ಗೋಣಿಕೊಪ್ಪಲು, ಮೇ ೨೯: ತಾಲೂಕು ಕೇಂದ್ರವಾದ ಪೊನ್ನಂಪೇಟೆಯಲ್ಲಿ ನೂತನ ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಕಚೇರಿ ಆರಂಭವಾಗಿದೆ.
ಶಾಸಕ ಪೊನ್ನಣ್ಣ ನೂತನ ಕಛೇರಿಯನ್ನು ಉದ್ಘಾಟಿಸಿದರು.
ಪೊನ್ನಂಪೇಟೆ ತಾಲೂಕು ಕಚೇರಿಯ ಆವರಣದಲ್ಲಿರುವ ಶಾಸಕರ ಕಚೇರಿಗೆ ಸುಣ್ಣ, ಬಣ್ಣ ಬಳಿದು ತಳಿರು ತೋರಣಗಳಿಂದ ಅಂಲಕಾರ ಮಾಡಲಾಗಿತ್ತು.
ಕಚೇರಿ ಉದ್ಘಾಟಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಮುಂದಿನ ದಿನಗಳಲ್ಲಿ ವೀರಾಜಪೇಟೆ ಹಾಗೂ ಮಡಿಕೇರಿಯಲ್ಲಿಯೂ ಕಚೇರಿ ಆರಂಭಿಸಲಾಗುತ್ತದೆ. ಸಾರ್ವಜನಿಕರು ಕಚೇರಿ ಉದ್ಘಾಟಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಮುಂದಿನ ದಿನಗಳಲ್ಲಿ ವೀರಾಜಪೇಟೆ ಹಾಗೂ ಮಡಿಕೇರಿಯಲ್ಲಿಯೂ ಕಚೇರಿ ಆರಂಭಿಸಲಾಗುತ್ತದೆ. ಸಾರ್ವಜನಿಕರು (ಮೊದಲ ಪುಟದಿಂದ) ಪೊನ್ನಣ್ಣ ಅವರು ಜನರ ಕಷ್ಟಕ್ಕೆ ಸ್ಪಂದಿಸಲಿದ್ದಾರೆ ಎಂದರು.
ಕಚೇರಿ ಉದ್ಘಾಟನೆಯ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಮಹಿಳಾ ಘಟಕ ಅಧ್ಯಕ್ಷೆ ಕೋಳೆರ ಭಾರತಿ, ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ, ಪಕ್ಷದ ಮುಖಂಡರಾದ ಚೆಕ್ಕೆರ ವಾಸು ಕುಟ್ಟಪ್ಪ, ಕೊಲ್ಲಿರ ಬೋಪಣ್ಣ, ಉಮೇಶ್ ಕೇಚಮಯ್ಯ, ಮುಕ್ಕಾಟಿರ ಸಂದೀಪ್, ಮೂಕಳೇರ ಕುಶಾಲಪ್ಪ, ಸುಮಿತ ಗಣೇಶ್, ಪಿ.ಆರ್.ಪಂಕಜ, ಶಾಜಿ ಅಚ್ಚುತ್ತನ್, ಕೆ.ಎಂ.ಅಜಿತ್ ಅಯ್ಯಪ್ಪ, ಕಡೆಮಾಡ ಕುಸುಮ, ಚೊಟ್ಟೆಯಂಡಮಾಡ ವಿಶು, ಅಬ್ದುಲ್ ಸಮ್ಮದ್,ಮಂಜುಳಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.