ಮಡಿಕೇರಿ, ಮೇ ೨೬: ಮೂರ್ನಾಡು ಸಮೀಪದ ಕೋಡಂಬೂರು ಶ್ರೀ ಭದ್ರಕಾಳಿ ಮತ್ತು ಧರ್ಮಶಾಸ್ತವು ಅಯ್ಯಪ್ಪ ದೇವಾಲಯದ ವಾರ್ಷಿಕೋತ್ಸವ ಆರಂಭಗೊAಡಿದ್ದು, ತಾ. ೨೮ ರಂದು ಮುಕ್ತಾಯಗೊಳ್ಳಲಿದೆ.
ತಾ. ೨೪ ರಂದು ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಉತ್ಸವ ಆರಂಭಗೊAಡಿತು. ತಾ. ೨೭ ರಂದು (ಇಂದು) ಬೆಳಿಗ್ಗೆ ೭ ಗಂಟೆಗೆ ಭೈರವ ತೆರೆ, ೮.೩೦ಕ್ಕೆ ಕರವಳ ಭಗವತಿ ತೆರೆ, ೯.೩೦ಕ್ಕೆ ನುಚ್ಚಿಟೆ ತೆರೆ, ೧೦.೩೦ಕ್ಕೆ ವಿಷ್ಣುಮೂರ್ತಿ ತೆರೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ಇರಲಿದೆ. ತಾ. ೨೮ ರ ಬೆಳಿಗ್ಗೆ ೯.೩೦ ಗಂಟೆಗೆ ಶುದ್ಧ ಕಳಸ ಪೂಜೆ ಮೂಲಕ ಉತ್ಸವ ತೆರೆ ಕಾಣಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.