ಮಡಿಕೇರಿ, ಜೂ.೨: ಫ್ರೂಟ್ಸ್ ಮತ್ತು ಕಾವೇರಿ ೨.೦ ತಂತ್ರಾಶ ನಿಯಮದಿಂದಾಗಿ ಹಲವಾರು ರೀತಿಯಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು, ಜಿಲ್ಲೆಯಲ್ಲಿ ರೈತರು ಸಹಕಾರ ಬ್ಯಾಂಕ್ಗಳ ಮೂಲಕ ಸಾಲ ಪಡೆಯಲು ಭಾರೀ ಸಮಸ್ಯೆ ಎದುರಿಸುವಂತಾಗಿದೆ.
ರೈತರ ಪರಿಸ್ಥಿತಿ ಒಂದೆಡೆಯಾದರೆ ಬ್ಯಾಂಕ್ಗಳು ಕೂಡ ಸಂದಿಗ್ಧತೆಯಲ್ಲಿ ಸಿಲುಕಿದ್ದು, ಕಳೆದ ಕೆಲವು ಸಮಯದಿಂದ ವಿವಿಧ ಸಾಲ ನೀಡಿಕೆಯ ಪ್ರಕ್ರಿಯೆಗಳೇ ನಡೆಯದಂತಾಗಿದೆ. ಜಿಲ್ಲೆಯಲ್ಲಿ ರೈತಾಪಿ ಜನರು ಕೃಷಿ ಸಂಬAಧಿತ ಹಾಗೂ ಪೂರಕ ಅಂಶಗಳಿಗೆ ಸಾಲ ಪಡೆಯುವ ಪರ್ವಕಾಲ ಇದಾಗಿದ್ದು, ಸರಕಾರದ ಹೊಸ ನಿಯಮದ ತಾಂತ್ರಿಕ ಸಮಸ್ಯೆಗಳಿಂದಾಗಿ ತೀರಾ ತೊಂದರೆ ಎದುರಾಗಿದೆ.
ಈ ನಿಟ್ಟಿನಲ್ಲಿ ಇದರ ಸರಳೀಕರಣಕ್ಕಾಗಿ ನಡೆದಿರುವ ಹಲವು ಪ್ರಯತ್ನಗಳಿಗೂ ಯಾವುದೇ ಸ್ಪಂದನೆ ಸಿಗದಿರುವ ಹಿನ್ನೆಲೆಯಲ್ಲಿ ರೈತರು-ಬ್ಯಾಂಕ್ಗಳೂ ಇಕ್ಕಟ್ಟಿನಲ್ಲಿ ಸಿಲುಕಿವಂತಾಗಿದೆ.
ಫ್ರೂಟ್ಸ್ ಮತ್ತು ಕಾವೇರಿ ೨.೦ ತಂತ್ರಾAಶಗಳ ಮೂಲಕ ಸಾಲ ವಿತರಣೆಗೆ ಪೂರ್ವಭಾವಿಯಾಗಿ ಸಾಲಕ್ಕೆ ಆಧಾರವಾಗಿ ರೈತರ ಕೃಷಿ ಸ್ಥಿರಾಸ್ತಿಗಳನ್ನು ಅಡಮಾನ ಮಾಡಿಕೊಳ್ಳುವಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ.
ಜಿಲ್ಲೆಯಲ್ಲಿನ ಪ್ರಮುಖ ಬೆಳೆಗಳಾದ ಕಾಫಿ, ಕರಿಮೆಣಸು, ಏಲಕ್ಕಿ ಬೆಳೆಯಾಧಾರಿತ ಬೆಳೆ ಸಾಲವನ್ನು ಫ್ರೂಟ್ಸ್ ತಂತ್ರಾAಶದ ಮೂಲಕ ಫಾರಂ-೩ರ ದಾಖಲಾತಿಯೊಂದಿಗೆ ವಿತರಿಸುವಲ್ಲಿ ಕಾಫಿ, ಕರಿಮೆಣಸು ಮತ್ತು ಏಲಕ್ಕಿ ಬೆಳೆಗಳನನ್ನು ತಂತ್ರಾAಶದಲ್ಲಿ ನಿಷ್ಕಿçಯಗೊಳಿಸಲಾಗಿದ್ದು, ಈ ಬೆಳೆಗಳನ್ನು ಸಕ್ರಿಯಗೊಳಿಸಬೇಕಾಗಿದೆ. ಫ್ರೂಟ್ಸ್ ತಂತ್ರಾAಶದ ಮೂಲಕ ಮಧ್ಯಮಾವಧಿ ಕೃಷಿ ಸಾಲ ವಿತರಣೆಗೆ ಸಂಬAಧಿಸಿದAತೆ ರೈತರ ಸ್ಥಿರಾಸ್ತಿ ಅಡಮಾನ ಪ್ರಕ್ರಿಯೆಯಡಿ ಅಡಮಾನ ಪತ್ರ ಅಥವಾ ಬ್ಯಾಂಕಿನ ಪತ್ರವನ್ನು ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಫ್ರೂಟ್ಸ್ ತಂತ್ರಾAಶದ ಮೂಲಕ ಸ್ಥಿರಾಸ್ತಿ ಅಡಮಾನ ಪ್ರಕ್ರಿಯೆಯಡಿ ರೈತ ಸಾಲಗಾರರ ವೈಯಕ್ತಿಕ ಮಾಹಿತಿ, ಸಾಲದ ಮಾಹಿತಿಯನ್ನು ದಾಖಲಿಸಿ ಸಾಲದ ಋಣವನ್ನು ಸೃಜಿಸಲು ಫ್ರೂಟ್ಸ್ ತಂತ್ರಾAಶದೊAದಿಗೆ ಪ್ರಸ್ತುತ ಸಂಯೋಜನೆಗೊಳಿಸಲಾದ ಕಾವೇರಿ ೨.೦, ತಂತ್ರಾಶದ ಮೂಲಕ ಸಾಲದ ಮೊತ್ತಕ್ಕೆ ಎದುರಾಗಿ ನಿಗದಿತ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ನಿಷ್ಕಿçಯಗೊಂಡಿರುವುದರಿAದ ಮುಂದಿನ ಅಡಮಾನ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸಾಧ್ಯವಿಲ್ಲದಂತಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡ ಇತ್ತೀಚೆಗೆ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರ ಮನವಿಯಂತೆ ಹಾಗೂ ಸಮಸ್ಯೆಯ ಗಂಭೀರತೆಯAತೆ ಸರಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದರೂ ಈ ತನಕ ಯಾವುದೇ ಪ್ರಯೋಜನವಾಗಿಲ್ಲ.
