ಸಂಸತ್ತು ಭವನ ಉದ್ಘಾಟನೆ ಸ್ಮರಣಾರ್ಥ ರೂ. ೭೫ ನಾಣ್ಯ ಬಿಡುಗಡೆ

ನವದೆಹಲಿ, ಮೇ ೨೬: ತಾ. ೨೮ ರಂದು ಹೊಸ ಸಂಸತ್ ಕಟ್ಟಡದ ಉದ್ಘಾಟನೆಯ ಸ್ಮರಣಾರ್ಥವಾಗಿ ಹಣಕಾಸು ಸಚಿವಾಲಯವು ವಿಶೇಷವಾಗಿ ೭೫ ರೂಪಾಯಿ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಿದೆ. ಸ್ಮರಣಾರ್ಥ ನಾಣ್ಯವು ದೇಶ ೭೫ ವರ್ಷಗಳ ಸ್ವಾತಂತ್ರö್ಯವನ್ನು ಆಚರಿಸುತ್ತಿರುವುದಕ್ಕೆ ಗೌರವ ಸೂಚಕವಾಗಿದೆ. ನಾಣ್ಯದ ಒಂದು ಬದಿಯು ಅಶೋಕ ಸ್ತಂಭದ ಸಿಂಹದ ರಾಜಧಾನಿಯನ್ನು ಹೊಂದಿರುತ್ತದೆ, ಅದರ ಕೆಳಗೆ "ಸತ್ಯಮೇವ ಜಯತೆ" ಎಂದು ಬರೆಯಲಾಗಿದೆ. ಎಡಭಾಗದಲ್ಲಿ "ಭಾರತ್" ಎಂಬ ಪದವನ್ನು ದೇವನಾಗರಿ ಲಿಪಿಯಲ್ಲಿ ಮತ್ತು ಬಲಭಾಗದಲ್ಲಿ "ಇಂಡಿಯಾ" ಎಂಬ ಪದವನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ. ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ೩೫ ಗ್ರಾಂ ನಾಣ್ಯವು ೪೪ ಎಂಎA ಅಳತೆಯ ವೃತ್ತಾಕಾರದಲ್ಲಿರುತ್ತದೆ. ಇದು ರೂಪಾಯಿಯ ಚಿಹ್ನೆ ಮತ್ತು ಅಂರ‍್ರಾಷ್ಟಿçÃಯ ಅಂಕಿಗಳಲ್ಲಿ ಬರೆಯಲಾದ ೭೫ ನ್ನು ಸಹ ಒಳಗೊಂಡಿರುತ್ತದೆ. ನಾಣ್ಯದ ಹಿಂಭಾಗದಲ್ಲಿ ಸಂಸತ್ತಿನ ಸಂಕೀರ್ಣದ ಚಿತ್ರವಿರುತ್ತದೆ. ನಾಣ್ಯದ ಮೇಲಿನ ಪರಿಧಿಯಲ್ಲಿ ಸಂಸದ್ ಸಂಕುಲ್ ಎಂದು ಬರೆಯಲಾಗಿದ್ದರೆ ಕೆಳಗಿನ ಪರಿಧಿಯಲ್ಲಿ ಸಂಸತ್ತಿನ ಸಂಕೀರ್ಣ ಎಂದು ಬರೆಯಲಾಗುತ್ತದೆ. ಸಂಸದ್ ಸಂಕುಲದ ಕೆಳಗೆ, ‘೨೦೨೩' ವರ್ಷವನ್ನು ಅಂರ‍್ರಾಷ್ಟಿçÃಯ ಅಂಕಿಗಳಲ್ಲಿ ಕೆತ್ತಲಾಗುತ್ತದೆ.

ಮೋದಿ ಸರ್ಕಾರಕ್ಕೆ ೯ ವರ್ಷಗಳು : ೯ ಪ್ರಶ್ನೆ ಕೇಳಿದ ಕಾಂಗ್ರೆಸ್

ನವದೆಹಲಿ, ಮೇ ೨೬: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ೯ ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ರೈತರ ಆದಾಯದಂತಹ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್, ಬಿಜೆಪಿ ಅಧಿಕಾರವಧಿಯಲ್ಲಿ ದ್ರೋಹ ಬಗೆದಿದ್ದು, ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ. ಸರ್ಕಾರ ಈ ದಿನವನ್ನು ಮಾಫಿ ದಿವಸ್ ಎಂದು ಗುರುತಿಸಬೇಕೆಂದು ವಿಪಕ್ಷ ಹೇಳಿದೆ. ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ, ಸಂವಹನದ ಉಸ್ತುವಾರಿ ಜೈರಾಮ್ ರಮೇಶ್, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಎತ್ತಿದ್ದ ವಿಮರ್ಶಾತ್ಮಕ ವಿಷಯಗಳನ್ನು ಈ ೯ ಪ್ರಶ್ನೆಗಳು ಆಧರಿಸಿವೆ ಎಂದರು. ಪವನ್ ಖೇರಾ ಮತ್ತು ಸುಪ್ರಿಯಾ ಶ್ರಿನಾಟೆ ರಮೇಶ್ ಅವರೊಂದಿಗೆ 'ನೌ ಸಾಲ್, ನೌ ಸವಾಲ್' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಜೈರಾಮ್ ರಮೇಶ್, ಒಂಬತ್ತು ವರ್ಷಗಳ ಹಿಂದೆ ಇದೇ ದಿನ ಮೋದಿ ಪ್ರಧಾನಿಯಾಗಿದ್ದರು ಮತ್ತು ಆದ್ದರಿಂದ ಪಕ್ಷವು ಒಂಬತ್ತು ಪ್ರಶ್ನೆಗಳನ್ನು ಕೇಳಲು ಬಯಸುತ್ತದೆ. ಈ ಪ್ರಶ್ನೆಗಳ ಬಗ್ಗೆ ಪ್ರಧಾನಿ ಮೌನ ಮುರಿಯಬೇಕೆಂದು ಬಯಸುತ್ತೇವೆ ಎಂದು ರಮೇಶ್ ಹೇಳಿದರು. ಭಾರತದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಏಕೆ ಗಗನಕ್ಕೇರುತ್ತಿದೆ? ಶ್ರೀಮಂತರು ಏಕೆ ಶ್ರೀಮಂತರು ಮತ್ತು ಬಡವರು ಬಡವರಾಗಿದ್ದಾರೆ? ಆರ್ಥಿಕ ಅಸಮಾನತೆಗಳಿದ್ದರೂ ಸಾರ್ವಜನಿಕ ಆಸ್ತಿಯನ್ನು ಪ್ರಧಾನಿ ಮೋದಿಯವರ ಸ್ನೇಹಿತರಿಗೆ ಏಕೆ ಮಾರಾಟ ಮಾಡು ತ್ತಿದ್ದಾರೆ? ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವಾಗ ರೈತರೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಏಕೆ ಗೌರವಿಸಿಲ್ಲ ಮತ್ತು ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನುಬದ್ಧವಾಗಿ ಏಕೆ ಖಾತರಿಪಡಿಸಿಲ್ಲ ಎಂದು ರಮೇಶ್ ಪ್ರಶ್ನಿಸಿದರು. ಕಳೆದ ಒಂಬತ್ತು ವರ್ಷಗಳಿಂದ ರೈತರ ಆದಾಯ ಏಕೆ ದ್ವಿಗುಣಗೊಂಡಿಲ್ಲ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದರು.

ಪ್ರಕರಣಗಳ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಡಿ.ಕೆ.ಶಿ.

