ಗೂಡ್ಸ್ ರೈಲಿಗೆ ಕೋರಮಂಡಲ ಎಕ್ಸ್ ಪ್ರೆಸ್ ರೈಲು ಡಿಕ್ಕಿ, ಹಲವರಿಗೆ ಗಾಯ
ಒಡಿಶಾ, ಜೂ. ೨: ಗೂಡ್ಸ್ ರೈಲಿಗೆ ಕೋರಮಂಡಲ ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಒಡಿಶಾದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಬಹನಾಗ ರೈಲು ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದ್ದು, ಎಕ್ಸ್ಪ್ರೆಸ್ ರೈಲಿನ ಹಲವು ಬೋಗಿಗಳು ಹಳಿ ತಪ್ಪಿರುವುದಾಗಿ ವರದಿಯಾಗಿದೆ. ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ರಭಸಕ್ಕೆ ಎಕ್ಸ್ ಪ್ರೆಸ್ ರೈಲಿನ ನಾಲ್ಕು ಬೋಗಿಗಳು ಉರುಳಿ ಬಿದ್ದಿವೆ. ಈ ಬೋಗಿಗಗಳಲ್ಲಿ ಪ್ರಯಾಣಿಕರು ಇದ್ದರು. ಸುದ್ದಿ ತಿಳಿಯುತ್ತಿದ್ದಂತೆ ಕೆಲವರು ಅಪಘಾತ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯಿತು. ಅಪಘಾತ ಸ್ಥಳದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಹೆಚ್ಚುವರಿ ನೆರವಿನ ಅಗತ್ಯವಿದ್ದರೆ ತಿಳಿಸುವಂತೆ ಬಲಸೋರ್ ಜಿಲ್ಲಾಧಿಕಾರಿ ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಭಾರತದ ನನ್ನ ಕಲ್ಪನೆ ಬಿಜೆಪಿಗಿಂತ ಭಿನ್ನ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ರಾಹುಲ್
ಕ್ಯಾಲಿಫೋರ್ನಿಯಾ, ಜೂ. ೨: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಭಾರತದ ಕಲ್ಪನೆಯ ಕುರಿತು ಮಾತನಾಡಿದ್ದಾರೆ. ಭಾರತದ ಬಗ್ಗೆ ಸಂಪೂರ್ಣ ವಿಭಿನ್ನ ಪರಿಕಲ್ಪನೆಯನ್ನು ಹೊಂದಿದ್ದೇನೆ. ಬಿಜೆಪಿ ನೋಡುವ ರೀತಿಯಲ್ಲಿ ನಾನು ಭಾರತವನ್ನು ನೋಡುವುದಿಲ್ಲ. ಅವರು ಮೇಲು-ಕೀಳಿನ ಕೇಂದ್ರೀಕೃತ ವ್ಯವಸ್ಥೆಯಾಗಿ ನೋಡುತ್ತಾರೆ. ಆದರೆ ನಾನು ಬಹು ಸಂಸ್ಕೃತಿಗಳು, ಧರ್ಮಗಳು ಮತ್ತು ಭಾಷೆಗಳೊಂದಿಗೆ ವೈವಿಧ್ಯಮಯ ರಾಷ್ಟçವಾಗಿ ವಿಕೇಂದ್ರೀಕೃತ ವ್ಯವಸ್ಥೆಯಾಗಿ ನೋಡುತ್ತೇನೆ ಎಂದಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ನಡೆಯುತ್ತಿದ್ದಾಗ ನಮಗೆ ಯಾವುದೇ ಬಲವಿರಲಿಲ್ಲ; ಬಿಜೆಪಿಗೆ ಪೊಲೀಸರು, ತನಿಖಾ ಸಂಸ್ಥೆಗಳು, ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬಲ ಇತ್ತು. ಮೋದಿ ಸರ್ಕಾರದ ಎಲ್ಲಾ ಶಕ್ತಿ ಏನನ್ನೂ ಮಾಡಲಾಗಲಿಲ್ಲ. ಹೆಚ್ಚಿನ ಪಡೆ ನಿಯೋಜಿಸಲು ಪ್ರಯತ್ನಿಸಿದರು ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ನೀವು ಸತ್ಯಕ್ಕೆ ಹತ್ತಿರವಾದಾಗ ಶಕ್ತಿ ಬರುತ್ತದೆ, ಅವರಿಗೆ ಬಲವಿದೆ, ಆದರೆ ಅವರಿಗೆ ಶಕ್ತಿ ಇಲ್ಲ ಎಂದರು. ತಮ್ಮ ಮೂರು ನಗರಗಳ ಯುಎಸ್ ಪ್ರವಾಸದ ಸಮಯದಲ್ಲಿ, ರಾಹುಲ್ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತದಲ್ಲಿನ ಸರ್ಕಾರ ಜನರಿಗೆ ಬೆದರಿಕೆ ಹಾಕುತ್ತಿದ್ದು, ದೇಶದ ಏಜೆನ್ಸಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಭಾರತದಲ್ಲಿ ರಾಜಕೀಯದ ಎಲ್ಲಾ ಸಾಧನಗಳನ್ನು ಬಿಜೆಪಿ ಮತ್ತು ಆರ್ಎಸ್ಎಸ್ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಮಣಿಪುರ ಹಿಂಸಾಚಾರದಲ್ಲಿ ೯೮ ಸಾವು,
೩೧೦ ಮಂದಿ ಗಾಯ- ಸರ್ಕಾರ
ಇಂಪಾಲ, ಜೂ. ೨: ಒಂದು ತಿಂಗಳ ಹಿಂದೆ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ ೯೮ ಜನರು ಸಾವನ್ನಪ್ಪಿದ್ದು, ೩೧೦ ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ಶುಕ್ರವಾರ ಹೇಳಿದೆ. ಪ್ರಸ್ತುತ ಒಟ್ಟು ೩೭,೪೫೦ ಜನರು ೨೭೨ ಪರಿಹಾರ ಶಿಬಿರಗಳಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವರ ಒದಗಿಸಿದೆ. ಮೇ ೩ ರಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಒಟ್ಟು ೪,೦೧೪ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿದ್ದು, ಮೃತರ ಸಂಖ್ಯೆ ೯೮ ಆಗಿದ್ದು, ೩೧೦ ಮಂದಿ ಗಾಯಗೊಂಡಿದ್ದಾರೆ. ಕಳೆದೊಂದು ತಿಂಗಳಿನಿAದ ೩,೭೩೪ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದು, ಹಿಂಸಾಚಾರದಲ್ಲಿ ತೊಡಗಿಕೊಂಡಿದ್ದ ೬೫ ಜನರನ್ನು ಬಂಧಿಸಿದ್ದಾರೆ. ವಿವಿಧ ಭದ್ರತಾ ಏಜೆನ್ಸಿಗಳಿಂದ ಸಂಘಟಿತ ಪ್ರಯತ್ನ ನಡೆಯುತ್ತಿರುವುದರಿಂದ ದುಷ್ಕರ್ಮಿಗಳು ಗುಂಡು ಹಾರಿಸುವ ಅಥವಾ ಮನೆಗಳಿಗೆ ಬೆಂಕಿ ಹಚ್ಚುವ ಘಟನೆಗಳು ಈಗ ಅಪರೂಪವಾಗುತ್ತಿವೆ. ಸೇನೆ, ಅಸ್ಸಾಂ ರೈಫಲ್ಸ್, ಸಿಎಪಿಎಫ್ಗಳು ಮತ್ತು ಸ್ಥಳೀಯ ಪೊಲೀಸರನ್ನು ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಇಲ್ಲಿಯವರೆಗೆ, ಕೇಂದ್ರ ಸಶಸ್ತ್ರ ಪಡೆಗಳ ೮೪ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಕಸಿದುಕೊಂಡ ಶಸಾಸ್ತ್ರಗಳನ್ನು ಒಪ್ಪಿಸುವಂತೆ ಜನತೆಯಲ್ಲಿ ಪೊಲೀಸರು ಮನವಿ ಮಾಡಿದ್ದು, ಒಂದು ವೇಳೆ ದೋಚಲಾದ ಶಸಾಸ್ತ್ರಗಳು ಕಂಡುಬAದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಮಧ್ಯಂತರ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್
