ಕೂಡಿಗೆ, ಮೇ ೨೭ : ಕೂಡಿಗೆಯಲ್ಲಿರುವ ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ೧೮ ರಿಂದ ೪೫ ವರ್ಷ ವಯೋಮಿತಿ ಒಳಗಿನ ನಿರುದ್ಯೋಗಿ ಯುವಕ, ಯುವತಿಯರಿಗೆ ಉಚಿತವಾಗಿ ೩೦ ದಿನಗಳ ವಿವಿಧ ತರಬೇತಿ ಕಾರ್ಯಾಗಾರವು ಸಂಸ್ಥೆಯ ಸಭಾಂಗಣದಲ್ಲಿ ಉಚಿತವಾಗಿ ನಡೆಯಲಿದೆ.
ಮುಂದಿನ ತಿಂಗಳ ಮೊದಲ ವಾರದಿಂದ ಹ್ಯಾಂಡ್ ಎಂಬ್ರಾಯಡರ್, ತರಬೇತಿ, ಬ್ಯೂಟಿ ಪಾರ್ಲರ್ ತರಬೇತಿ, ಕಂಪ್ಯೂಟರ್ ಟ್ಯಾಲಿ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ ೯೬೮೬೪೦೬೧೮೧, ೯೪೪೯೪೦೨೦೮೧, ೭೬೭೬೪೦೭೭೯೨ ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕ ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.