ಬೆಂಗಳೂರು, ಜೂ. ೨: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿಗಳನ್ನು ಜಾರಿಗೊಳಿ ಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಕುರಿತು ಮುಖ್ಯಮಂತ್ರ‍್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಪ್ರಕಟಿಸಿದರು. ಇಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನಸಭೆ ಚುನಾವಣೆಗೂ ಮೊದಲು ಹಾಗೂ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಭರವಸೆ ನೀಡಿದ್ದ ಗೃಹ ಜ್ಯೋತಿ, ಗೃಹ ಲಕ್ಷಿö್ಮ, ಅನ್ನಭಾಗ್ಯ, ಯುವನಿಧಿ ಹಾಗೂ ಶಕ್ತಿ ಯೋಜನೆಗಳನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಘೋಷಿಸಿದರು. ವಿಧಾನಸೌಧ ದಲ್ಲಿಂದು ಗ್ಯಾರಂಟಿ ಯೋಜನೆಗಳ ಜಾರಿ ಸಂಬAಧ ಸಚಿವ ಸಂಪುಟ ಸಭೆ ನಡೆಸಿ ಸಂಬAಧಿಸಿದAತೆ ಇಲಾಖಾಧಿಕಾರಿ ಗಳೊಂದಿಗೆ ಚರ್ಚಿಸಿದ ಬಳಿಕ ಸಿದ್ದರಾಮಯ್ಯ ಅವರು ಯಾವುದೇ ಜಾತಿ- ಧರ್ಮಗಳ ತಾರತಮ್ಯವಿಲ್ಲದೆ ಎಲ್ಲರಿಗೂ ಐದು ಗ್ಯಾರಂಟಿ ಯೋಜನೆಗಳನ್ನು ಒದಗಿಸಲು ಸರ್ಕಾರ ತೀರ್ಮಾನಿಸಿದೆ ಎಂದು ವಿವರಿಸಿದರು.

ಗೃಹಜ್ಯೋತಿ

ಮೊದಲ ಗ್ಯಾರಂಟಿಯಾಗಿರುವ ಗೃಹಜ್ಯೋತಿ ಯೋಜನೆಯಡಿ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುವುದು. ೨೦೦ ಯೂನಿಟ್‌ವರೆಗೆ ಯಾರು ಎಷ್ಟು ವಿದ್ಯುತ್ ಬಳಕೆ ಮಾಡುತ್ತಾರೆ ಎಂಬುದನ್ನು ೧೨ ತಿಂಗಳ ಸರಾಸರಿ ಬಳಕೆ ಆಧರಿಸಿ ಪರಿಶೀಲಿಸ ಲಾಗುವುದು. ಬಳಿಕ ಅದರ ಜೊತೆಗೆ ೧೦% ವಿದ್ಯುತ್ತನ್ನು ಹೆಚ್ಚುವರಿಯಾಗಿ ಉಚಿತವಾಗಿ ನೀಡಲಾಗುವುದು. ಆದರೆ, ಜುಲೈ ೧ರವರೆಗೆ ಬಳಕೆ ಮಾಡಿರುವ ವಿದ್ಯುತ್ ಬಿಲ್ಲನ್ನು ಬಳಕೆದಾರರೇ ಪೂರ್ಣವಾಗಿ ಕಟ್ಟಬೇಕು. ಆಗಸ್ಟ್ನಿಂದ ಎಲ್ಲರೂ ಯೋಜನೆಯ ಲಾಭ ಪಡೆಯಬಹು ದಾಗಿದೆ ಎಂದರು. ಜುಲೈವರೆಗಿನ ಬಾಕಿ ಉಳಿಸಿಕೊಂಡವರಿಗೆ ಬಾಕಿ ಕಟ್ಟಲು ಸಮಯ ನೀಡುತ್ತೇವೆ ಎಂದರು.

