ಪೊನ್ನಂಪೇಟೆ, ಮೇ ೩೧: ವೀರಾಜಪೇಟೆ ತಾಲೂಕಿನಲ್ಲಿ ೪ ವರ್ಷಗಳ ಕಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಶೈಲ ಬೀಳಗಿ ಅವರಿಗೆ ವೀರಾಜಪೇಟೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಬೀಳಗಿ ಅವರು, ಕೊಡಗಿನಲ್ಲಿ ಕೆಲಸ ಮಾಡಲು ಒಳ್ಳೆಯ ವ್ಯವಸ್ಥೆ ಇದೆ.
ಉತ್ತಮ ಶಿಕ್ಷಕರು, ಪೋಷಕರು ಇದ್ದು ಸಂತೋಷದಿAದ ಕೆಲಸ ನಿರ್ವಹಿಸಿದ್ದೇನೆ ಎಂಬ ತೃಪ್ತಿ ಇದೆ ಎಂದರು.
ಈ ಸಂದರ್ಭ ವ್ಯವಸ್ಥಾಪಕರಾದ ಬಂಡರ್ಕರ್, ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ, ಶಿಕ್ಷಣ ಸಂಯೋಜಕರು ಗಳಾದ ಅಯ್ಯಪ್ಪ, ವಿಶಾಲಾಕ್ಷಿ, ಮಾರ್ಗರೇಟ್, ಬಿಆರ್‌ಪಿಗಳಾದ ಕೆ.ಸಿ. ಗೀತಾಂಜಲಿ, ವಾಮನ, ಪುಷ್ಪ, ಬಿಐಇಆರ್‌ಟಿಗಳಾದ ಅಜಿತ, ಕೇಶವಮೂರ್ತಿ, ವಿಠ್ಠಲ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ತಿರುನೆಲ್ಲಿಮಡ ಜೀವನ್, ಕರುಂಬಯ್ಯ, ಪ್ರವೀಣ್, ಶ್ರೀನಿವಾಸ್, ಮುರುಗನ್, ಅನಿತಾಕುಮಾರಿ, ಸವಿತಾ, ರಾಧಾ, ಕೆ.ಕೆ. ಸುಷ, ಎನ್.ಆರ್. ರವಿ, ಬಿಆರ್.ಸಿ. ಕಚೇರಿ ಸಿಬ್ಬಂದಿಗಳಾದ ಸುದಿನ, ಕಾವೇರಮ್ಮ, ಕುಮಾರಿ, ಜಾನ್ಸಿ ಹಾಜರಿದ್ದರು.