ಮಡಿಕೇರಿ, ಮೇ ೩೧: ವನ್ಯಜೀವಿ ದಾಳಿಯಿಂದ ಸಂಭವಿಸಿದ ಪ್ರಾಣಹಾನಿ, ಅಂಗವೈಕಲ್ಯತೆ, ಆಸ್ತಿಪಾಸ್ತಿ ನಷ್ಟ ಪ್ರಕರಣಗಳಿಗೆ ಸಂಬAಧಿಸಿದAತೆ ನೀಡುತ್ತಿದ್ದ ದಯಾತ್ಮಕ ಧನವನ್ನು ಹೆಚ್ಚಿಸಿ ಸರಕಾರ ಆದೇಶಿಸಿದೆ.

ಮಾನವ ಪ್ರಾಣ ಹಾನಿಗೆ ರೂ. ೭.೫೦ ಲಕ್ಷದಿಂದ ರೂ. ೧೫ ಲಕ್ಷಕ್ಕೆ, ಶಾಶ್ವತ ಅಂಗವೈಕಲ್ಯತೆ ಪ್ರಕರಣಗಳಿಗೆ ರೂ. ೫ ಲಕ್ಷದಿಂದ ರೂ. ೧೦ ಲಕ್ಷಕ್ಕೆ, ಭಾಗಶಃ ಅಂಗವೈಕಲ್ಯತೆಗೆ ರೂ. ೨.೫೦ ಲಕ್ಷದಿಂದ ರೂ. ೫ ಲಕ್ಷಕ್ಕೆ, ಗಾಯಗೊಂಡ ವ್ಯಕ್ತಿಗೆ ರೂ. ೩೦ ಸಾವಿರದಿಂದ ರೂ. ೬೦ ಸಾವಿರಕ್ಕೆ, ಕಾಡಾನೆ ದಾಳಿಯಿಂದ ಉಂಟಾದ ಆಸ್ತಿಪಾಸ್ತಿ ನಷ್ಟಕ್ಕೆ ರೂ. ೧೦ ಸಾವಿರದಿಂದ ರೂ. ೨೦ ಸಾವಿರಕ್ಕೆ. ವನ್ಯಪ್ರಾಣಿಗಳಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಹಾಗೂ ಶಾಶ್ವತ ಅಂಗವೈಕಲ್ಯತೆಗೊಳಗಾದ ವ್ಯಕ್ತಿ ಕುಟುಂಬಕ್ಕೆ ಪ್ರತಿ ತಿಂಗಳAತೆ ೫ ವರ್ಷಗಳ ತನಕ ನೀಡುತ್ತಿದ್ದ ಮಾಸಾಶನವನ್ನು ರೂ. ೨ ಸಾವಿರದಿಂದ ರೂ. ೪ ಸಾವಿರಕ್ಕೆ ಹೆಚ್ಚಿಸಿ ಆದೇಶಿಸಲಾಗಿದೆ.