ಶನಿವಾರಸಂತೆ, ಮೇ ೨೬: ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳ ಸಂಸ್ಕೃತಿಯನ್ನು ಮೂಲವಾಗಿರಿಸಿಕೊಂಡು ಧರ್ಮದ ತಳಹದಿಯಲ್ಲಿ ಬದುಕು ಕಟ್ಟಿಕೊಂಡವರು ನಾವು ಎಂದು ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠಧ್ಯಕ್ಷ ಸದಾಶಿವ ಸ್ವಾಮೀಜಿ ಹೇಳಿದರು.

ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಗ್ರಾಮದೇವತೆ ಶ್ರೀ ಕನ್ನಂಬಾಡಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ದೇವಾಲಯ ಸಮಿತಿ ವತಿಯಿಂದ ಕನ್ನಂಬಾಡಿ ಅಮ್ಮನವರ ನೂತನ ವಿಗ್ರಹ ಪುನರ್ ಪ್ರತಿಷ್ಠಾಪನೆ, ಉತ್ಸವ ಮೆರವಣಿಗೆ, ಕೆಂಡೋತ್ಸವ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ನೀರುಗುಂದ ಗ್ರಾಮದಲ್ಲಿ ಗ್ರಾಮಸ್ಥರು ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಪೂಜಾ ಚಟುವಟಿಕೆಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುತ್ತಿದ್ದಾರೆ. ಗ್ರಾಮದ ಪ್ರಮುಖ ದೇವತೆಗಳಾದ ಶ್ರೀಮಲ್ಲೇಶ್ವರ, ಶ್ರೀವೀರಭದ್ರೇಶ್ವರ, ಶ್ರೀಕನ್ನಂಬಾಡಿ ಅಮ್ಮ. ದೇವಾಲಯ ಗಳನ್ನು ನವೀಕರಣಗೊಳಿಸುವ ಮೂಲಕ ಒಗ್ಗೂಡುವಿಕೆಯನ್ನು ಮಾಡುತ್ತಿದ್ದಾರೆ ಎಂದರು.

ಹೇಮಾವತಿ ನದಿಯಲ್ಲಿ ದೇವರ ವಿಗ್ರಹಕ್ಕೆ ಗಂಗಾಸ್ನಾನ, ಜಲಾಧಿವಾಸ, ಕ್ಷೀರಾಧಿವಾಸದ ನಂತರ ೩ ಕಿ.ಮೀ. ದೂರದಿಂದ ಕಲಶ ಹೊತ್ತ ಸುಮಂಗಲೆಯರು ಮಂಗಳವಾದ್ಯ ದೊಂದಿಗೆ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಸಾಗಿಬಂದು ಕೆಂಡೋತ್ಸವದೊAದಿಗೆ ಉತ್ಸವ ಸಂಪನ್ನಗೊAಡಿತು.

ಪ್ರಧಾನ ಅರ್ಚಕ ಮಣಿಕಂಠ ಹಾಗೂ ಅರ್ಚಕ ಚಂದ್ರಯ್ಯ ಅವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿಗಳು ನೆರವೇರಿದವು. ದೇವಾಲಯ ಸಮಿತಿ ಪದಾಧಿಕಾರಿಗಳು, ಗ್ರಾಮ ಮುಖಂಡರು ಹಾಜರಿದ್ದರು. ನೀರುಗುಂದ ಗ್ರಾಮ ಹಾಗೂ ಸುತ್ತಮುತ್ತಲಿನ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.