ಮಡಿಕೇರಿ, ಜೂ. ೧: ವೀರಾಜಪೇಟೆ-ಮೈತಾಡಿ ಗ್ರಾಮದ ನಿವಾಸಿ ಸುನೀತ-ಪ್ರವೀಣ ದಂಪತಿಯ ಪುತ್ರಿ ಧನ್ಯ ದೇಚಮ್ಮ ನಾಪತ್ತೆಯಾಗಿರುವುದಾಗಿ ಸುನೀತ ಅವರು ವೀರಾ ಜಪೇಟೆ ನಗರ ಠಾಣೆಗೆ ದೂರು ನೀಡಿದ್ದಾರೆ. ಮೇ ೨೯ ರಂದು ಧನ್ಯ ಕಿರುಗೂರಿನ ತನ್ನ ಅತ್ತೆಯ ಮನೆಗೆ ತೆರಳಿದ್ದು, ಅದೇ ದಿನ ವಾಪಸ್ಸು ವೀರಾಜಪೇಟೆ ಬಸ್ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇಲ್ಲಿಂದ ಮತ್ತೆ ಮನೆಗೆ ವಾಪಸ್ಸು ಬಾರದ ಕಾರಣ ಧನ್ಯಳ ತಾಯಿ ಠಾಣೆಗೆ ದೂರು ನೀಡಿದ್ದಾರೆ. ಧನ್ಯಳ ಬಗ್ಗೆ ಮಾಹಿತಿ ಇದ್ದಲ್ಲಿ ವೀರಾಜಪೇಟೆ ನಗರ ಠಾಣೆ ದೂ. ೦೮೨೭೪-೨೫೭೩೩೩ನ್ನು ಸಂಪರ್ಕಿಸಲು ಕೋರಿದೆ.