ಚೆಯ್ಯಂಡಾಣೆ, ಮೇ ೨೬: ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ನಾಪೋಕ್ಲು ಸಮೀಪದ ಚೆರಿಯಪರಂಬು ಶಾದಿಮಹಲ್ ಸಭಾಂಗಣದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿಯವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.
ಕೊಡಗು ಸುನ್ನೀ ವೆಲ್ಫೇರ್ ಯುಎಇ ಸಮಿತಿಯು ಕಳೆದ ಮೂರು ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಈ ಬಾರಿ ೪ ಜೋಡಿಗಳಿಗೆ ನಿಖಾಹ್ ಕರ್ಮಕ್ಕೆ ಮುಂದಾಳತ್ವವನ್ನು ಸಯ್ಯಿದ್ ಮುಸ್ತಫಾ ಪೂಕೊಯ ತಂಘಳ್, ಕೊಡಗು ಜಿಲ್ಲಾ ನಾಇಬ್ ಖಾಝಿ ಶಾದುಲಿ ಫೈಝಿ, ಕೂರ್ಗ್ ಜಂಇಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ,ಕುಂಜಿಲ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆ ಹಾಗೂ ಉದ್ಘಾಟನೆಯನ್ನು ಜಿಲ್ಲೆಯ ಖಾಝಿಗಳಾದ ಎಂ.ಎA. ಅಬ್ದುಲ್ಲಾ ಫೈಝಿ ಎಡಪಾಲ ಹಾಗೂ ಶಾದುಲಿ ಫೈಝಿ ಉಸ್ತಾದ್ ನೆರವೇರಿಸಿದರು. ಈ ಬಾರಿ ಪಡಿಯಾಣಿ, ಎಮ್ಮೆಮಾಡು, ನಾಪೋಕ್ಲು , ದೇವಣಗೆರೆಯ ಬಡ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಲಾಗಿದ್ದು ವಧು ವರರಿಗೆ ಬೇಕಾದ ಮಾಂಗಲ್ಯ ಚಿನ್ನಾಭರಣ, ವಸ್ತç, ವಾಚ್‌ಗಳನ್ನು ಉದಾರವಾಗಿ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಶಾಫಿ ಸಅದಿ ಸೋಮವಾರಪೇಟೆ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಕಾರ್ಯ ವೈಖರಿಗಳನ್ನು ಕೊಂಡಾಡಿದರು. ಕೊಡಗನ್ನು ಕೇಂದ್ರೀಕರಿಸಿ ಅರಬ್ ಸಂಸ್ಥಾನದಲ್ಲಿ ಕಾರ್ಯಾಚರಿಸುವ ಕೊಡಗಿನ ಏಕೈಕ ಸಂಘಟನೆಯಾಗಿದ್ದು ಕೊಡಗಿನ ಬಡವರ ಪಾಲಿಗೆ ಸಹಾಯ ಸಹಕಾರ ನೀಡಿ ಯಶಸ್ಸನ್ನು ಗಳಿಸುತ್ತಿರುವ ಸಂಘಟನೆ ಇದಾಗಿತ್ತು. ಈ ಸಂಘಟನೆ ಇವತ್ತು ೪ ಜೋಡಿಗಳಿಗೆ ಕಂಕಣ ಭಾಗ್ಯವನ್ನು ನೀಡಿದ್ದು ಇನ್ನು ಕೂಡ ಹಲವಾರು ಕಾರ್ಯಕ್ರಮಗಳು ಇದರ ಮುಖಾಂತರ ನಡೆಯಲಿ, ಈ ಸಂಘಟನೆಯಲ್ಲಿ ಯಾರು ಕೂಡ ಶ್ರೀಮಂತರಿಲ್ಲ. ತಮ್ಮ ದುಡಿಮೆಯ ಅಲ್ಪಮೊತ್ತ ಕೊಡಗಿನ ಬಡವರ ಪಾಲಿಗೆ ಮೀಸಲಿಟ್ಟಿದ್ದಾರೆ. ಇಂತಹ ಸಂಘಟನೆಯನ್ನು ಪ್ರೋತ್ಸಾಹಿಸಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ ಕರ್ನಾಟಕ ರಾಜ್ಯದ ಮುಸ್ಲಿಮರ ಅತೀ ದೊಡ್ಡ ಸಂಸ್ಥೆ ವಕ್ಫ್ ಮಂಡಳಿ ಇದರ ಅಭಿವೃದ್ಧಿಯಾದರೆ ನಮ್ಮ ಮುಸ್ಲಿಂ ಸಮುದಾಯ ಅಭಿವೃದ್ಧಿಯಾಗುತ್ತೆ ಅ ರೀತಿಯಲ್ಲಿ ವಕ್ಫ್ ಜಾಗಗಳನ್ನು, ಸಂಸ್ಥೆಗಳನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ದು ಮುಸ್ಲಿಂ ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕಾರ್ಯದಲ್ಲಿ ನಾವೆಲ್ಲ ತೊಡಗಿಸಿ ಕೊಂಡಿದ್ದೇವೆ ಸಾಮಾಜಿಕವಾಗಿ, ರಾಜ್ಯಕೀಯವಾಗಿ, ಧಾರ್ಮಿಕ, ಶೈಕ್ಷಣಿಕವಾಗಿ ಮುಂದೆ ಬರಲು ಶ್ರಮಿಸುವಂತೆ ಕರೆ ನೀಡಿ ಕೊಡಗು ಸುನ್ನೀ ವೆಲ್ಫೇರ್ ನಡೆಸುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ ಸುಂಟಿಕೊಪ್ಪ ಮಾತನಾಡಿ ವೆಲ್ಫೇರ್ ಸಮಿತಿ ತೊಂದರೆಗೆ ಸಿಲುಕಿದವರ ಬೆನ್ನೆಲುಬಾಗಿ ನಿಂತು ಕೊಡಗಿನ ಬಡವರ ಹಾಗೂ ಕೊರೊನಾ ಸಂದರ್ಭದಲ್ಲಿ ಸಂಘಟನೆ ಮಾಡಿದ ಆಂಬುಲೆನ್ಸ್ ಸೇವೆ ಶ್ಲಾಘನೀಯ ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಖಾಸಿಂ ಮಾತನಾಡಿ ಸಮುದಾಯವನ್ನು ಯಾರು ಪ್ರೀತಿಸುತ್ತಾರೋ ಅವರನ್ನ ದೇವರು ಪ್ರೀತಿಸುತ್ತಾರೆ, ತನ್ನ ವೈವಾಹಿಕ ಜೀವನವನ್ನು ಕನಸು ಕಂಡು ವರದಕ್ಷಿಣೆ ಪಿಡುಗಿನಿಂದ ತೊಂದರೆ ಅನುಭವಿಸುವ ವೈವಾಹಿಕ ಜೀವನಕ್ಕೆ ಕಾಲಿಡಲು ಸಾಧ್ಯವಾಗದೆ ಇರುವ ಎಷ್ಟೋ ಹೆಣ್ಣು ಮಕ್ಕಳು ಇದ್ದಾರೆ ನಮ್ಮ ಸಮುದಾಯದಲ್ಲಿ ಶ್ರೀಮಂತರ ಹೆಣ್ಣು ಮಕ್ಕಳು ವಿವಾಹವಾಗುವ ಸಂದರ್ಭ ಎಷ್ಟೋ ಹೆಣ್ಣು ಮಕ್ಕಳು ಮನೆಯಲ್ಲಿ ಕುಳಿತು ಬೇಸರಪಡುವವರಿದ್ದಾರೆ. ಅವರಿಗೆಲ್ಲಾ ಕೊಡಗು ಸುನ್ನೀ ವೆಲ್ಫೇರ್ ಸಮಿತಿಯು ಮಾದರಿಯಾಗಿದ್ದು ಶ್ಲಾಘನೀಯ ಎಂದರು.
