗೂ ಬಳಗ ದವರು ನೆರವೇರಿಸಿದರು .
ಈ ಸಂದರ್ಭ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಶ್ರಮಿಸಿದ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಆಚೆಯಡ ಅರುಣ, ಕಾರ್ಯದರ್ಶಿ ಪಲ್ಯಂಡಿ ಎ.ಡಿ, ಊರಿನ ಹಿರಿಯರು ದಾನಿಗಳು ಆದ ನಿವೃತ್ತ ಕರ್ನಲ್ ಚೌರೀರ ಜಯ ಇವರುಗಳನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ಪ್ರತಿಷ್ಠಾಪನ ಅಷ್ಟಮಂಗಲ ಮಹೋತ್ಸವಕ್ಕೆ ಧನ ಸಹಾಯ ಮಾಡಿದ ಗ್ರಾಮಸ್ಥರನ್ನು ಭಂಡಾರ ತಕ್ಕ ಹಿರಿಯರಾದ ಚೌರೀರ ಚೋಮುಣಿ ಬೋಪಯ್ಯ ಸ್ಮರಿಸಿದರು.
ಈ ಸಂದರ್ಭ ದೇವತಕ್ಕರಾದ ನಾಟೋಳಂಡ ಗಣಪತಿ, ಊರಿನ ಹಿರಿಯರಾದ ಮಂಡೇಯಡ ಬೆಳ್ಳಿಯಪ್ಪ, ಕಿಕ್ಕೇರಿಯಂಡ ನಂಜುAಡ, ಬಲ್ಲಂಡ ಮುತ್ತಣ್ಣ, ಆಚೆಯಡ ಗಗನ್, ಚೌರೀರ ಪ್ರಕಾಶ್, ಬಲ್ಲಂಡ ಮನು, ಚೌರೀರ ಶರತ್, ಅಯ್ಯಪ್ಪ, ಬಲ್ಲಂಡ ಅಶ್ವಥ್, ದಿಲೀಪ್, ಅನ್ನಚಂಡ ದಿನೇಶ್, ಬಿ.ಡಿ. ರಾಜೇಶ್, ಬಿ.ಡಿ. ದಿನೇಶ್, ಕಿಕ್ಕೇರಿಯಂಡ ಕುಮಾರ್, ಜೀರ್ಣೋದ್ಧಾರ ಸಮಿತಿ ಸದಸ್ಯರು ಸೇರಿದಂತೆ ಭಕ್ತಾದಿಗಳು ಹಾಜರಿದ್ದರು.