ಗೋಣಿಕೊಪ್ಪಲು, ಜೂ. ೩: ದ. ಕೊಡಗಿನ ಕೋತೂರು ಶ್ರೀ ಕೃಷ್ಣ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶೋತ್ಸವ ತಾ.೬, ೭ ಹಾಗೂ ೮ ರಂದು ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ದೇವಾಲಯದಲ್ಲಿ ಶ್ರೀ ಕ್ರಷ್ಣ ದೇವರ ಪುನರ್ ಪ್ರತಿಷ್ಠಾಪನೆ ಕಳಸ ಪೂಜೆ, ಮಹಾಪೂಜೆ, ಅನ್ನದಾನ ಸೇರಿದಂತೆ ಇನ್ನಿತರ ಪೂಜಾ ವಿಧಿವಿಧಾನಗಳು ನಡೆಯಲಿವೆ.