ಗೃಹಲಕ್ಷಿö್ಮ

ಈ ಯೋಜನೆಯು ಪ್ರತಿಯೊಂದು ಕುಟುಂಬದ ‘ಕರ್ತ’ ಎನಿಸುವ ಆಯಾ ಕುಟುಂಬದ ಯಜಮಾನಿಗೆ ಅನ್ವಯವಾಗುವಂತೆ ಜಾರಿಗೊಳ್ಳಲಿದೆ. ಇದರಲ್ಲಿ ಬಿಪಿಎಲ್ ಅಥವಾ ಎಪಿಎಲ್ ಎನ್ನುವ ತಾರತಮ್ಯವಿಲ್ಲದೆ, ಸೌಲಭ್ಯ ಲಭ್ಯವಾಗಲಿದೆ. ಗೃಹಲಕ್ಷಿö್ಮ ಯೋಜನೆಗೆ ಸಂಬAಧಿಸಿದAತೆ ಬ್ಯಾಂಕ್ ಖಾತೆ, ಆಧಾರ್ ವಿಲೀನ ಪ್ರಕ್ರಿಯೆ ಹಾಗೂ ಸಾಫ್ಟ್ವೇರ್ ಅಳವಡಿಕೆ ಕೆಲಸಗಳು ನಡೆಯಬೇಕಿದೆ. ಈ ಯೋಜನೆಯಡಿ ಮನೆಯೊಡತಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ ೧೫ರಿಂದ ಜುಲೈ ೧೫ರವರೆಗೆ ಅವಕಾಶ ನೀಡಲಾಗುವುದು. ೧೮ ವರ್ಷ ತುಂಬಿದವರು, ಬಿಪಿಎಲ್, ಎಪಿಎಲ್ ಕಾರ್ಡ್ದಾರರು ಎಲ್ಲರೂ ಅರ್ಜಿ ಸಲ್ಲಿಸಬಹುದಾಗಿದೆ. ಜುಲೈ ೧೫ರಿಂದ ಆಗಸ್ಟ್ ೧೫ರವರೆಗೆ ಅರ್ಜಿ ಪರಿಶೀಲನಾ ಪ್ರಕ್ರಿಯೆ ಇತ್ಯಾದಿಗಳನ್ನು ನಡೆಸಲಾಗುತ್ತದೆ. ಬಳಿಕ ಆಗಸ್ಟ್ ೧೫ರಿಂದ ಮನೆಯೊಡತಿಯ ಖಾತೆಗೆ ೨೦೦೦ ರೂ.ಗಳನ್ನು ಪ್ರತೀ ತಿಂಗಳು ಜಮೆ ಮಾಡಲಾಗುವುದು. ಈ ಯೋಜನೆಯಲ್ಲಿ ಕುಟುಂಬ ನಿರ್ವಹಣೆಯ ಹೊಣೆ ಹೊತ್ತ ಮನೆಯ ಯಜಮಾನಿಯು ಅರ್ಜಿ ಸಲ್ಲಿಸುವಾಗ ತಾನು ಯಜಮಾನಿ ಎಂದು ಘೋಷಿಸಿಕೊಳ್ಳಬೇಕಾಗಿದೆ. ಈ ಸೌಲಭ್ಯವು ಸಾಮಾಜಿಕ ಭದ್ರತಾ ಸೇವೆಗಳಡಿ ಪಿಂಚಣಿಯನ್ನು ಪಡೆಯುತ್ತಿರುವ ಮಹಿಳೆಯರಿಗೂ ಕೂಡ ಪ್ರತ್ಯೇಕವಾಗಿ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಅನ್ನಭಾಗ್ಯ

ಈ ಹಿಂದೆ ನಾವು ೭ ಕೆ.ಜಿ. ಅಕ್ಕಿಯನ್ನು ನೀಡುತ್ತಿದ್ದೆವು. ಹಿಂದಿನ ಸರ್ಕಾರ ಅದನ್ನು ೫ ಕೆ.ಜಿ.ಗೆ ಇಳಿಸಿದೆ. ಚುನಾವಣೆ ವೇಳೆ ನಾವು ೧೦ ಕೆ.ಜಿ. ಆಹಾರ ಧಾನ್ಯ ಒದಗಿಸುವುದಾಗಿ ಹೇಳಿದ್ದೆವು. ಜುಲೈ ೧ರಿಂದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ದಾರರಿಗೆ ತಲಾ ೧೦ ಕೆ.ಜಿ. ಅಕ್ಕಿಯನ್ನು ನ್ಯಾಫೆಡ್, ಕೇಂದ್ರ, ಎನ್‌ಸಿಸಿಎಫ್ ಎಲ್ಲಿಂದಲಾದರೂ ಸರಿ ತರಿಸಿ ನೀಡುತ್ತೇವೆ ಎಂದು ಸಿದ್ದರಾಮಯ್ಯ ನುಡಿದರು.

