ಮಡಿಕೇರಿ, ಮೇ ೨೭: ನಗರದ ದೇಚೂರಿನ ಶ್ರೀ ರಾಮ ವಿದ್ಯಾ ಗಣಪತಿ ದೇವಾಲಯದ ೨೫ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಹೆಚ್. ಆರ್. ಉದಯ್ ಕುಮಾರ್ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ನಿರ್ಮಾಲ್ಯ, ಪುಣ್ಯಾಹ ವಾಚನ, ದೇವತಾ ಪ್ರಾರ್ಥನೆ, ಮಹಾಗಣಪತಿ ಮೂರ್ತಿಗೆ ಅಭಿಷೇಕ, ಬಯಲು ಆಂಜನೇಯ ಪೂಜೆ, ಅಷ್ಟದ್ರವ್ಯ ಮಹಾಗಣಪತಿ ಮತ್ತು ನವಗ್ರಹ ಹೋಮ, ನವಗ್ರಹ ಮತ್ತು ನಾಗಪೂಜೆ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ ನಡೆದು ಸಾಮೂಹಿಕ ಅನ್ನದಾನ ನಡೆಯಿತು.