ಮಡಿಕೇರಿ, ಮೇ ೨೭: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಯಡಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಆಹಾರ ಪರವಾನಗಿ (ಎಫ್ಎಸ್ ಎಸ್ಎಐ ಲೈಸೆನ್ಸ್) ಪಡೆದಿರುವ ತಯಾರಕರು/ ರೀ-ಪ್ಯಾಕರ್/ ರೀ-ಲೇಬರ್ (ಮ್ಯಾನ್ಯುಪ್ಯಾಕ್ಚರರ್/ ರೀ ಪ್ಯಾಕರ್/ ರೀ-ಲೇಬರ್) ಪ್ರತಿ ವರ್ಷ ತಮ್ಮ ವಾರ್ಷಿಕ ವಹಿವಾಟಿನ (ಆನ್ಯುವಲ್ ರಿಟರ್ನ್) ವಿವರವನ್ನು ಆಯಾಯ ಆರ್ಥಿಕ ವರ್ಷದ ಮೇ-೩೧ ರ ಕಾಲಮಿತಿಯೊಳಗೆ hಣಣಠಿs:\\ ಜಿosಛಿos.ಜಿssಚಿi.gov.iಟಿ ವೆಬ್ಸೈಟ್ ನಲ್ಲಿ ತಪ್ಪದೇ ಸಲ್ಲಿಸುವುದು. ತಪ್ಪಿದ್ದಲ್ಲಿ ವಾರ್ಷಿಕವಾಗಿ ಕಾಯ್ದೆಯಡಿ ನಿಗದಿ ಯಾಗುವ ದಂಡವನ್ನು ಕಡ್ಡಾಯವಾಗಿ ಪಾವತಿಸಿದ ನಂತರವೇ ಪರವಾನಗಿ ನವೀಕರಿಸಲು (ಲೈಸೆನ್ಸ್ ರಿನೀವಲ್) ಅರ್ಜಿ ಸಲ್ಲಿಸಲು ಅವಕಾಶವಿದೆ.
ತಯಾರಕರು/ ರೀ-ಪ್ಯಾಕರ್/ ರೀ-ಲೇಬರ್ದಾರರು ತಮ್ಮ ಆಹಾರ ಪದಾರ್ಥಗಳ ವಿಶ್ಲೇಷಣಾ ವರದಿಯನ್ನು ಪ್ರತಿ ೬ ತಿಂಗಳಿಗೊಮ್ಮೆ ಎನ್ಎಬಿಎಲ್ ಅಕ್ರಿಡಿಯೇಟೆಡ್/ ಎಫ್ಎಸ್ಎಸ್ಎಐ ನೋಂದಾಯಿತ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ ವರದಿಯನ್ನು ಅಧಿಕೃತ ಅಂತರ್ಜಾಲ ತಾಣದಲ್ಲಿ ತಮ್ಮ ತಮ್ಮ ಲಾಗಿನ್ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ. ಈ ರೀತಿಯಲ್ಲಿ ವಾರ್ಷಿಕ ವಹಿವಾಟಿನ (ಆನ್ಯುವಲ್ ರಿಟರ್ನ್) ವಿವರವನ್ನು ಹಾಗೂ ಪ್ರಯೋಗಾಲಯ ದಲ್ಲಿ ವಿಶ್ಲೇಷಿಸಿ ವರದಿಯನ್ನು ಸಲ್ಲಿಸಲು ವಿಫಲವಾದಲ್ಲಿ ಮುಂದಿನ ಆಗು ಹೋಗುಗಳಿಗೆ ಸಂಬAಧಿಸಿದ ತಯಾರಕರು/ ರೀ-ಪ್ಯಾಕರ್/ ರೀ-ಲೇಬರ್ ಆಹಾರ ಉದ್ದಿಮೆದಾರರು ಜವಾಬ್ದಾರ ರಾಗುತ್ತಾರೆ. ಆಹಾರ ನೋಂದಣಿ/ ಪರವಾನಗಿ ಪಡೆಯದೇ ವ್ಯಾಪಾರ ವಹಿವಾಟು ನಡೆಸುವವರು ತಕ್ಷಣದಲ್ಲೇ ಇಲಾಖೆಯಿಂದ ಆಹಾರ ನೋಂದಣಿ/ ಪರವಾನಗಿಯನ್ನು ಪಡೆದುಕೊಳ್ಳುವುದು, ತಪ್ಪಿದಲ್ಲಿ ಕಾಯ್ದೆಯಡಿ ನೋಟೀಸು ಮತ್ತು ದಂಡವನ್ನು ವಿಧಿಸಲಾಗುವುದು.
ಹೆಚ್ಚಿನ ಮಾಹಿತಿ ಅವಶ್ಯವಾದಲ್ಲಿ ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಜಿಲ್ಲಾ ಸರ್ವೇಕ್ಷಣಾ ಘಟಕದ ಆವರಣ, ಓಂಕಾರೇಶ್ವರ ದೇವಸ್ಥಾನದ ರಸ್ತೆ, ಟೋಲ್ಗೇಟ್ ಹತ್ತಿರ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ಭೇಟಿ ನೀಟಿ ಪಡೆದುಕೊಳ್ಳಬಹುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿ ಡಾ. ಇ. ಅನಿಲ್ ಧವನ್ ತಿಳಿಸಿದ್ದಾರೆ.