ಸಹಾರ ಚಾಂಪಿಯನ್
ಪಾಲಿಬೆಟ್ಟ, ಮೇ ೩೦: ಸಹಾರ ಯೂಥ್ ಕ್ಲಬ್ ಆಶ್ರಯದಲ್ಲಿ ಚೆನ್ನಯ್ಯನಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ೪ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಅಂತಿಮ ಪಂದ್ಯಾಟದಲ್ಲಿ ೨-೦ ಗೋಲ್‌ಗಳಿಂದ ಅಮ್ಮತ್ತಿಯ ಗೋಲ್ಡನ್ ಈಗಲ್ಸ್ ತಂಡವನ್ನು ಮಣಿಸಿ ಆತಿಥೇಯ ಸಹಾರ ಯೂಥ್ ಕ್ಲಬ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಒಟ್ಟು ೭೨ ತಂಡಗಳು ಭಾಗವಹಿಸಿದ್ದು, ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಸಹಾರ ತಂಡದ ಜುನೈದ್, ಉತ್ತಮ ಗೋಲ್ ಕೀಪರ್ ಸಹಾರ ತಂಡದ ಅಮೀರ್, ಅತೀ ಹೆಚ್ಚು ಗೋಲು ಬಾರಿಸಿದ ಪ್ರಶಸ್ತಿಯನ್ನು ಅಮತ್ತಿ ತಂಡದ ರಹೀಸ್ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೊಡಗು ಮುಸ್ಲಿಂ ಕಪ್‌ನ ಸಂಸ್ಥಾಪಕ ಆಸೀಫ್ ಮಾತನಾಡಿ, ಪ್ರತಿಭಾವಂತ ಕ್ರೀಡಾಪಟುಗಳನ್ನು ಬೆಳೆಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ಚೆನ್ನಯ್ಯನ ಕೋಟೆಯಲ್ಲಿ ಸೌಹಾರ್ದತೆಯಿಂದ ಆಯೋಜಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ ಅಧ್ಯಕ್ಷ ಸಲೀಂ, ಹಾಗೂ ಅಬ್ದುಲ್‌ರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಾಗರ್ ಸಂಘದ ಸ್ಥಾಪಕ ಹೆಚ್.ಎ. ಮುಸ್ತಫ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಶ್, ವಿಜು, ಸರ್ವಸಾಹಾಯಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಕಿಶೋರ್ ಕುಮಾರ್, ಇಬ್ರಾಹಿಂ, ರದೀಶ್, ರವೀಂದ್ರ ಭಾವೆ, ಸಹಾರ ಯೂಥ್ ಕ್ಲಬ್‌ನ ಊರೈಸ್, ಕಾರ್ಯದರ್ಶಿ ಅಬ್ದುಲ್ ಮುಜೀಬ್, ಶಬೀರ್, ಆಸೀಫ್, ನಿಶಾದ್ ಮುಂತಾದವರು ಪಾಲ್ಗೊಂಡಿದ್ದರು.