ವೀರಾಜಪೇಟೆ, ಮೇ ೩೦: ವೀರಾಜಪೇಟೆಗೆ ಸಮೀಪದ ಕದನೂರು ಗ್ರಾಮದ ಶ್ರೀ ಭಗವತಿ ದೇವಾಲಯದ ಪ್ರತಿಷ್ಠಾಪನಾ ಅಷ್ಟಮಂಗಲ ಮಹೋತ್ಸವ ಜೂನ್ ೧ ರಿಂದ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಅಮ್ಮುಣಿಚಂಡ ಎನ್. ರವಿ ಉತ್ತಪ್ಪ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಈ ಬಗ್ಗೆ ಮಾತನಾಡಿದ ಅವರು, ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಜೂನ್ ೧ ರಂದು ಸಂಜೆ ದೇವಾಲಯದಲ್ಲಿ ವಾಸ್ತುಹೋಮ, ವಾಸ್ತುಬಲಿ ಹಾಗೂ ವಾಸ್ತು ಕಲಶ ಪೂಜೆಗಳು ನಡೆಯಲಿದೆ. ಜೂನ್ ೨ ರಂದು ಬೆಳಿಗ್ಗೆ ೬ ಗಂಟೆಗೆ ಗಣಹೋಮ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ಜೀವಕಲಶ ಬಿಂಬಶುದ್ಧಿ ಕಲಶ ಪೂಜೆ, ಕಲಾವೃದ್ಧಿ ಹೋಮ ಹಾಗೂ ಕಲಾಹೋಮ ನಡೆಯಲಿದೆ. ಇದೂ ಅಲ್ಲದೆ ಮಂಡಲ ಪೂಜೆಗಳು ನಡೆಯಲಿದೆ. ಈ ಎರಡೂ ದಿನಗಳು ಭಕ್ತರಿಗೆ ಮಧ್ಯಾಹ್ನದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಆಡಳಿತ ಮಂಡಳಿಯ ಪೆಮ್ಮಂಡ ಪ್ರಸಾದ್, ಪಾಲೇಕಂಡ ಉಮೇಶ್ ತಿಳಿಸಿದ್ದಾರೆ.