ಬೆಂಗಳೂರು, ಮೇ ೨೬: ಮೇಕೆದಾಟು ಪಾದಯಾತ್ರೆಯ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಮತ್ತು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿದ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಗಳನ್ನು ರದ್ದುಗೊಳಿಸುವಂತೆ ಕೋರಿ ಉಪಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ಅವರು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬAಧ ದಾಖಲಾಗಿರುವ ಎಂಟು ಪ್ರಕರಣಗಳಿಗೆ ಸಂಬAಧಿಸಿದ ಪ್ರತ್ಯೇಕ ಅರ್ಜಿಗಳನ್ನು ಶುಕ್ರವಾರ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ವಿಚಾರಣೆಯನ್ನು ಒಂದು ವಾರಕ್ಕೆ ಮುಂದೂಡಿತು. ಪ್ರಕರಣಗಳ ಆಕ್ಷೇಪಣೆಗಳನ್ನು ಸರಿಪಡಿಸಲು ಕಾಲಾವಕಾಶ ನೀಡುವಂತೆ ಅರ್ಜಿದಾರ ಡಿ.ಕೆ. ಶಿವಕುಮಾರ್ ಅವರ ಪರ ವಕೀಲರು ನ್ಯಾಯಾಲಯದ ಮುಂದೆ ಮನವಿ ಮಾಡಿದರು.

ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು, ಮೇ ೨೬: ಆರ್‌ಎಸ್‌ಎಸ್ ನಿಷೇಧವಲ್ಲ, ಸಂಘದ ಒಂದು ಶಾಖೆಯನ್ನು ಕಾಂಗ್ರೆಸ್‌ಗೆ ತಾಕತ್ತಿದ್ದರೆ ಮುಟ್ಟಲಿ ನೋಡೋಣ. ಹಿಂದುಗಳ ಧ್ವನಿಯಾಗಿರುವ ಆರ್‌ಎಸ್‌ಎಸ್, ಭಜರಂಗದಳ ತಂಟೆಗೆ ಹೋದರೆ ಮೂರು ತಿಂಗಳಲ್ಲಿ ಸರಕಾರವೇ ಪತನವಾಗಲಿದೆ ಎಂದು ಆರ್. ಅಶೋಕ್ ಎಚ್ಚರಿಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಿಮ್ಮ ಅಪ್ಪ, ಅಜ್ಜಿ, ಮುತ್ತಾತ್ತನ ಕೈಯಲ್ಲೇ ಆಗಿಲ್ಲ. ಈ ದೇಶದ ಪ್ರಧಾನಿಗಳು ಆರ್‌ಎಸ್‌ಎಸ್‌ನವರು. ಆರ್‌ಎಸ್‌ಎಸ್ ಒಂದು ಹಿಂದೂಗಳ ಧ್ವನಿ ಎಂದ ಅವರು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿದೆ. ಐದು ಉಚಿತ ಗ್ಯಾರಂಟಿಗಳನ್ನು ಕೊಡಮಾಡಲಿದೆ. ದಯವಿಟ್ಟು ಕಾಂಗ್ರೆಸ್‌ನವರು ಹೇಳಿದ್ದನ್ನು ಜನರು ಪಾಲಿಸಿ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸ್ವತಃ ಹೇಳಿದಂತೆಯೇ ಯಾರೊಬ್ಬರೂ ಕರೆಂಟ್ ಬಿಲ್ ಕಟ್ಟಬೇಡಿ ಎಂದು ಕರೆ ನೀಡಿದರು.

ಕಾಂಗ್ರೆಸ್ ವಿರೋಧ : ಹೆಚ್.ಡಿ.ಕೆ. ಗರಂ

ಬೆAಗಳೂರು, ಮೇ ೨೬: ನೂತನ ಸಂಸತ್ ಭವನ ಉದ್ಘಾಟನೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಷ್ಟçಪತಿಗಳ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇದ್ದಕ್ಕಿದ್ದಂತೆ ಪ್ರೀತಿ, ಗೌರವ ಬಂದಿದೆ. ಅಷ್ಟೊಂದು ಗೌರವ ಇರುವ ಕಾಂಗ್ರೆಸ್, ದ್ರೌಪದಿ ಮುರ್ಮು ವಿರುದ್ಧವೇಕೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು? ಈಗ ಬಿಜೆಪಿ ಆದಿವಾಸಿಗಳನ್ನು ಅವಮಾನಿಸುತ್ತಿದ್ದಾರೆಂದು ಆರೋಪಿಸುತ್ತಿದೆ. ಇದೆಲ್ಲವೂ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಸಮಾಜದ ಒಂದು ವರ್ಗದ ಮತಗಳನ್ನು ಗಳಿಸಲು ಮಾಡುತ್ತಿರುವ ಪ್ರಯತ್ನಗಳಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ. ದೇಶದ ತೆರಿಗೆ ಹಣದಿಂದ ಕಟ್ಟಿರುವ ಭವನ. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಧ್ವನಿ ಎತ್ತಿದ್ದಾರೆ. ಕರ್ನಾಟಕದ ವಿಕಾಸ ಸೌಧವನ್ನು ಅಂದಿನ ಮುಖ್ಯಮಂತ್ರಿ ಉದ್ಘಾಟನೆ ಮಾಡಿದ್ದರು. ಕಾಂಗ್ರೆಸ್ ಪಕ್ಷ ಈಗ ರಾಷ್ಟçಪತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಸತ್ಯೇಂದ್ರ ಜೈನ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು

