ಸಿದ್ದಾಪುರ, ಮೇ ೩೧: ಸ್ನಾನ ಮಾಡಲು ನದಿಗೆ ತೆರಳಿದ ಶಾಲಾ ಬಾಲಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಂಡAಗೇರಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಕೊಂಡAಗೇರಿ ಗ್ರಾಮದ ನಿವಾಸಿ ದಿ. ಹಸೈನಾರ್ ಎಂಬವರ ಎರಡನೇ ಪುತ್ರ ನಾಗಿರುವ ಆಸಿಮ್ (೧೫) ಎಂಬಾತ ತನ್ನ ೫ ಮಂದಿ ಶಾಲಾ ಸ್ನೇಹಿತರೊಂದಿಗೆ ಮಧ್ಯಾಹ್ನ ಶಾಲೆಯಿಂದ ಊಟ ಮುಗಿಸಿ ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ಎನ್ನಲಾಗಿದೆ. ಈ ಸಂದರ್ಭ ನೀರಿನಲ್ಲಿ ಮುಳುಗಿ ಆಸಿಮ್ ಮೃತಪಟ್ಟಿದ್ದಾನೆ. ಈ ಬಗ್ಗೆ ಆತನ ಸ್ನೇಹಿತರು ನೀಡಿದ ಮಾಹಿತಿ ಮೇರೆಗೆ ಸ್ಥಳೀಯರು ಕೂಡಲೇ ನದಿಯತ್ತ ಧಾವಿಸಿ ಸ್ಥಳೀಯ ನಾಡ ದೋಣಿಗಳು ಹಾಗೂ ಹೊರ ಊರಿನಿಂದ ಬೋಟುಗಳನ್ನು ತರಿಸಿ ಸ್ಥಳೀಯರ ನೆರವಿನಿಂದ ಮುಳುಗು ತಜ್ಞರು ಕಾವೇರಿ ನದಿಯಲ್ಲಿ ಹುಡುಕಾಡಿ ರಾತ್ರಿ ಮೃತದೇಹವನ್ನು ನೀರಿನಿಂದ ಹೊರ ತೆಗೆಯಲಾಯಿತು. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದು ಮೃತ ಬಾಲಕನು ಕೊಂಡAಗೇರಿಯ ಸರಕಾರಿ ಪ್ರೌಢಶಾಲೆಯಲ್ಲಿ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.