ಸಮಸ್ಯೆ ಈಗಲೂ ಇತ್ಯರ್ಥವಾಗದೆ ಯಥಾವತ್ತಾಗಿ ಮುಂದುವರೆಯುತ್ತಿರುವುದರಿAದ ಕಾಫಿ, ಕರಿಮೆಣಸು ಮತ್ತು ಏಲಕ್ಕಿ ಬೆಳೆ ಆಧಾರದಲ್ಲಿ ಬೆಳೆ ಸಾಲ ಪಡೆಯುತ್ತಿರುವ ಸರಿಸುಮಾರು
(ಮೊದಲ ಪುಟದಿಂದ) ೩೦ ಸಾವಿರಕ್ಕಿಂತಲೂ ಅಧಿಕ ರೈತರ ರೂ. ೪೦೦ ಕೋಟಿಗಳಷ್ಟು ಬೆಳೆ ಸಾಲದ ಮಾಹಿತಿಯನ್ನು ಭೂ ಹಿಡುವಳಿ ಸಂಕಿತ ಫ್ರೂಟ್ಸ್ ತಂತ್ರಾAಶದಲ್ಲಿ ದಾಖಲಿಸಲು ಸಾಧ್ಯವಾಗದೆ ರೈತರ ಅಗತ್ಯತೆಯಂತೆ ಸಾಲ ವಿತರಣೆ ಸಾಧ್ಯವಾಗುತ್ತಿಲ್ಲ.
ಕೃಷಿ ಸ್ಥಿರಾಸ್ತಿ ಅಡಮಾನ ಆಧಾರಿತ ವಿವಿಧ ಕೃಷಿ ಅಭಿವೃದ್ಧಿ ಪೂರಕ ಚಟುವಟಿಕೆಗಳಿಗೆ ಏಪ್ರಿಲ್ ೨೦೨೩ರಿಂದಲೇ ಈ ತನಕ ಮಂಜೂರಾತಿ ಮಾಡಿರುವ ೧೧೬ ರೈತ ಸದಸ್ಯರುಗಳ ರೂ.೬.೪೮ ಕೋಟಿಗಳಷ್ಟು ಮಾಧ್ಯಮಾವಧಿ ಕೃಷಿ ಸಾಲವನ್ನು ವಿತರಿಸಲೂ ಸಾಧ್ಯವಾಗಿಲ್ಲ. ರಾಜ್ಯ ಸರಕಾರದ ಶೂನ್ಯ ಬಡ್ಡಿದರದ ಬೆಳೆಸಾಲ ಮತ್ತು ಶೇ.೩ರ ಬಡ್ಡಿ ದರದ ಮಾಧ್ಯಮಾವಧಿ ಸಾಲವನ್ನು ಸಕಾಲದಲ್ಲಿ ರೈತ ಸದಸ್ಯರುಗಳಿಗೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರು ಇದೀಗ ಸಂಬAಧಿಸಿದವರ ಗಮನಕ್ಕೆ ಮತ್ತೆ ತಂದಿದ್ದಾರೆ.
ರೈತರಿಗೆ ಸಾಲ ಪಡೆಯಲು ಹಾಗೂ ಸಾಲ ನೀಡಲು ಹೊಸ ನಿಯಮದಿಂದ ಭಾರೀ ತೊಂದರೆ ಎದುರಾಗಿದೆ. ಇದು ಕೊಡಗಿನಲ್ಲಿ ಸಾಲ ಪ್ರಕ್ರಿಯೆಯ ಪರ್ವಕಾಲವಾಗಿದ್ದು, ಸಂಬAಧಿಸಿದವರು ತಕ್ಷಣ ಸಮಸ್ಯೆ ಸರಿಪಡಿಸಬೇಕೆಂದು ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಜ್ಜಮಾಡ ಚಂಗಪ್ಪ ಅವರು ‘ಶಕ್ತಿ’ ಮೂಲಕ ಮನವಿ ಮಾಡಿದ್ದಾರೆ.