ಮಡಿಕೇರಿ ಮೇ ೨೯ : ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಬಾಳುಗೋಡು ಕೊಡವ ಸಮಾಜದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು. ಜೇಸಿ ವಲಯ ೧೪ರ ಅಧ್ಯಕ್ಷೆ ಜೆಸಿ ಯಶಸ್ವಿನಿ ಉದ್ಘಾಟಿಸಿದರು.

ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಮುಕ್ಕಾಟಿರ ನೀತ್ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯ ೧೪ರ ನಿಕಟ ಪೂರ್ವ ಅಧ್ಯಕ್ಷ ಕುನಾಲ್ ಮಾಣಿಕ್ ಚಂದ್, ದಾನಿಗಳಾದ ಚೇಂದ್ರಿಮಾಡ ಗಣೇಶ್ ನಂಜಪ್ಪ, ಸವಿತಾ ನಾಣಯ್ಯ, ಪೊನ್ನಿರ ಚೇತನ್ ಚಂಗಪ್ಪ, ಕೋಲತಂಡ ಬೋಪಯ್ಯ, ಕೊಲ್ಲಿರ ಬೋಪಣ್ಣ, ಪೂರ್ವ ಅಧ್ಯಕ್ಷÀ ಆಪಟ್ಟೀರ ಟಾಟು ಮೊಣ್ಣಪ್ಪ, ಐಪಿಪಿ ಅಪ್ಪÀಡೇರಂಡ ದಿನು ದೇವಯ್ಯ, ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ಉಪಸ್ಥಿತರಿದ್ದರು.

ಸ್ಪರ್ಧೆ ವಿಜೇತರು : ೦.೨೨ ಬಂದೂಕು ವಿಭಾಗದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಯಲ್ಲಿ ಬಡುವಂಡ ಸ್ಲೋಕ್ ಸುಬ್ಬಯ್ಯ (ಪ್ರ) , ಸಣ್ಣುವಂಡ ವಿನು ವಿಶ್ವನಾಥ್ (ದ್ವಿ), ಕೇಚಟ್ಟೀರ ಸಮನ್ ಬೆಳ್ಯಪ (ತೃ) ಬಹುಮಾನ ಗೆದ್ದುಕೊಂಡಿದ್ದಾರೆ.

೧೨ ಬೋರ್ ಸ್ಪರ್ಧೆಯಲ್ಲಿ ವೇದಪಂಡ ಸರೀನ್ ಗಣಪತಿ (ಪ್ರ), ನೆಲ್ಲೀರಾ ರಾಕೇಶ್ (ದ್ವಿ), ಕಲಿಯಂಡ ಸಜನ್ ಅಯ್ಯಪ್ಪ (ತೃ),

ಏರ್‌ಗನ್‌ನಲ್ಲಿ ಮೊಟ್ಟೆಗೆ ಗುರಿ ಇಡುವ ಸ್ಪರ್ಧೆಯಲ್ಲಿ ಪುತ್ತೇರಿರ ಕಾರ್ತಿಕ್ (ಪ್ರ), ನಾಸಿರ್ (ದ್ವಿ), ಬಡುವಂಡ ಸ್ಲೋಕ್ ಸುಬ್ಬಯ್ಯ (ತೃ) ಬಹುಮಾನ ಪಡೆದುಕೊಂಡರು.