ಪೊನ್ನಂಪೇಟೆ, ಮೇ ೨೬: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾ.ಪಂ.ವ್ಯಾಪ್ತಿಯ ಕಳತೋಡು ರಸ್ತೆಯಲ್ಲಿರುವ ಹುದಿಕೇರಿಗೆ ನೀರು ಸರಬರಾಜು ಮಾಡುವ ಮೋಟಾರ್ ಕೆಟ್ಟಿದ್ದು, ಅದಕ್ಕೆ ಹೊಂದಿಕೊAಡAತೆ ಭಾಗಿ ನಿಂತಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ಬೀಳುವ ಹಂತದಲ್ಲಿದೆ. ಇದರಿಂದ ಮೋಟಾರ್ ದುರಸ್ತಿ ಕಾರ್ಯವೂ ಕಷ್ಟವಾಧ್ಯ ವಾಗಿದೆ.

ಈ ಬಗ್ಗೆ ಚೆಸ್ಕಾಂಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ನಿವಾಸಿಗಳು ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಬೀಳುವ ಹಂತದಲ್ಲಿರುವ ಟ್ರಾನ್ಸ್ಫಾರ್ಮರ್‌ನಿಂದ ವಿದ್ಯುತ್ ಅಪಘಾತ, ಜೀವಹಾನಿ ಸಂಭವಿಸುವ ಮುನ್ನ ಸರಿ ಪಡಿಸಿ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.