ಕಡಂಗ, ಮೇ ೨೯: ಸುನ್ನೀ ಯುವಜನ ಸಂಘ ಎಸ್‌ವೈಎಸ್‌ಎಸ್ ಎಸ್‌ಎಫ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಕಡಂಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಬದ್ರಿಯಾ ಮದರಸ ಸಭಾಂಗಣದಲ್ಲಿ ಸಾಮೂಹಿಕ ಉಚಿತ ಸುನ್ನತ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಕಡಂಗ ಶಾಖೆಯ ಅಧ್ಯಕ್ಷ ಅಶ್ರಫ್ ಸಿ.ಎ. ವಹಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬದ್ರಿಯಾ ಮದರಸ ಮುಖ್ಯೋಪಾಧ್ಯಾಯರಾದ ಶಿಯಾಬುದ್ದಿನ್ ಜವುಹರಿ ಸಂಘಟನೆ ಇಂತಹ ಉಚಿತ ಕಾರ್ಯಕ್ರಮ ನಡೆಸುವುದು ಶ್ಲಾಘನೀಯ ಎಂದರು. ಸುನ್ನತ್ ಕಾರ್ಯಕ್ಕೆ ಹಜ್ರತ್ ಹಕೀಮ್ ಮೊಹಮ್ಮದ್ ವಾಹಿದ್ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಅಬ್ದುಲ್ ಖಾದರ್, ಹಸೈನಾರ್, ಅಬೂಬಕ್ಕರ್ ಪಿ. ಹ್ಯಾರಿಸ್ ಹಾಜಿ, ಮೊಯಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಕುಜಾಬ್ದುಲ್ಲಾ, ಕುಜಿ ಮೊಹಮ್ಮದ್, ಉಮ್ಮರ್ ಸಿ.ಇ.ಉಮ್ಮರ್ ಮುಸ್ಲಿಯಾರ್, ಇಸ್ಮಾಯಿಲ್ ಮುಸ್ಲಿಯಾರ್, ಮೊಹಮ್ಮದ್ ಕುಂಜಿ, ಎಸ್‌ವೈಎಸ್ ಕೋಶಾಧಿಕಾರಿ ರಜಾಕ್, ಸಿ.ಎ.ಪ್ರಧಾನ ಕಾರ್ಯದರ್ಶಿ ಸಿ.ಎಂ.ನೌಶಾದ್, ಪಿ.ಎ. ಷಂಶುದ್ದೀನ್, ಬದ್ರಿಯಾ ಮಸೀದಿ ಕಾರ್ಯದರ್ಶಿ ಆಶಿಕ್, ರಫೀಕ್, ಎಸ್‌ಎಸ್‌ಎಫ್ ಪ್ರಧಾನ ಕಾರ್ಯದರ್ಶಿ ರಾಝಿಕ್ ಹಾಗೂ ಎಸ್ ಎಸ್ ಎಫ್, ಎಸ್ ವೈ ಎಸ್,ಕೆಎಂಜೆ ಸದಸ್ಯರು ಹಾಜರಿದ್ದರು.