ಮಡಿಕೇರಿ, ಜೂ.೧: ಎರಡು ವರ್ಷಕ್ಕೊಮ್ಮೆ ನಡೆಯುವ ಮರಂದೋಡ ಗ್ರಾಮದ ಶ್ರೀ ಕೇಕುಮಾನಿ, ಭಗವತಿ, ಭದ್ರಕಾಳಿ ದೇವರ ವಿಶೇಷ ಹಬ್ಬವು ತಾ.೨ (ಇಂದು) ಮತ್ತು ತಾ.೩ ರಂದು ನಡೆಯಲಿದೆ.
ತಾ.೨ರ ಬೆಳಿಗ್ಗೆ ಕಲಿಯ ಪಾತ್ರೆ ಪ್ರತಿ ಕುಟುಂಬದಿAದ ವಿಜೃಂಭಣೆಯಿAದ ದೇವಸ್ಥಾನಕ್ಕೆ ತರುವುದು. ಮಧ್ಯಾಹ್ನದ ನಂತರ ಎತ್ತು ಪೊರಾಟ ಮತ್ತು ಬೊಳಕಾಟ್ ಕಾರ್ಯಕ್ರಮ ನಡೆಯುವುದು. ತಾ.೩ ರಂದು ಬೆಳಿಗ್ಗೆ ೬ ಗಂಟೆಯಿAದ ಅಯ್ಯಪ್ಪ ದೇವರ ತೆರೆ, ಶಾರಧವು ದೇವರ ತೆರೆ, ಅಜ್ಜಪ್ಪ ದೇವರ ತೆರೆ ನಡೆಯುವುದು. ಅಲ್ಲದೆ ಬೆಳಿಗ್ಗೆ ೧೨ ಗಂಟೆಗೆ ಸರಿಯಾಗಿ ಶ್ರೀ ಭದ್ರಕಾಳಿ ಮತ್ತು ಪಡಮಾಳಿ ದೇವರ ೨ ವಿಶೇಷ ಮುಡಿ ತೆರೆಗಳು ನಡೆಯುತ್ತದೆ.