ವೀರಾಜಪೇಟೆ, ಜೂ. ೧: ಸಮೀಪದ ಕದನೂರು ಗ್ರಾಮದ ಶ್ರೀ ಭಗವತಿ ದೇವಾಲಯದ ಪ್ರತಿಷ್ಠಾಪನಾ ಅಷ್ಟಮಂಗಲ ಮಹೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭವಾಯಿತು.

ತಾ. ೨ ರಂದು (ಇಂದು) ಬೆಳಿಗ್ಗೆ ೬ಗಂಟೆಗೆ ಗಣಹೋಮ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕಳಕಾಭಿಷೇಕ, ಜೀವಕಲಶ ಬಿಂಬಶುದ್ಧಿ ಕಲಶ ಪೂಜೆ, ಕಲಾವೃದ್ಧಿ ಹೋಮ ಹಾಗೂ ಕಲಾಹೋಮ, ಮಂಡಲ ಪೂಜೆಗಳು ನಡೆಯಲಿವೆ.