ನವದೆಹಲಿ, ಮೇ ೨೬: ಆಮ್ ಆದ್ಮಿ ಪಾರ್ಟಿ ನಾಯಕ ದೆಹಲಿ ಸರ್ಕಾರದ ಮಾಜಿ ಸಚಿವ ಸತ್ಯೇಂದ್ರ ಜೈನ್‌ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅನಾರೋಗ್ಯ ಕಾರಣ ೬ ವಾರಗಳ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ಸುಪ್ರೀಂ ಕೋರ್ಟ್ ನೀಡಿರುವ ಷರತ್ತುಬದ್ಧ ಜಾಮೀನು ಪ್ರಕಾರ, ಸತ್ಯೇಂದ್ರ ಜೈನ್ ದೆಹಲಿ ತೊರೆದು ಹೋಗುವಂತಿಲ್ಲ, ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಹೇಳಿಕೆ ನೀಡುವಂತಿಲ್ಲ. ಕಳೆದ ವರ್ಷ ಮೇ ೩೦ ರಂದು ಜಾರಿ ನಿರ್ದೇಶನಾಲಯ ಸತ್ಯೇಂದ್ರ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧಿಸಿತ್ತು.

ಯುಪಿಎಸ್‌ಸಿ ಪರೀಕ್ಷೆ: ಬೆಳಿಗ್ಗೆಯಿಂದಲೇ ಮೆಟ್ರೋ ರೈಲುಗಳ ಸಂಚಾರ

ಬೆAಗಳೂರು, ಮೇ ೨೬: ತಾ. ೨೮ ರಂದು ಭಾನುವಾರ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ನಡೆಯುತ್ತಿರುವುದರಿಂದ ಅಂದು ಮೆಟ್ರೋ ರೈಲುಗಳ ಸಂಚಾರ ಬೆಳಿಗ್ಗೆ ೬ ಗಂಟೆಯಿAದಲೇ ಪ್ರಾರಂಭವಾಗಲಿವೆ. ಪ್ರತಿ ಭಾನುವಾರ ಬೆಳಿಗ್ಗೆ ೭ ಗಂಟೆಯಿAದ ರೈಲುಗಳ ಸಂಚಾರ ಆರಂಭವಾಗುತಿತ್ತು. ಆದರೆ, ಪರೀಕ್ಷೆ ಹಿನ್ನೆಲೆಯಲ್ಲಿ ಒಂದು ಗಂಟೆ ಮುಂಚಿತವಾಗಿ ರೈಲುಗಳ ಸಂಚಾರವನ್ನು ಬಿಎಂಆರ್‌ಸಿಎಲ್ ಆರಂಭಿಸಲು ನಿರ್ಧರಿಸಿದೆ. ಈ ಕುರಿತು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದು, ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಒಂದು ಗಂಟೆ ಮುಂಚಿತವಾಗಿ ರೈಲುಗಳ ಸಂಚಾರವನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಬೈಯಪ್ಪನಹಳ್ಳಿ, ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ, ಬೈಯಪ್ಪನಹಳ್ಳಿ, ಕೆ.ಆರ್. ಪುರ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳಿಂದ ಮೊದಲ ರೈಲುಗಳು ಬೆಳಿಗ್ಗೆ ೬ ಗಂಟೆಗೆ ಹೊರಡಲಿವೆ ಎಂದು ಅವರು ತಿಳಿಸಿದ್ದಾರೆ.