ಕಣಿವೆ, ಮೇ ೨೯: ಅಜ್ಜ ಹಾಗೂ ಅಪ್ಪ ನೂರುಕಾಲ ಬಾಳಿ ಬದುಕಿದ ಮನೆಗಳು, ಭವಿಷ್ಯದ ದಿನಗಳಿಗೆ ಊರುಗೋಲಾಗಲಿ ಎಂದು ನೆಟ್ಟು ಬೆಳೆಸಿದ ಗಿಡ - ಮರಗಳು, ದೈನಂದಿನ ಖರ್ಚು ವೆಚ್ಚಗಳನ್ನು ಸರಿದೂಗಿಸುತ್ತಿದ್ದ ಹೈನುಗಾರಿಕೆಯ ಹಸುಗಳು, ದಿನವೂ ಮೊಟ್ಟೆಯಿಡುತ್ತಿದ್ದ ಕೋಳಿಯ ಹಿಂಡು, ಆಗಿಂದಾಗ್ಗೆ ಲಾಭದ ಮೂಲವಾಗಿದ್ದ ಆಡು ಕುರಿಗಳು, ಅಷ್ಟೇ ಏಕೆ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದ ನೆರೆ - ಕರೆ ಮನೆಯವರು, ಹೀಗೆ ಎಲ್ಲರನ್ನು ಹಾಗು ಎಲ್ಲವನ್ನು ಬಿಟ್ಟು ಗುಳೇ ಹೋಗಲೇಬೇಕಾದ ಅನಿವಾರ್ಯತೆ, ಜೀವಮಾನವಿಡೀ ಸಂಪಾದಿಸಿ ಸಂಗ್ರಹಿಸಿಟ್ಟ ಹಣದಲ್ಲಿ ಈಗಷ್ಟೇ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದ ಮನೆಗಳು, ಅಜ್ಜ ತೋಡಿದ್ದ ಕುಡಿಯುವ ನೀರಿನ ಬಾವಿ, ಮುತ್ತಾತನ ನೆನಪಿನಲ್ಲಿದ್ದ ಐನ್‌ಮನೆ ಹೀಗೆ ಎಲ್ಲವನ್ನೂ ಬಿಟ್ಟು ಏನೂ ಇಲ್ಲದುದರ ಕಡೆ ಹೋಗಲೇಬೇಕಾದ ಪರಿಸ್ಥಿತಿ.... ಇದು ೨೭೫ ನೇ ರಾಷ್ಟಿçÃಯ ಹೆದ್ದಾರಿ ಅಗಲೀಕರಣ ಯೋಜನೆ, ಗುಡ್ಡೆಹೊಸೂರು ಬಳಿಯ ಬಸವನಹಳ್ಳಿಯ ೨೫ ಕ್ಕೂ ಹೆಚ್ಚು ಕುಟುಂಬಗಳ ಮೇಲೆ ತಂದೊಡ್ಡಿರುವ ಪರಿ.

ದೇಶದ ಪ್ರಧಾನಮಂತ್ರಿಗಳು ಕಳೆದ ಕೆಲವೇ ದಿನಗಳ ಹಿಂದಷ್ಟೇ ಮಂಡ್ಯದಲ್ಲಿ ಶಂಕುಸ್ಥಾಪನೆ ನೆರವೇರಿಸಿದ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ಬಳಿಯಿಂದ ಕುಶಾಲನಗರದ ಬಸವನಹಳ್ಳಿಯವರೆಗೆ ಸುಮಾರು ೯೨.೦೨ ಕಿಮೀ ದೂರದಷ್ಟು ೪.೧೨೯ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ರಾಷ್ಟಿçÃಯ ಹೆದ್ದಾರಿ ಎಂಬ ಮೆಗಾ ಯೋಜನೆ ಈ ಗ್ರಾಮದ ಜನ ಜೀವನದ ನೆಮ್ಮದಿಯನ್ನು ಕಿತ್ತುಕೊಂಡು ಮುಂದೇನು ಎಂಬ ಯೋಚನೆಯ ಚಿಂತೆಗೆ ದೂಡಿದೆ.

೨೦೨೩ ರಲ್ಲಿ ಆರಂಭವಾಗಿ ೨೦೨೬ರಲ್ಲಿ ಪೂರ್ಣಗೊಳ್ಳಬೇಕಾದ ಈ ಹೆದ್ದಾರಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ವಿವಿಧ ೧೧ ಕಂಪೆನಿಗಳು ಬಿಡ್ ಸಲ್ಲಿಸಿವೆ ಎನ್ನಲಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಉದ್ದೇಶಿತ ರಾಷ್ಡ್ರೀಯ ಹೆದ್ದಾರಿ ಕಾಮಗಾರಿಗೆ ಮೊದಲ ಹಂತದಲ್ಲಿ ರೂ. ೯೦೯.೮೬ ಕೋಟಿ ರೂಗಳ ಅನುದಾನವನ್ನು ಮೀಸಲಿಟ್ಟಿರುವ ಬಗ್ಗೆ ಭಾರತೀಯ ರಾಷ್ಟಿçÃಯ ಹೆದ್ದಾರಿಗಳ ಪ್ರಾಧಿಕಾರ ಖಚಿತಪಡಿಸಿದೆ.

