ನೂತನ ಸಂಸತ್ ಭವನ ಉದ್ಘಾಟನೆ

ನವದೆಹಲಿ, ಮೇ ೨೮: ನವದೆಹಲಿ: ರಾಷ್ಟç ರಾಜಧಾನಿ ನವದೆಹಲಿಯಲ್ಲಿ ತಲೆಯೆತ್ತಿ ನಿಂತಿರುವ ಪ್ರಜಾಪ್ರಭುತ್ವದ ನೂತನ ದೇಗುಲ ‘ಸಂಸತ್ ಭವನ'ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಲೋಕಾರ್ಪಣೆಗೊಳಿಸಿದರು. ಇಂದು ಬೆಳಿಗ್ಗೆ ೭.೧೫ಕ್ಕೆ ಸಾಂಪ್ರದಾಯಿಕ ಬಿಳಿ ಉಡುಗೆಯಲ್ಲಿ ಪ್ರಧಾನಿ ಮೋದಿ ಅವರು ಗೇಟ್ ನಂ. ೧ ರಿಂದ ಸಂಸತ್ ಆವರಣಕ್ಕೆ ಆಗಮಿಸಿದರು. ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು. ಮಹಾತ್ಮ ಗಾಂಧಿ ಪ್ರತಿಮೆ ಪಕ್ಕದಲ್ಲಿ ಆಯೋಜಿಸಿದ್ದ ಪೂಜಾ ವಿಧಾನಗಳಲ್ಲಿ ಇಬ್ಬರೂ ಭಾಗಿಯಾದರು. ಕರ್ನಾಟಕದ ಶೃಂಗೇರಿ ಮಠದ ಪುರೋಹಿತರು ವೇದ ಘೋಷಗಳನ್ನು ಪಠಿಸಿದರು. ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭ ಸಾಂಘವಾಗಿ ನಡೆಯಲು ಗಣಪತಿ ಹೋಮ ನಡೆಸಲಾಯಿತು. ಪೂಜಾ ವಿಧಾನಗಳು ಮುಗಿದ ಬಳಿಕ ಬಹುಚರ್ಚಿತ ರಾಜದಂಡವಾದ ‘ಸೆಂಗೋಲ್' ಅನ್ನು ತಮಿಳುನಾಡಿನ ವಿವಿಧ ಅಧೀನಂಗಳಿAದ ಪ್ರಧಾನಿ ಮೋದಿ ಅವರಿಗೆ ಹಸ್ತಾಂತರ ಮಾಡಲಾಯಿತು. ಪೂಜ್ಯರ ಆಶೀರ್ವಾದ ಪಡೆದ ಪ್ರಧಾನಿಗಳು, ಅದರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ನೂತನ ಸಂಸತ್ ಭವನ ಕೇವಲ ಕಟ್ಟಡವಲ್ಲ, ಇದು ಭಾರತದ ೧೪೦ ಕೋಟಿ ಜನರ ಆಕಾಂಕ್ಷೆಯ ಸಂಕೇತವಾಗಿದೆ. ಇದು ಭಾರತದ ಸಂಕಲ್ಪ ಕುರಿತು ಜಗತ್ತಿಗೆ ಸಂದೇಶ ನೀಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಪಾಸ್‌ಪೋರ್ಟ್ ಪಡೆಯಲು ರಾಹುಲ್ ಗಾಂಧಿಗೆ ಅವಕಾಶ

