ಕೂಡಿಗೆ, ಮೇ ೨೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನ ಸಮಿತಿಯ ವತಿಯಿಂದ ಮಾರಿಯಮ್ಮ ಗ್ರಾಮ ದೇವತೆಯ ಹಬ್ಬವು ತಾ ೩೦ ಮತ್ತು ೩೧ ರಂದು ನಡೆಯಲಿದೆ.
ತಾ. ೩೦ ರಂದು ಹಾರಂಗಿ ನದಿಯಿಂದ ಕಳಸ ತರುವುದು, ನಂತರ ಗಣಪತಿ ಹೋಮ, ನವಗ್ರಹ ಹೋಮ, ದುರ್ಗ ಶಾಂತಿಹೋಮ, ನಡೆಯಲಿದೆ. ತಾ. ೩೧ ರಂದು ಬಲಿಹರಣ, ಪೂರ್ಣಾಹುತಿ, ಶ್ರೀ ದೇವಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ದೊರೆ ತಿಳಿಸಿದ್ದಾರೆ.