ವೀರಾಜಪೇಟೆ, ಮೇ ೨೭: ಪಟ್ಟಣದ ಕೌ ಬಾಯ್ಸ್ ತಂಡವು ಆಯೋಜಿಸಿದ್ದ ಲೆಜೆಂಡ್ಸ್ ಕಪ್-೨ ಕ್ರಿಕೆಟ್ ಲೀಗ್ನಲ್ಲಿ ಎಂ.ವೈ.ಸಿ. ತಂಡವು ರೈಸಿಂಗ್ ಸ್ಟರ್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಎಂ.ವೈ.ಸಿ. ತಂಡವು ೮ ರನ್ಗಳಿಂದ ರೈಸಿಂಗ್ ಸ್ಟರ್ಸ್ ತಂಡವನ್ನು ಮಣಿಸಿತು. ಎಂ.ವೈ.ಸಿ. ತಂಡದ ೬ ಓವರ್ಗಳಲ್ಲಿ ೫ ವಿಕೆಟ್ಗಳನ್ನು ಕಳೆದುಕೊಂಡು ೩೮ ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ರೈಸಿಂಗ್ ಸ್ಟರ್ಸ್ ತಂಡ ನಿಗದಿತ ೬ ಓವರ್ಗಳಲ್ಲಿ ೪ ವಿಕೆಟ್ ಕಳೆದುಕೊಂಡು ೩೧ ರನ್ ಗಳಿಸಲಷ್ಟೆ ಶಕ್ತವಾಯಿತು. ಎಂ.ವೈ.ಸಿ. ತಂಡದ ಪರ ಆತೀಫ್ ಮನ್ನಾ ೧೨ ಹಾಗೂ ಹೇಮಂತ್ ೧೦ ರನ್ ಗಳಿಸಿದರೆ, ರೈಸಿಂಗ್ ಸ್ಟರ್ಸ್ ತಂಡದ ಪರ ಲೋಕೇಶ್ ೧೪ ರನ್ ಗಳಿಸಿದರು. ಎಂ.ವೈ.ಸಿ ತಂಡದ ಪರ ಅತೀಫ್ ಮನ್ನಾ ೩ ಹಾಗೂ ವಿ.ಡಿ. ರವಿ ೧ ಮತ್ತು ರೈಸಿಂಗ್ ಸ್ಟರ್ಸ್ ತಂಡದ ಪರ ಜಯಂತ್ ರೈ ಮತ್ತು ಆನಂದ್ ತಲಾ ೨ ವಿಕೆಟ್ ಗಳಿಸಿದರು.
ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಯಿತು. ೩ನೇ ಸ್ಥಾನ ಪಡೆದ ಕಲ್ಲು ಸ್ಟರ್ಟ್ ಮತ್ತು ೪ನೇ ಸ್ಥಾನ ಪಡೆದ ಷಾ ಕ್ರಿಕೆರ್ಸ್ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೆ ಸ್ಮರಣಿಕೆಗಳನ್ನು ನೀಡಲಾಯಿತು.
ಎಂ.ವೈ.ಸಿ. ತಂಡದ ಹೇಮಂತ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು, ಸುದೇಶ್ ಉತ್ತಮ ಬ್ಯಾಟ್ಸ್ಮನ್, ಆತೀಫ್ ಮನ್ನಾ ಉತ್ತಮ ಬೌಲರ್ ಹಾಗೂ ಅಂತಿಮ ಪಂದ್ಯ ಪುರುಷೋತ್ತಮ, ಶಶಿ ಕುಮಾರ್ ಉತ್ತಮ ಕ್ಯಾಚ್, ತ್ರಿ ಸ್ಟಾರ್ ಆರ್.ಎಸ್.ಎಲ್ ತಂಡದ ಕಿರಣ್ ಉತ್ತಮ ವಿಕೆಟ್ ಕೀಪರ್, ಕಲ್ಲು ಸ್ಟರ್ಸ್ ತಂಡ ಷಂಶುದ್ದೀನ್ ಉತ್ತಮ ನಾಯಕ ಪ್ರಶಸ್ತಿಯನ್ನು ಪಡೆದುಕೊಂಡರು. ಇತ್ತೀಚೆಗೆ ಡಾಕ್ಟರೇಟ್ ಪದವಿಯನ್ನು ಪಡೆದ ಹೇಮಂತ್ ಹಾಗೂ ಸಮಾಜ ಸೇವಕ ನಾಸರ್ ಅವರನ್ನು ಆಯೋಜಕರು ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿದರು. ಸಮಾರೋಪ ಸಮಾರಂಭದಲ್ಲಿ ಅಂರ್ರಾಷ್ಟಿçÃಯ ಮಾಜಿ ರಗ್ಬಿ ಆಟಗಾರ ಮಾದಂಡ ತಮ್ಮಯ್ಯ, ಹಿರಿಯ ಆಟಗಾರ ಅಲ್ತಾಫ್, ರಾಜೇಶ್, ಕಿರಣ್, ಚಾಮಿ ಗ್ರೂಪ್ಸ್ನ ಸುರೇಶ್, ಸಮಾಜ ಸೇವಕ ನಾಸರ್ ಮತ್ತಿತರರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.