ನವದೆಹಲಿ, ಮೇ ೨೮: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಾಮಾನ್ಯ ಪಾಸ್‌ಪೋರ್ಟ್ ನೀಡಲು ಯಾವುದೇ ಆಕ್ಷೇಪಣೆ ಇಲ್ಲ ಎಂದು ಸ್ಥಳೀಯ ನ್ಯಾಯಾಲಯ ತಿಳಿಸಿದ್ದು, ಭಾನುವಾರ ಅವರಿಗೆ ಹೊಸ ಪಾಸ್‌ಪೋರ್ಟ್ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಬೆಳಿಗ್ಗೆ ವೇಳೆಗೆ ಪಾಸ್‌ಪೋರ್ಟ್ ನೀಡಲಾಗುವುದು ಎಂದು ಪಾಸ್‌ಪೋರ್ಟ್ ಕಚೇರಿ ರಾಹುಲ್ ಗಾಂಧಿಗೆ ಭರವಸೆ ನೀಡಿತ್ತು ಮತ್ತು ಅವರು ಅದನ್ನು ಮಧ್ಯಾಹ್ನ ಪಡೆದರು ಎಂದು ಅವರು ಹೇಳಿದರು. ‘ಮೋದಿ’ ಉಪನಾಮ ಕುರಿತು ನೀಡಿದ್ದ ಮಾನಹಾನಿ ಹೇಳಿಕೆ ಸಂಬAಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಶಿಕ್ಷೆಗೆ ಗುರಿಯಾಗಿದ್ದು, ಲೋಕಸಭೆ ಸದಸ್ಯತ್ವದಿಂದಲೂ ಅನರ್ಹಗೊಂಡಿದ್ದಾರೆ. ಇದರಿಂದಾಗಿ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಮತ್ತು ದಾಖಲೆಗಳನ್ನು ಕೋರ್ಟ್ಗೆ ಒಪ್ಪಿಸಿದ್ದಾರೆ. ಹೀಗಾಗಿ, ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ವಿಪಕ್ಷ ನಾಯಕನನ್ನು ನೇಮಿಸಿ-ಬಿಜೆಪಿಗೆ ಕಾಂಗ್ರೆಸ್ ಸವಾಲು

ಬೆಂಗಳೂರು, ಮೇ ೨೮: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಇದೇ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಪ್ರತಿಪಕ್ಷದ ನಾಯಕನ ಆಯ್ಕೆಗೆ ಕೇಸರಿ ಪಕ್ಷವು ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ ಎಂದು ತಿರುಗೇಟು ನೀಡಿದೆ. ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಕಾರವನ್ನು ಟೀಕಿಸುವ ಮೊದಲು ಮೊದಲು ವಿರೋಧ ಪಕ್ಷದ ನಾಯಕನನ್ನು ನೇಮಿಸುವಂತೆ ಬಿಜೆಪಿಗೆ ಸವಾಲೆಸೆದಿದೆ. ನಾವು ಗೆದ್ದೂ ಆಯ್ತು, ಸಿಎಂ, ಡಿಸಿಎಂ ಆಯ್ಕೆಯೂ ಆಯ್ತು, ಸಚಿವ ಸಂಪುಟವೂ ರೆಡಿ ಆಯ್ತು, ಸರ್ಕಾರದ ರಚನೆಯೂ ಆಯ್ತು. ಇದುವರೆಗೂ ನಮ್ಮ ಸರ್ಕಾರವನ್ನು ಎದುರಿಸಲು ಬಿಜೆಪಿಗೆ ಸಮರ್ಥ ವಿರೋಧ ಪಕ್ಷದ ನಾಯಕ ಸಿಗದಿರುವುದು ದುರಂತ!. ನೈತಿಕತೆ ಇರದಿದ್ದರೇನಂತೆ, ಕನಿಷ್ಟ ವಿರೋಧ ಪಕ್ಷದ ನಾಯಕನನ್ನು ಮುಂದಿಟ್ಟುಕೊAಡಾದರು ಬಿಜೆಪಿ ನಮ್ಮನ್ನು ವಿರೋಧಿಸಲಿ!' ಎಂದು ಟೀಕಿಸಿದೆ.

ರೌಡಿಶೀಟರ್ ಹತ್ಯೆ ಪ್ರಕರಣ-ಮೂವರ ಬಂಧನ

ಬೆAಗಳೂರು, ಮೇ ೨೮: ರೌಡಿಶೀಟರ್ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಕೆಪಿ ಅಗ್ರಹಾರ ಪೊಲೀಸರು ಮೂವರು ಆರೋಪಿಗಳನ್ನು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ. ಮೇ ೨೨ ರಂದು ಕೆಪಿ ಅಗ್ರಹಾರದ ಚೆಲುವಪ್ಪ ಗಾರ್ಡನ್‌ನಲ್ಲಿರುವ ದೇವಸ್ಥಾನದ ಬಳಿ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ವೇಳೆ ಸಾಗರ್ ಅಲಿಯಾಸ್ ಚಿನ್ನು ಎಂಬ ರೌಡಿಶೀಟರ್‌ನನ್ನು ಹತ್ಯೆ ಮಾಡಲಾಗಿತ್ತು. ಸಾಗರ್ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇದರಂತೆ ಕೆ. ನವೀನ್ (೨೮), ಹೇಮಂತ್ ಕುಮಾರ್ ಅಲಿಯಾಸ್ ರೋಸಿ (೨೮) ಮತ್ತು ಕುಮಾರ್ ಅಲಿಯಾಸ್ ಡಿಯೋ ಕುಮಾರ್ (೨೦)ನನ್ನು ಬಂಧನಕ್ಕೊಳಪಡಿಸಿದ್ದಾರೆ.