ಕಳೆದ ಮೂರು ವರ್ಷಗಳ ಹಿಂದೆ ಪ್ರಸ್ತಾಪಿತಗೊಂಡ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗು ಈ ವಿಸ್ತೃತ ಹೆದ್ದಾರಿ ಅಭಿವೃದ್ದಿಯ ಈ ಯೋಜನೆ ಇಲ್ಲಿನ ಜನ ಜೀವನದ ಬದುಕಿನ ಮೇಲೆ ಹಾದು ಹೋಗಲಿದೆ ಎಂಬ ವಿಚಾರ ಬರಸಿಡಿಲಿನಂತೆ ಇಲ್ಲಿನ ಮಂದಿಗೆ ಒಂದೇ ಬಾರಿಗೆ ಅಪ್ಪಳಿಸಿತ್ತು. ಇದರಿಂದಾಗಿ ಚಿಂತಾಕ್ರಾAತರಾದ ಇಲ್ಲಿನ ಮಂದಿ ಕ್ಷೇತ್ರದ ಶಾಸಕರು, ಸಂಸದರು ಹಾಗು ಜಿಲ್ಲಾಧಿಕಾರಿಗಳವರೆಗು ಓಡಾಡಿ ತಮ್ಮ ಆತಂಕವನ್ನು ಹೇಳಿಕೊಂಡಿದ್ದರು.

ಇದೇ ಸಂದರ್ಭ ಇದೇ ಊರಿನ ಆಸ್ತಿಪಾಸ್ತಿಯನ್ನು ಹೆದ್ದಾರಿಗಾಗಿ ಕಳೆದುಕೊಳ್ಳುತ್ತಿರುವ ಗುಡ್ಡೆಮನೆ ಕುಟುಂಬಸ್ಥರು ತಮ್ಮ ಕುಟುಂಬದ ಅಳಿಯಂದಿರೇ ಆಗಿದ್ದ ಅಂದಿನ ಕೇಂದ್ರ ಮಂತ್ರಿಯೂ ಆಗಿದ್ದ ಸದಾನಂದಗೌಡ ಅವರ ಬಳಿಯೂ ತಮ್ಮ ಆತಂಕವನ್ನು ಹೇಳಿಕೊಂಡಿದ್ದರು ಎನ್ನಲಾಗಿದ್ದು, ಇಲ್ಲಿನ ಜನರ ಯಾವ ಪ್ರಯತ್ನಗಳು ಕೈಗೂಡಲಿಲ್ಲ.

ನೋಟೀಸ್ ನೀಡಿದವರು ಯಾರೆಂದು ಗೊತ್ತಿಲ್ಲ

ಮೈಸೂರಿನ ಭೂಸ್ವಾಧೀನಾಧಿಕಾರಿ ಕಛೇರಿಯ ಹೆಸರಲ್ಲಿರುವ ಈ ನೋಟೀಸ್ ಅನ್ನು ನೀಡಿದವರು ಯಾರು ?

ನಮಗೆ ಸೂಕ್ತ ಪರಿಹಾರವನ್ನು ಕೊಡುವವರು ಯಾರು ? ತಾತ ಮುತ್ತಾತನ ಕಾಲದಿಂದ ಅನುಭವಿಸಿ ಹಾಗೂ ಅನುಭೋಗಿಸಿಕೊಂಡು ಬರುತ್ತಿದ್ದ

(ಮೊದಲ ಪುಟದಿಂದ) ಭಾವನಾತ್ಮಕವಾದ ಎಲ್ಲಾ ಆಸ್ತಿ ಪಾಸ್ತಿಗಳನ್ನು ಬಿಟ್ಟು ನಾವು ಹೋಗಬೇಕಲ್ಲಾ ಎಂದು ಇಲ್ಲಿನ ಮಂದಿ ಚಡಪಡಿಸುತ್ತಿದ್ದಾರೆ.

ಆದ್ದರಿಂದ ಕ್ಷೇತ್ರದ ಶಾಸಕರು ಹಾಗೂ ಸಂಸದರು ಅಥವಾ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಮಂದಿಯತ್ತ ಬಂದು ಅವರ ಮನದ ನೋವನ್ನು ಆಲಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮೂಲಕ ಮಡುಗಟ್ಟಿರುವ ಆ ಕುಟುಂಬಗಳ ಜೊತೆ ನಿಲ್ಲಬೇಕಿದೆ. ನಿಂತು ಸರ್ಕಾರದಿಂದ ಸಿಗುವ ಸೂಕ್ತ ಪರಿಹಾರದ ಧನವನ್ನು ಕೊಡಿಸಬೇಕಿದೆ. ಅದರಲ್ಲೂ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗುತ್ತಿರುವ ಈ ಮಂದಿಯನ್ನು ಯಾವುದೇ ಕಛೇರಿಗಳಿಗೆ ಅನಗತ್ಯವಾಗಿ ಅಲೆಸದೇ ಪರಿಹಾರದ ಹಣವನ್ನು ಮನೆಗೆ ಬಂದು ತಲುಪಿಸುವ ಕೆಲಸ ಆಗಬೇಕಿದೆ. ಹಾಗಿದ್ದಲ್ಲಿ ಇಲ್ಲಿನ ಮಂದಿ ಒಂದಷ್ಟು ನೆಮ್ಮದಿಯಿಂದ ಜೀವನದ ಪರ್ಯಾಯ ಮಾರ್ಗ ಕಂಡುಕೊAಡು ಕೊಂಡುಕೊಳ್ಳಲು ಸಹಕಾರಿಯಾಗುತ್ತದೆ. ವಿಶೇಷ ವರದಿ : ಕೆ.ಎಸ್.ಮೂರ್ತಿ