ಕೂಡಿಗೆ, ಮೇ ೨೯: ಕುಶಾಲನಗರದ ಭರತನಾಟ್ಯ ಕಲಾವಿದೆ ವಿದೂಷಿ ಬಿ.ಕೆ. ಮಂಜು ಭಾರ್ಗವಿ ಇವರ ಭರತನಾಟ್ಯ ಕಲಾಕ್ಷೇತ್ರದಲ್ಲಿ ಗಣನೀಯ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ತಮಿಳುನಾಡಿನ ಹೊಸೂರಿನಲ್ಲಿ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಮಂಜು ಭಾರ್ಗವಿ ಅವರು ಕುಶಾಲನಗರದ ವೆಂಕಟೇಶ್ವರ ಬಡಾವಣೆಯ ನಿವಾಸಿ ವಿಶಾಲಾಕ್ಷಿ, ಕುಮಾರ್ ದಂಪತಿ ಪುತ್ರಿ, ಜಿಲ್ಲಾ ಸಹಕಾರ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಎಸ್.ಡಿ. ಶಶಿಕುಮಾರ್ ಅವರ ಪತ್ನಿ. ಪ್ರಸ್ತುತ ಇವರು ಬೊಳ್ಳೂರಿನ ಐಶ್ವರ್ಯ ಕಾಲೇಜಿನ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.