ಮಡಿಕೇರಿ, ಮೇ ೩೦: ಕೊಡಗಿನ ಹುಲಿ ಮೀಸಲು ಅರಣ್ಯದಲ್ಲಿ ನಿರ್ವಹಣೆಗಾಗಿ ಕಣ್ಗಾವಲು ಯೋಜನೆಗೆ ತಯಾರಿ ನಡೆದಿದೆ. ಇದಕ್ಕಾಗಿ ಕೊಡಗು ವಿಭಾಗದ ಅರಣ್ಯಾಧಿಕಾರಿಗಳು ಉತ್ತÀರಾಖಂಡ ರಾಜ್ಯದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಅವರು ಸುಧಾರಿತ ಎಲೆಕ್ಟಾçನಿಕ್ ಕ್ಯಾಮರಾ ಕಣ್ಣಿನ ಕಣ್ಗಾವಲು ಕಾರ್ಯ ನಿರ್ವಹಿಸುತ್ತಿರುವುದನ್ನು ಪ್ರಾಯೋಗಿಕವಾಗಿ ಗಮನಿಸಲು ತೆರಳಿದ್ದಾರೆ., ಇದನ್ನು ಮುಖ್ಯವಾಗಿ ಕರ್ನಾಟಕದಲ್ಲಿ ಹುಲಿ ಮೀಸಲು ಪ್ರದೇಶಗಳಲ್ಲಿ ಮೇಲ್ವಿಚಾರಣೆಗಾಗಿ ಪ್ರಾಯೋಗಿಕ ಯೋಜನೆಯ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಒಂದೆಡೆ ಹುಲಿಗಳ ರಕ್ಷಣೆ ಮತ್ತೊಂದೆಡೆ ಇ-ಕಣ್ಗಾವಲು ಮೂಲಕ ಅರಣ್ಯದಿಂದ ಹುಲಿಗಳು ಜನವಾಸದ ಪ್ರದೇಶಕ್ಕೆ ಬರುವಂತಹ ಚಲನ- ವಲನ ವೀಕ್ಷÀಣೆಯೊಂದಿಗೆ ಹುಲಿ ಧಾಳಿಯ ಮುನ್ನೆಚ್ಚರಿಕಾ ವ್ಯವಸ್ಥೆಗಳಿಗೂ ಸುಲಭ ಸಾಧ್ಯ ಕ್ರಮ ಅನುಸರಿಸಲು ಈ ಮುಂದುವರಿದ ವಿಜ್ಞಾನ ಪ್ರಯೋಜನವಾಗಲಿದೆ.

ರಾಜ್ಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಕುಮಾರ್ ಪುಷ್ಕರ್, ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಮತ್ತು ನಾಗರಹೊಳೆ ವನ್ಯಜೀವಿ ಅಭಯಾರಣ್ಯ ನಿರ್ದೇಶಕ ಹರ್ಷಕುಮಾರ್ ಉತ್ತÀರಾಖಂಡದಲ್ಲಿ ಅಧ್ಯಯನ ಪ್ರವಾಸದಲ್ಲಿ ತೊಡಗಿದ್ದಾರೆ. ಇ ಐ ಕೇರಿಂಗ್ ಎಲೆಕ್ಟಾçನಿಕ್ ಕ್ಯಾಮೆರಾ ಮಾನಿಟರಿಂಗ್ ಸಿಸ್ಟಂ ಯಶಸ್ವಿಯಾಗಿರುವ ಉತ್ತರಾಖಂಡದ ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಅರಣ್ಯಾಧಿಕಾರಿಗಳಿಂದ ಸಮಗ್ರ ಅಧ್ಯಯನ ನಡೆಸಿ ಮಾಹಿತಿ ಪಡೆದ ನಂತರ ಕೊಡಗಿನಲ್ಲಿ ಪ್ರಾಯೋಗಿಕ ಯೋಜನೆ ಆರಂಭಿಸುತ್ತೇವೆ ಎಂದು ಮೂರ್ತಿ ತಿಳಿಸಿದರು. ಟಿವಿಎಸ್ ಕಂಪೆನಿಯು ಅರಣ್ಯ ಇಲಾಖೆ ಯೊಂದಿಗೆ ಕೈಜೋಡಿಸಿ ಯೋಜನೆಯನ್ನು ಪ್ರಾಯೋಜಿಸಲು ಒಪ್ಪಿಕೊಂಡಿದೆ ಎಂದರು.