ಈ ಸಂದರ್ಭ ಕೂರ್ಗ್ ಜಂಇಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ, ವಿರಾಜಪೇಟೆ, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ರಹಮಾನ್, ಎಸ್ ವೈ ಎಸ್ ರಾಜ್ಯಾಧ್ಯಕ್ಷ ಹಫೀಲ್ ಸಅದಿ, ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ಮುಹಮ್ಮದ್ ಹಾಜಿ, ನಾಪೋಕ್ಲು ಜಮಾಅತ್ ಅಧ್ಯಕ್ಷ ಸಲೀಂ ಹ್ಯಾರಿಸ್, ನಿಯಾಜ್ ಸುಂಟಿಕೊಪ್ಪ, ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಹಂಝ ಕೊಟ್ಟಮುಡಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮನ್ಸೂರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಸ್‌ಡಬ್ಲೂö್ಯಎ ಇದರ ಜಿಸಿಸಿ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ ವಹಿಸಿ ಮಾತನಾಡಿ ವೆಲ್ಫೇರ್ ಸಮಿತಿ ಹಲವಾರು ಕಾರ್ಯಕ್ರಮಗಳ್ಳನ್ನು ಆಯೋಜಿಸಿದ್ದು ಸಾಮೂಹಿಕ ವಿವಾಹ ೪ನೇ ವರ್ಷ, ಮನೆ ನಿರ್ಮಾಣ, ಕಿಟ್ ವಿತರಣೆ, ಬಾವಿ ನಿರ್ಮಾಣ, ಬಡವರಿಗೆ ಸಹಾಯ, ವಿದ್ಯಾಭ್ಯಾಸಕ್ಕೆ ಸಹಾಯ ಈಗೆ ಹಲವಾರು ಸಾಂತ್ವನ ಮೂಲಕ ಕೊಡಗು ಸುನ್ನೀ ವೆಲ್ಫೇರ್ ಕಾರ್ಯಾಚರಿಸುತ್ತಿದ್ದು. ಸಂಘಟನೆಯ ಸಂಸ್ಥಾಪನೆಯ ವಿದ್ಯಾಭ್ಯಾಸಕ್ಕೆ ಸಹಕರಿಸಿದ ಓರ್ವ ವಿದ್ಯಾರ್ಥಿಯು ಎಲ್‌ಎಲ್‌ಬಿ ಪೂರ್ಣಗೊಳಿಸಿ ಹೊರಬಂದಿರುವ ವಿಷಯವನ್ನು ಹಂಚಿಕೊAಡರು.
ಸ್ವಾಗತವನ್ನು ಯುಎಇ ಅಧ್ಯಕ್ಷ ಉಸ್ಮಾನ್ ಹಾಜಿ ನಾಪೋಕ್ಲು ಹಾಗೂ ವಂದನೆಯನ್ನು ಪ್ರಧಾನ ಕಾರ್ಯದರ್ಶಿ ಸಲೀಂ ಗುಂಡಿಕೆರೆ ನಿರೂಪಣೆಯನ್ನು ನಾಪೋಕ್ಲು ಜಮಾಅತ್ ಕಾರ್ಯದರ್ಶಿ ಅಹ್ಮದ್ ಸಿ.ಎಚ್. ನೆರವೇರಿಸಿದರು. ವೇದಿಕೆಯಲ್ಲಿ ಸ್ಥಳೀಯ ನಾಪೋಕ್ಲು ಮುದರ್ರಿಸ್ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ, ನಾಪೋಕ್ಲು ಓಎಸ್ ಎಫ್ ಅಧ್ಯಕ್ಷ ಶುಹೈಬ್, ಹ್ಯಾರಿಸ್ ಕುಂಜಿಲ, ಅರಫಾತ್ ನಾಪೋಕ್ಲು, ಅಹ್ಮದ್ ಚಾಮಿಯಾಲ್, ಅಬ್ದುಲ್ ಖಾದರ್ ತಂಘಳ್ ಅಯ್ಯಂಗೇರಿ, ಮಮ್ಮದ್ ಹಾಜಿ ಕೊಂಡAಗೇರಿ, ಮ್ಯೊದೀನ್ ಕುಟ್ಟಿ ಹಾಜಿ ಕೊಳಕ್ಕೇರಿ, ಆಸ್ಕರ್ ಮೂರ್ನಾಡು, ಅಹ್ಮದ್ ಮದನಿ,ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅಬುಬಕ್ಕರ್ ಸಖಾಫಿ , ಹ್ಯಾರಿಸ್ ಕೊಟ್ಟಮುಡಿ, ಗ್ರಾ.ಪಂ. ಸದಸ್ಯ ಕೆ.ಎಂ.ಮೊಯ್ದು, ಅಬ್ದು ಹಾಜಿ ನಾಪೋಕ್ಲು, ಎಸ್‌ಎಸ್‌ಎಫ್, ಎಸ್‌ವೈಎಸ್ ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯರು, ವಧು ವರರ ಕುಟುಂಬಸ್ಥರು ಉಪಸ್ಥಿತರಿದ್ದರು. -ಅಶ್ರಫ್ ಚೆಯ್ಯಂಡಾಣೆ