ಶಕ್ತಿ ಯೋಜನೆ

ಜೂನ್ ೧೧ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗುವುದು. ಸಮಾಜದಲ್ಲಿ ಶೇ.೫೦ರಷ್ಟು ಮಹಿಳೆಯರಿದ್ದಾರೆ. ಇವರುಗಳಿಗೆ ಸ್ಥಾನಮಾನ ಪರಿಗಣಿಸದೆ ವಿದ್ಯಾರ್ಥಿನಿಯರನ್ನೂ ಒಳಗೊಂಡAತೆ ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಈ ಯೋಜನೆ ಅನ್ವಯವಾಗುತ್ತದೆ. ರಾಜ್ಯದೊಳಕ್ಕೆ ಮಾತ್ರ ಸೀಮಿತವಾಗಿ ಸರ್ಕಾರದ ಸಾಮಾನ್ಯ ಹಾಗೂ ಎಕ್ಸ್ಪ್ರೆಸ್ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ಮಹಿಳೆಯರು ಹೊರ ರಾಜ್ಯಗಳಿಗೆ ತೆರಳಲು ಈ ಯೋಜನೆಯಡಿ ಅವಕಾಶವಿರುವುದಿಲ್ಲ. ಶೇ. ೫೦ರಷ್ಟು ಆಸನಗಳು ಮಹಿಳೆಯರಿಗೆ ಮೀಸಲಾಗಿರುತ್ತದೆ. ಜೊತೆಗೆ ಶೇ.೫೦ರಷ್ಟು ಪುರುಷರಿಗೂ ಮೀಸಲಿರುತ್ತದೆ. ಬಸ್‌ಗಳಲ್ಲಿ ಶೇ.೫೦ಕ್ಕಿಂತ ಕಡಿಮೆ ಮಹಿಳೆಯರು ಪ್ರಯಾಣಿಸುವ ಸಂದರ್ಭ ಅಂತಹ ಆಸನಗಳನ್ನು ಪುರುಷರಿಗೂ ಬಿಟ್ಟುಕೊಡಬಹುದಾಗಿದೆ. ಎ.ಸಿ., ನಾನ್ ಎ.ಸಿ. ಸ್ಲೀಪರ್, ಲಕ್ಷÄರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೂ ಈ ಯೋಜನೆ ಅನ್ವಯವಾಗುತ್ತದೆ. ಆದರೆ, ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಆಸನ ಮೀಸಲಾತಿ ಇರುವುದಿಲ್ಲ ಎಂದರು.

ಯುವನಿಧಿ

ಈ ಯೋಜನೆಯು ೨೦೨೨-೨೩ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ವೃತ್ತಿ ಶಿಕ್ಷಣವೂ ಸೇರಿದಂತೆ ಎಲ್ಲಾ ವಿಭಾಗದ ಪದವೀಧರರಿಗೆ ಅನ್ವಯವಾಗುತ್ತದೆ. ಪದವೀಧರರು ನೋಂದಣಿ ಮಾಡಿಕೊಂಡAದಿನಿAದ ೨೪ ತಿಂಗಳವರೆಗೆ ಪ್ರತೀ ತಿಂಗಳಿಗೆ ೩೦೦೦ ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಡಿಪ್ಲೋಮೊ ಪದವೀಧರರಿಗೆ ೧೫೦೦ ರೂ. ನೀಡಲಾಗುತ್ತದೆ. ೨೪ ತಿಂಗಳ ಅವಧಿಯ ನಡುವೆ ಉದ್ಯೋಗ ಪಡೆದುಕೊಳ್ಳುವವರಿಗೆ ನಿರುದ್ಯೋಗ ಭತ್ಯೆಯನ್ನು ನಿಲ್ಲಿಸಲಾಗುವುದು. ಈ ಯೋಜನೆಗೆ ಯುವಕ, ಯುವತಿ ಹಾಗೂ ತೃತೀಯ ಲಿಂಗಿಗಳೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ್ ಸೇರಿದಂತೆ ಸರಕಾರದ ಸಚಿವರುಗಳು, ಅಧಿಕಾರಿಗಳು ಹಾಜರಿದ್ದರು. - ಬಿ.ಜಿ. ರವಿಕುಮಾರ್