ಸೋಮವಾರಪೇಟೆ,ಮೇ.೨೮: ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಮನೆ ಸಮೀಪದ ಗೋದಾಮಿನಲ್ಲಿಟ್ಟಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಸಮೀಪದ ನೇಗಳ್ಳೆ ಕರ್ಕಳ್ಳಿ ಗ್ರಾಮದಲ್ಲಿ ನಡೆದಿದೆ.

ನೇಗಳ್ಳೆ ಕರ್ಕಳ್ಳಿ ಗ್ರಾಮದ ಕೃಷಿಕ ಕೆ.ಕೆ. ಬಸಪ್ಪ ಅವರು ತಮ್ಮ ಮನೆ ಸಮೀಪವೇ ಇರುವ ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಕೃಷಿ ಪರಿಕರಗಳನ್ನು ಇಟ್ಟಿದ್ದರು. ನಿನ್ನೆ ರಾತ್ರಿ ವೇಳೆಗೆ ಆಕಸ್ಮಿಕವಾಗಿ ಅಗ್ನಿ ಅವಘಡ ನಡೆದಿದ್ದು, ಬಹುತೇಕ ಎಲ್ಲಾ ಕೃಷಿ ಪರಿಕರಗಳು, ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ.

ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಎಚ್ಚೆತ್ತುಕೊಂಡ ಮನೆಯವರು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರ ಸಾಹಸಪಟ್ಟರೂ ತಹಬದಿಗೆ ಬರಲಿಲ್ಲ. ತಕ್ಷಣ ಅಗ್ನಿ ಶಾಮಕ ದಳಕ್ಕೆ ವಿಷಯ ಮುಟ್ಟಿಸಿದ ಹಿನ್ನೆಲೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದರು. ಆದರೆ ಅಷ್ಟರಲ್ಲಾಗಲೇ ಕೃಷಿ ಪರಿಕರಗಳಾದ ಮೋಟಾರ್‌ಗಳು, ಸ್ಪಿçಂಕ್ಲರ್ ಸೆಟ್‌ಗಳು, ಪೈಪ್‌ಗಳು, ಸ್ಪೆçà ಯಂತ್ರಗಳು, ಕಳೆಕೊಚ್ಚುವ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಯಂತ್ರಗಳು, ಕಟ್ಟಿಂಗ್ ಮೆಷಿನ್ ಸೇರಿದಂತೆ ಮೂರು ಚೀಲ ಗೊಬ್ಬರ, ಕ್ರಿಮಿನಾಶಕಗಳು ಸಂಪೂರ್ಣ ನಾಶಗೊಂಡಿದ್ದವು.

ಇದರೊAದಿಗೆ ಗೋದಾಮಿನ ಮೇಲ್ಛಾವಣಿ ಒಡೆದು ಹೋಗಿದ್ದು, ಕೃಷಿಕ ಬಸಪ್ಪ ಅವರಿಗೆ ಸೇರಿದ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಕಂದಾಯ ಇಲಾಖೆ ಇತ್ತ ಗಮನ ಹರಿಸಿ ಸರ್ಕಾರದಿಂದ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.