ಸಿದ್ದು ವಿರುದ್ಧ ಹರಿಪ್ರಸಾದ್ ಅಸಮಾಧಾನ

ಬೆಂಗಳೂರು, ಮೇ ೨೮: ‘ನನ್ನದು ಸ್ವಂತ ಮನೆ, ಬಾಡಿಗೆ ಮನೆಯಿಂದ ಬಂದವನಲ್ಲ’ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಸಚಿವ ಸ್ಥಾನ ಕುರಿತು ಸಿದ್ದರಾಮಯ್ಯ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಸ್ವಂತ ಮನೆಯಲ್ಲಿ ಇರುವವನು, ಬಾಡಿಗೆ ಮನೆ ತೆಗೆದುಕೊಂಡು ಬಂದವನಲ’್ಲ. ಈ ಮನೆ ಬಿಟ್ಟು ಹೋಗಲು ಅಥವಾ ಧ್ವಂಸ ಮಾಡಲು ಸಾಧ್ಯವಿಲ್ಲ. ರಾಜೀನಾಮೆ ಗೀಜಿನಾಮೆ ಪ್ರಶ್ನೆ ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಓಡಾಡುತ್ತಿದೆ. ಅದಕ್ಕೆ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ನನ್ನ ಸಾಮಾಜಿಕ ನ್ಯಾಯಕ್ಕೂ, ಅಹಿಂದಕ್ಕೂ ಬಹಳ ವ್ಯತ್ಯಾಸವಿದೆ. ನಾನು ಅಹಿಂದ ಎಂದು ಯೋಚನೆ ಮಾಡುವವನಲ್ಲ. ಸರ್ವ ಧರ್ಮ ಸಮನ್ವಯ ಸಮಭಾವ ಅದರಲ್ಲಿ ನಂಬಿಕೆ ಇಟ್ಟುಕೊಂಡವನು. ಯಾವುದೇ ಬೇಧ ಭಾವ ಇಲ್ಲ. ದೊಡ್ಡವರು-ಸಣ್ಣವರು ಇಲ್ಲ, ಎಲ್ಲರೂ ಸಹ ಒಂದೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