(ಮೊದಲ ಪುಟದಿಂದ) ಕೊಡಗಿನ ಅರಣ್ಯ ಇಲಾಖೆಯು ಮೀಸಲು ಅರಣ್ಯ ಪ್ರದೇಶಗಳಲ್ಲಿ ಸಿಬ್ಬಂದಿ ಕೊರತೆ ಮತ್ತು ಕಣ್ಗಾವಲು ಸಮಸ್ಯೆಯನ್ನು ಎದುರಿಸುತ್ತಿದೆ. ವರ್ಷದ ಹೆಚ್ಚಿನ ಭಾಗದಲ್ಲಿ ಹವಾಮಾನ ವಿಕೋಪ ಪರಿಸ್ಥಿತಿಗಳು ಸರಿಯಾದ ಕಣ್ಗಾವಲು ಕ್ರಮವನ್ನು ತಡೆಯುತ್ತದೆ. ಇದರಿಂದಾಗಿ ವನ್ಯಜೀವಿಗಳ ಚಲನವಲನದ ಮೇಲೆ ನಿಗಾ ಇಡುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಪ್ರಾಯೋಗಿಕವಾಗಿ ಇ-ಕಣ್ಣಿನ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲು ಇಲಾಖೆ ಯೋಜನೆ ರೂಪಿಸುತ್ತಿದ್ದು, ಜಿಲ್ಲೆಯ ಅರಣ್ಯಗಳ ಕಣ್ಗಾವಲು ಆಧುನೀಕೃತ ರೂಪು ರೇಷೆ ಪಡೆಯಲಿದೆ.

ಇ-ಕಣ್ಣಿನ ಕಣ್ಗಾವಲು ವ್ಯವಸ್ಥೆಯು ೪೦ ರಿಂದ ೫೦ ಮೀಟರ್ ಎತ್ತರವಿರುವ ಸೌರ ಚಾಲಿತ ಗೋಪುರಗಳ ಮೇಲೆ ಅಳವಡಿಸಲಾಗುವ ಇನ್ಫಾçರೆಡ್ ಥರ್ಮಲ್ ಮತ್ತು ಮೋಷನ್ ಸೆನ್ಸಾರ್ ಕ್ಯಾಮರಾಗಳೊಂದಿಗೆ ಸಜ್ಜುಗೊಳ್ಳುತ್ತದೆ. ಹಲವಾರು ಅಂತರ್-ಸAಪರ್ಕಿತ ಕ್ಯಾಮರಾಗಳು ನೈಜ ಸಮಯದಲ್ಲಿ ಕಣ್ಗಾವಲಿಗೆ ಸಹಾಯ ಮಾಡುತ್ತವೆ. ಕತ್ತಲೆ ಮತ್ತು ಮಂಜಿನ ವಾತಾವರಣದಲ್ಲಿ ಅದರ ಅಡೆತಡೆಯಿಲ್ಲದ ಕಾರ್ಯ ನಿರ್ವಹಣೆಯೊಂದಿಗೆ ಹವಾಮಾನ-ನಿರೋಧಕ ಎಂದು ಪರೀಕ್ಷಿಸಲಾಗಿದೆ.

ಅರಣ್ಯಾಧಿಕಾರಿಗಳು ಕಚೇರಿಯಿಂದಲೇ ಅರಣ್ಯದಲ್ಲಿ ನಡೆಯುವ ವಿದ್ಯಮಾನಗಳನ್ನು ಸುಲಭವಾಗಿ ಗಮನಿಸಬಹುದು ಎಂದು ಕೊಡಗು, ಸಿಸಿಎಫ್ ಬಿ.ಎನ್.ಎನ್. ಮೂರ್ತಿ ವಿವರಿಸಿದರು. ಇ-ಐ ಅನ್ನು ಕಾಡಿನಲ್ಲಿ ಪ್ರವೇಶಿಸಲಾಗದ ಅಥವಾ ಪ್ರವೇಶಿಸಲು ಕಷ್ಟವಾಗುವ ಪ್ರದೇಶಗಳಲ್ಲಿ ಸ್ಥಾಪಿಸಬಹುದು. ನಾವು ಉತ್ತರಾಖಂಡ್‌ನ ಕಾರ್ಬೆಟ್‌ನಲ್ಲಿ ಅದರ ಯಶಸ್ಸಿನ ಅಧ್ಯಯನವನ್ನು ನಡೆಸುತ್ತಿದ್ದೇವೆ ಮತ್ತು ಅದನ್ನು ಪ್ರಾಯೋಗಿಕವಾಗಿ ಕೊಡಗಿನಲ್ಲಿ ಅಳವಡಿಸಲಾಗುವುದು ಎಂದು ಖಚಿತಪಡಿಸಿದರು.