ಬೆಂಗಳೂರು, ಜೂ. ೨: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬAಧಿಸಿದAತೆ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಹೈಕೋರ್ಟ್ ರಿಲೀಫ್ ನೀಡಿದೆ. ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನ ಹೈಕೋರ್ಟ್ ಏಕಸದಸ್ಯ ಪೀಠ ಮತ್ತೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಇದೇ ಪ್ರಕರಣಕ್ಕೆ ಸಂಬAಧಿಸಿದAತೆ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಎರಡನೇ ಬಾರಿಗೆ ಹೈಕೋರ್ಟ್ ಮೇ ಅಂತ್ಯದವರೆಗೂ ತಡೆಯಾಜ್ಞೆ ನೀಡಿತ್ತು. ಇದೀಗ ಮತ್ತೆ ತಡೆಯಾಜ್ಞೆ ವಿಸ್ತರಿಸಿದ್ದು, ಈ ಮೂಲಕ ಡಿಕೆ ಶಿವಕುಮಾರ್ ಅವರಿಗೆ ನಿರಾಳ ಸಿಕ್ಕಂತಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ೧೯೮೮ರ ಕಲಂ ೧೩(೨), ೧೩(೧)ಇ ಅಡಿಯಲ್ಲಿ ಸಿಬಿಐ ೨೦೨೦ರ ಅಕ್ಟೋಬರ್ ೩ರಂದು ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಈ ಪ್ರಕರಣ ರದ್ದು ಕೋರಿ ಡಿಕೆ ಶಿವಕುಮಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ತನಿಖೆಗೆ ಮಧ್ಯಂತರ ತಡೆ ತಡೆಯಾಜ್ಞೆ ನೀಡಿತ್ತು. ಇದೀಗ ತಡೆಯಾಜ್ಞೆ ಮತ್ತೆ ಮುಂದುವರೆದಿದೆ.
ಹಾಲಿನ ಪ್ರೋತ್ಸಾಹ ಧನ ೧.೫೦ ರೂ. ಕಡಿತ
ಬೆಂಗಳೂರು: ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ರೈತರಿಗೆ ಶಾಕ್ ನೀಡಿದ್ದು, ಹಾಲಿನ ಪ್ರೋತ್ಸಾಹ ಧನ ಲೀಟರ್ಗೆ ೧.೫೦ ರೂ. ಕಡಿತಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಬೆಂಗಳೂರು ಜಿಲ್ಲಾ ಹಾಲು ಒಕ್ಕೂಟ ಬೇಸಿಗೆ ಸಮಯದಲ್ಲಿ ಏಪ್ರಿಲ್ ೧ ರಿಂದ ಮೇ ೩೧ರ ವರೆಗೆ ಪ್ರತಿ ಲೀಟರ್ ಹಾಲಿಗೆ ೨.೮೫ ರೂ. ವಿಶೇಷ ಪ್ರೋತ್ಸಾಹ ಧನ ಘೋಷಿಸಿತ್ತು. ಇದೀಗ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್ ಹಾಲಿಗೆ ೧.೫೦ ರೂಪಾಯಿ ಕಡಿತಗೊಳಿಸಿ ಆದೇಶಿಸಿದೆ. ಉತ್ತಮ ಮಳೆಯಾಗಿ ಹಸಿರು ಮೇವಿನ ಲಭ್ಯತೆ ಜಾಸ್ತಿಯಾಗಿದ್ದು, ಹಾಲು ಉತ್ಪಾದನೆ ಹೆಚ್ಚಾಗುತ್ತಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಪ್ರತಿದಿನ ೧೩.೫೦ ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು, ಈಗ ೧೬ ಲಕ್ಷ ಲೀಟರ್ಗೆ ಉತ್ಪಾದನೆಯಾಗುತ್ತಿದೆ. ದಿನಕ್ಕೆ ಸುಮಾರು ೨.೫೦ ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದ್ದು, ಹಾಗಾಗಿ ಪ್ರೋತ್ಸಾಹ ಧನ ಕಡಿತಗೊಳಿಸಿ ಆದೇಶ ಹೊರಡಿಸಿದೆ.