ಅಮೃತಸರ, ಮೇ ೨೮: ಪಂಜಾಬ್‌ನ ಅಮೃತಸರದಲ್ಲಿ ಭಾರತ-ಪಾಕಿಸ್ತಾನ ಅಂರ‍್ರಾಷ್ಟಿçÃಯ ಗಡಿ (ಐಬಿ) ಬಳಿ ಮತ್ತೊಂದು ಡ್ರೋನ್ ಅನ್ನು ಹೊಡೆದುರುಳಿಸಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಮಾದಕವಸ್ತುಗಳೊಂದಿಗೆ ಕಳ್ಳಸಾಗಣೆದಾರನನ್ನು ಶನಿವಾರ ಸಂಜೆ ಬಂಧಿಸಿದೆ ಎಂದು ಪಡೆ ಭಾನುವಾರ ತಿಳಿಸಿದೆ. ನಿನ್ನೆ ರಾತ್ರಿ ೯.೩೫ ರ ಸುಮಾರಿಗೆ ಡ್ರೋನ್‌ನ ಶಬ್ದ ಕೇಳಿದ ನಂತರ ಅಮೃತಸರದ ಖುರ್ದ್ ಜಿಲ್ಲೆಯ ಧನೋ ಗ್ರಾಮದ ಬಳಿ ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಸಿಬ್ಬಂದಿ ಡ್ರೋನ್ ಅನ್ನು ಹೊಡೆದುರುಳಿಸಿದರು ಮತ್ತು ಒಳನುಗ್ಗುವುದನ್ನು ತಡೆದರು. ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದ ನಂತರ ಧನೋಯ್ ಗ್ರಾಮದ ಕೃಷಿ ಭೂಮಿಯಲ್ಲಿ ಡ್ರೋನ್ ಅನ್ನು ಪಡೆಗಳು ವಶಪಡಿಸಿಕೊಂಡಿವೆ ಎಂದು ಭಾರತ-ಪಾಕಿಸ್ತಾನ ಗಡಿ ಕಾಯುವ ಕೇಂದ್ರ ಸಶಸ್ತç ಪೊಲೀಸ್ ಪಡೆ ತಿಳಿಸಿದೆ. ಈಮಧ್ಯೆ, ಧನೋಯ್ ಗ್ರಾಮದ ಬಳಿ ನಿಯೋಜಿಸಲಾದ ಪಡೆಗಳು ಗ್ರಾಮದ ಕಡೆಗೆ ಮೂವರು ವ್ಯಕ್ತಿಗಳು ಓಡಿ ಬರುತ್ತಿರುವುದನ್ನು ನೋಡಿ, ಅವರನ್ನು ತಡೆದಿದ್ದಾರೆ ಮತ್ತು ಮೂರು ಪ್ಯಾಕೆಟ್‌ಗಳ (ಅಂದಾಜು ೩.೪ ಕೆ.ಜಿ. ತೂಕ) ಶಂಕಿತ ಮಾದಕವಸ್ತುಗಳನ್ನು ಹೊಂದಿರುವ ಚೀಲದೊಂದಿಗೆ ಓರ್ವ ಶಂಕಿತನನ್ನು ಬಂಧಿಸಿದ್ದಾರೆ ಎಂದು ಬಿಎಸ್‌ಎಫ್ ತಿಳಿಸಿದೆ.

ಪ್ರಧಾನಿ ಸಂಸತ್ ಉದ್ಘಾಟಿಸಿದ್ದನ್ನು ಸ್ವಾಗತಿಸಿದ ರಾಷ್ಟçಪತಿ

ನವದೆಹಲಿ, ಮೇ ೨೮: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನ ಕಟ್ಟಡ ಉದ್ಘಾಟಿಸಿದ್ದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾಗತಿಸಿದ್ದಾರೆ. ಇದು ಇಡೀ ದೇಶಕ್ಕೆ ಹೆಮ್ಮೆಯ ಮತ್ತು ಅಪಾರ ಸಂತೋಷದ ವಿಷಯ ಎಂದು ರಾಷ್ಟçಪತಿಗಳು ಹೇಳಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಸಂದೇಶ ಕಳುಹಿಸಿದ ರಾಷ್ಟçಪತಿ ಮುರ್ಮು ಅವರು, ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯು ದೇಶದ ಇತಿಹಾಸದಲ್ಲಿ ಚಿನ್ನದ ಪದಗಳಲ್ಲಿ ಬರೆಯಲ್ಪಡುತ್ತದೆ ಎಂದು ಹೇಳಿದರು. ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ ರಾಷ್ಟçಪತಿಯವರನ್ನು ಆಹ್ವಾನಿಸಲಿಲ್ಲವೆಂದು ಕೊಂಕು ತೆಗೆದು ಹಲವಾರು ವಿಪಕ್ಷಗಳು ಉದ್ಘಾಟನಾ ಸಮಾರಂಭದಿAದ ದೂರ ಉಳಿದಿವೆ. ಆದರೆ, ಈಗ ಸ್ವತಃ ರಾಷ್ಟçಪತಿಯವರೇ ಉದ್ಘಾಟನಾ ಸಮಾರಂಭಕ್ಕೆ ತಮ್ಮ ಸಂದೇಶವನ್ನು ಕಳುಹಿಸಿ, ಪ್ರಧಾನಿಯವರು ಸಂಸತ್ ಭವನ ಉದ್ಘಾಟಿಸಿದ್ದು ಸ್ವಾಗತಾರ್ಹ ಎಂದು ಹೇಳಿರುವುದು ಗಮನಾರ್ಹ.